ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ರೈಲು ಅಪಘಾತ: 23 ಸಾವು, 400 ಜನರಿಗೆ ಗಾಯ

ಉತ್ತರ ಪ್ರದೇಶದ ಮುಜಫ್ಫರ್ ನಗರದ ಬಳಿ ರೈಲು ಅಪಘಾತ. ಕಳಿಂಗಾ-ಉಟ್ಕಳ್ ಪ್ರಯಾಣಿಕರ ರೈಲು ಅಪಘಾತ. ದುರ್ಘಟನೆಯಲ್ಲಿ ಕನಿಷ್ಠ 23 ಜನರು ಸಾವು, 400 ಜನರಿಗೆ ಗಾಯ.

|
Google Oneindia Kannada News

ನವದೆಹಲಿ, ಆಗಸ್ಟ್ 19: ಉತ್ತರ ಪ್ರದೇಶದ ಮುಜಫ್ಫರ್ ನಗರದ ಬಳಿ ಶನಿವಾರ ಸಂಜೆ ಸಂಭವಿಸಿರುವ ರೈಲು ಅಪಘಾತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆಯಲ್ಲಿ 23 ಜನರು ಮೃತಪಟ್ಟು 400 ಜನರು ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ, ಮುಜಫ್ಫರ್ ನಗರದ ಕಟೌಲಿಯಲ್ಲಿ ಈ ರೈಲು ಅಪಘಾತ ನಡೆದಿದೆ. ಹರಿದ್ವಾರದಿಂದ ಪುರಿ ನಡುವೆ ಸಂಚರಿಸುತ್ತಿದ್ದ ಈ ರೈಲಿನ ಆರು ಬೋಗಿಗಳು ಹಳಿ ತಪ್ಪಿದ್ದೇ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ. ಅಪಘಾತದ ಕಾರಣ ತಿಳಿದು ಬಂದಿಲ್ಲ.

Kalinga Utkal express derails in Muzaffarnagar, 5 dead, 34 injured

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿಆರ್ ಎಫ್) ಸ್ಥಳಕ್ಕೆ ಆಗಮಿಸಿದ್ದು, ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಇದಕ್ಕೆ ಸ್ಥಳೀಯ ಪೊಲೀಸರೂ ಕೈ ಜೋಡಿಸಿದ್ದಾರೆ.

Kalinga Utkal express derails in Muzaffarnagar, 5 dead, 34 injured

ಘಟನೆಯ ಬಗ್ಗೆ ಟ್ವಿಟ್ಟರ್ ನಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು, ತಾವೇ ಖುದ್ದಾಗಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದೇನೆ. ಕೇಂದ್ರ ಸರ್ಕಾರದ ಹಿರಿಯರಿಂದ ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಲು ಸೂಚನೆ ಬಂದಿದೆ. ಹಾಗಾಗಿ, ನಾನು ಇನ್ನು ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ಹೊರಡುವುದಾಗಿ ತಿಳಿಸಿದ್ದರು.

ಘಟನೆಯ ಬಗ್ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

English summary
In a major train accident, at least 5 passengers have been died and 34 injured after six coaches of 18477 Kalinga-Utkal Express derailed today near Muzaffarnagar, Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X