ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಕರ ಬಿಸಿಲು : ಇತರ ನಗರಗಳೊಂದಿಗೆ ಕಲಬುರಗಿ ಪೈಪೋಟಿ

By Prasad
|
Google Oneindia Kannada News

ಬೆಂಗಳೂರು, ಏಪ್ರಿಲ್ 15 : ಬರಗಾಲಕ್ಕೆ ಸಂಬಂಧಿಸಿದಂತೆ ದೇಶದ ಹಲವಾರು ರಾಜ್ಯಗಳೊಂದಿಗೆ ಪೈಪೋಟಿಗೆ ಬಿದ್ದಿರುವ ಕರ್ನಾಟಕ, ಈ ವರ್ಷ ಬಿಸಿಲಿಗೆ ಸಂಬಂಧಿಸಿದಂತೆಯೂ ಇತರ ರಾಜ್ಯಗಳೊಂದಿಗೆ ಜಿದ್ದಿಗೆ ಬಿದ್ದಿದೆ.

ಬಿಸಿಲೇರುತ್ತಿದ್ದಂತೆ ಕರ್ನಾಟಕದ ಕೆಲ ಊರುಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿ ಸಮಾಧಾನ ತಂದಿದ್ದರೂ, ನಿಗಿನಿಗಿ ಕೆಂಡದಂತಾಗಿರುವ ಕಲಬುರ್ಗಿ ನಗರ ಕಳೆದ ಹಲವಾರು ದಿನಗಳಿಂದ ತನ್ನ ಅಗ್ರಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಕಲಬುರಗಿಯಲ್ಲಿ ಅತ್ಯಧಿಕ ತಾಪಮಾನ 42.1 ಡಿಗ್ರಿ ದಾಖಲಾಗಿದೆ.

Kalaburagi misses chance to be hottest place in India

ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 2 ಸೆಂ.ಮೀ. ಮತ್ತು ನಾಪೋಕ್ಲುವಿನಲ್ಲಿ 1 ಸೆಂ.ಮೀ. ಮಳೆಯಾಗಿದ್ದು ಬಿಟ್ಟರೆ, ರಾಜ್ಯದ ಉಳಿದ ಭಾಗಗಳು ಬಾಯಾರಿ ನಿಂತಿವೆ. ಇನ್ನು ಮುಂದಿನ ಐದು ದಿನಗಳಲ್ಲಿ ರಾಜ್ಯದಲ್ಲಿ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ತಿಳಿಸಿದೆ.

ಈ ನಡುವೆ ಸ್ಕೈಮೆಟ್ ವೆದರ್ ವೆಬ್ ಸೈಟ್ ದೇಶದಲ್ಲಿ ಅತಿಹೆಚ್ಚು ತಾಪಮಾನ ದಾಖಲಿಸಿರುವ 10 ಊರು ಮತ್ತು ರಾಜ್ಯಗಳ ಪಟ್ಟಿಯನ್ನು ರೆಡಿ ಮಾಡಿದೆ. ಕರ್ನಾಟಕ ಸ್ವಲ್ಪದರಲ್ಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.

ಆ ಊರು, ರಾಜ್ಯ ಮತ್ತು ಅಲ್ಲಿ ದಾಖಲಾಗಿರುವ ತಾಪಮಾನ ಕೆಳಗಿನಂತಿವೆ.

ಊರು ರಾಜ್ಯ ತಾಪಮಾನ
ಫಲೋಡಿ ರಾಜಸ್ಥಾನ 46
ಚಂದ್ರಾಪುರ ಮಹಾರಾಷ್ಟ್ರ 45.8
ಜೈಸಲ್ಮೇರ್ ರಾಜಸ್ಥಾನ 45.6
ಕಾಂಡ್ಲಾ ಗುಜರಾತ್ 45.4
ಬರ್ಮರ್ ರಾಜಸ್ಥಾನ 45.4
ಸುರೇಂದ್ರನಗರ ಗುಜರಾತ್ 45.3
ಇದಾರ್ ಗುಜರಾತ್ 45
ಬುಂಡಿ ರಾಜಸ್ಥಾನ 45
ಬಿಕನೇರ್ ರಾಜಸ್ಥಾನ 44.5
ನಾಗಪುರ ಮಹಾರಾಷ್ಟ್ರ 44.4

ಕೇರಳದಲ್ಲಿ ಮಳೆ : ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಸಂಭವಿಸಿರುವುದರಿಂದ ಕೇಳದ ಹಲವಾರು ಭಾಗಗಳಲ್ಲಿ ಮಳೆಯಾಗುತ್ತಿದೆ. ಮಳೆ ಕೇರಳದಲ್ಲಿಯೂ ಆಗುವ ಸಂಭವನೀಯತೆ ಇದೆ ಎಂದು ಸ್ಕೈಮೆಟ್ ವೆದರ್ ವರದಿ ಮಾಡಿದೆ.

English summary
Kalaburagi has missed the chance to be one of the top 10 hottest place in India during this Summer. Phalodi in Rajasthan has recorded the highest temperature in India on Saturday with 46 degree celcius. Kalaburagi in Karnataka has recorded 42.1 degree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X