ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣ್ಯತಿಥಿಯ ನೆಪದಲ್ಲಿ ಚುನಾವಣೆಯ ಲಾಭ: ಹೊಸ ವಿವಾದದಲ್ಲಿ ಕಾಂಗ್ರೆಸ್

|
Google Oneindia Kannada News

ನವದೆಹಲಿ, ಜೂನ್ 2: ಮಧ್ಯಪ್ರದೇಶದ ಮಾಜಿ ಉಪಮುಖ್ಯಮಂತ್ರಿ ಸುಭಾಷ್ ಯಾದವ್ ಅವರ ಪುಣ್ಯತಿಥಿಗೆ ಆಗಮಿಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಬರೆದಿರುವ ಪತ್ರ ವಿವಾದ ಸೃಷ್ಟಿಸಿದೆ.

ಜೂನ್ 26ರಂದು ನಡೆಯಲಿರುವ ಹಿರಿಯ ಕಾಂಗ್ರೆಸ್ ಮುಖಂಡ ಸುಭಾಷ್ ಯಾದವ್ ಅವರ ಪುಣ್ಯತಿಥಿಯಲ್ಲಿ ಪಾಲ್ಗೊಳ್ಳುವಂತೆ ಕಮಲ್‌ನಾಥ್ ಪತ್ರದಲ್ಲಿ ಆಹ್ವಾನ ನೀಡಿದ್ದಾರೆ.

ಕಪ್ಪು ಹಣದ ಬಗ್ಗೆ ತಿಳಿಸಿ, 5 ಕೋಟಿ ರುಪಾಯಿ ಜೇಬಿಗೆ ಇಳಿಸಿ!ಕಪ್ಪು ಹಣದ ಬಗ್ಗೆ ತಿಳಿಸಿ, 5 ಕೋಟಿ ರುಪಾಯಿ ಜೇಬಿಗೆ ಇಳಿಸಿ!

ಆದರೆ, ಅದರಲ್ಲಿ ಅವರು ಕಾರ್ಯಕ್ರಮದಲ್ಲಿ ಹಿಂದುಳಿದ ಸಮುದಾಯದ ಭಾರಿ ಸಂಖ್ಯೆಯ ಜನರು ಭಾಗವಹಿಸಲಿರುವುದರಿಂದ ಇದು ಚುನಾವಣೆಗೆ ಲಾಭವಾಗಬಹುದು ಎಂಬ ಅಂಶವನ್ನು ಸೇರ್ಪಡೆ ಮಾಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

kamalnath wrote rahul gandhi to attend death anniversary of a leader to draw up voters

'ದಿವಂಗತ ಸುಭಾಷ್ ಯಾದವ್ ಅವರು ಮಧ್ಯಪ್ರದೇಶದ ಮಾಜಿ ಉಪಮುಖ್ಯಮಂತ್ರಿ ಮತ್ತು ರಾಜ್ಯದ ಪ್ರಭಾವಿ ಒಬಿಸಿ ಮುಖಂಡರಾಗಿದ್ದರು. ಖರ್ಗೋನ್ ಜಿಲ್ಲೆಯ ಕಸ್ರಾವತ್‌ನಲ್ಲಿ ಅವರ ಪುಣ್ಯತಿಥಿಯನ್ನು ಜೂನ್ 26ರಂದು ನಡೆಸಲಾಗುತ್ತಿದೆ.

ಮಧ್ಯಪ್ರದೇಶದಲ್ಲಿ ಒಬಿಸಿ ಜನಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ. ಚುನಾವಣೆಯ ಗುಂಗಿನಲ್ಲಿ ಇರುವ ನಮಗೆ 61 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಳ್ಳುವ ನಿಮದ್-ಮಾಲ್ವಾ ಪ್ರದೇಶದಲ್ಲಿ ಇದು ಮಹತ್ವದ ಕಾರ್ಯಕ್ರಮವಾಗಲಿದೆ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.

ನಿಲ್ಲದ ಬೆಲೆ ಏರಿಕೆ ಪರ್ವ ಗ್ಯಾಸ್ ಸಿಲಿಂಡರ್ 2 ರೂಪಾಯಿ ಏರಿಕೆನಿಲ್ಲದ ಬೆಲೆ ಏರಿಕೆ ಪರ್ವ ಗ್ಯಾಸ್ ಸಿಲಿಂಡರ್ 2 ರೂಪಾಯಿ ಏರಿಕೆ

ಇದರಲ್ಲಿ ನೀವು ಪಾಲ್ಗೊಂಡರೆ ಇದನ್ನು 'ಸಂವಿಧಾನ ಬಚಾವೊ-ದೇಶ್ ಬಚಾವೊ' ಕಾರ್ಯಕ್ರಮ ಎಂದು ಹೆಸರಿಸಬಹುದು. ಈ ಕಾರ್ಯಕ್ರಮದಲ್ಲಿ ನಿಮ್ಮ ಭಾಗವಹಿಸುವಿಕೆ ಬಹಳ ಮುಖ್ಯವಾಗಿದೆ ಎಂದಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಸುಭಾಷ್ ಯಾದವ್ ಅವರು 2013ರ ಜೂನ್ 26ರಂದು ನವದೆಹಲಿಯಲ್ಲಿ ದೀರ್ಘಕಾಲದ ಅನಾರೋಗ್ಯದ ಬಳಿಕ ನಿಧನರಾಗಿದ್ದರು. ಮಧ್ಯಪ್ರದೇಶದಲ್ಲಿ 15 ವರ್ಷಗಳಿಂದ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ.

English summary
Senior Congress leader Kamal Nath wrote letter ro Rahul Gandhi seeking his participation in the death anniversary of former deputy chief minister Subhash Yadav to draw up OBC people for upcoming Madhya Pradesh assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X