ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊಟ್ಟ ಮೊದಲ ಮಾನವ ರಹಿತ ಗಗನಯಾನ 2022ಕ್ಕೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಜುಲೈ 23: ಭಾರತದ ಮೊಟ್ಟ ಮೊದಲ ಮಾನವ ರಹಿತ ಗಗನಯಾನವನ್ನು 2022ಕ್ಕೆ ಮುಂದೂಡಲಾಗಿದೆ.

2021ರ ಡಿಸೆಂಬರ್‌ನಲ್ಲಿ ಗಗನಯಾನಕ್ಕೆ ಚಾಲನೆ ದೊರೆಯಬೇಕಿತ್ತು, ಆದರೆ 2022ರ ಜೂನ್ ಒಳಗೆ ಗಗನಯಾನ ಆರಂಭಗೊಳ್ಳಲಿದೆ ಎಂದು ಇಸ್ರೋ ಚೇರ್‌ಮೆನ್ ಕೆ ಶಿವನ್ ತಿಳಿಸಿದ್ದಾರೆ.

 ಇದೇ ಡಿಸೆಂಬರ್‌ಗೆ ಭಾರತದ ಪ್ರಥಮ ಮಾನವರಹಿತ ಗಗನಯಾನ ಇದೇ ಡಿಸೆಂಬರ್‌ಗೆ ಭಾರತದ ಪ್ರಥಮ ಮಾನವರಹಿತ ಗಗನಯಾನ

ಈ ಯೋಜನೆಗೆ 2020ರ ಡಿಸೆಂಬರ್ ನಲ್ಲೇ ಚಾಲನೆ ನೀಡಬೇಕಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಈ ಯೋಜನೆ ಒಂದು ವರ್ಷ ಮುಂದೂಡಲಾಗಿತ್ತು, ಇದೀಗ ಅದೇ ಕಾರಣ ನೀಡಿ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಗಗನಯಾನವನ್ನು ಮುಂದೂಡಲಾಗಿದೆ.

K Sivan Says Gaganyaan 1st Uncrewed Mission Unlikely Before June 2022

ಗಗನಯಾನ ಯೋಜನೆಗೆ 10,000 ಕೋಟಿ ರೂಗಳನ್ನು ಮೀಸಲಿಡಲಾಗಿದ್ದು, 2022ರ ವೇಳೆಗೆ ಭಾರತದ ಮೂರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಅಧ್ಯಯನ ನಡೆಸಲಾಗುತ್ತದೆ .

ಇನ್ನು 2022ಕ್ಕೆ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದ್ದು, ಈ ಮಹತ್ವದ ವರ್ಷದಲ್ಲೇ ಭಾರತದ ಮಹತ್ವಾಕಾಂಕ್ಷಿ ಗಗನಯಾನ ಕೂಡ ಆರಂಭವಾಗಲಿದೆ.
ಈಗಾಗಲೇ ಇದೇ ವಿಚಾರವಾಗಿ ಇಸ್ರೋ ಕೂಡ ಕಾರ್ಯನಿರತವಾಗಿದ್ದು, ಮೊದಲು ಮಾನವ ರಹಿತ ಗಗನಯಾನ ಯೋಜನೆಯನ್ನು 2020ರ ಡಿಸೆಂಬರ್ ನಲ್ಲಿ ಚಾಲನೆ ಮಾಡಲು ಉದ್ದೇಶಿಸಲಾಗಿತ್ತು.

ಎರಡನೇ ಮಾನವ ರಹಿತ ಯೋಜನೆಯನ್ನು 2021ರ ಜೂನ್ ನಲ್ಲಿ ಯೋಜಿಸಲು ಉದ್ದೇಶಿಸಲಾಗಿತ್ತು. ಯೋಜನೆಯ ಪ್ರಮುಖ ಮತ್ತು ನಿರ್ಣಾಯಕ ಮಾನವ ಸಹಿತ ಗಗನಯಾನ ಯೋಜನೆಯನ್ನು ಆರು ತಿಂಗಳ ಬಳಿಕ ಅಂದರೆ 2021ರ ಡಿಸೆಂಬರ್ ನಲ್ಲಿ ಚಾಲನೆ ನೀಡಲು ಯೋಜಿಸಲಾಗಿತ್ತು. ಇದೀಗ ಈ ಯೋಜನೆಯ ಡೆಡ್ ಲೈನ್ 2022ಕ್ಕೆ ಮುಂದೂಡಿದೆ.

ಕೇವಲ ಗಗನಯಾನ ಮಾತ್ರವಲ್ಲದೇ ಚಂದ್ರಯಾನ-3 ಸೇರಿದಂತೆ ಇಸ್ರೋದ ಬಹಳಷ್ಟು ಯೋಜನೆಗಳೂ ಕೂಡ ಕೊರೋನಾ ಸಾಂಕ್ರಾಮಿಕದಿಂದಾಗಿ ಮುಂದೂಡಲ್ಪಟ್ಟಿವೆ.

ಆಸ್ಟ್ರೋನಾಟ್‌ಗಳು ಎದುರಿಸುವ ದೈಹಿಕ- ಆರೋಗ್ಯ ಸವಾಲುಗಳು ಹಲವು. ಗಗನನೌಕೆ ಭೂಮಿ ಬಿಡುವ ಹಾಗೂ ಮರಳಿ ಭೂಮಿ ಸೇರುವ ಸಂದರ್ಭದಲ್ಲಿ ಯಾತ್ರಿಗಳ ದೇಹದ ಮೇಲೆ ತೂಕದ ನಾನಾ ವ್ಯತ್ಯಾಸಗಳಾಗುತ್ತವೆ. ಭೂಮಿಯ ಮೇಲೆ ಅವರು ಅನುಭವಿಸುವ ಗುರುತ್ವಾಕರ್ಷಣ ಬಲ, ಯಾತ್ರೆಯ ವೇಳೆಯಲ್ಲಿ ಹೆಚ್ಚಾಗುತ್ತದೆ.

ಶೂನ್ಯ ಗುರುತ್ವಬಲದ ಪ್ರದೇಶವನ್ನು ಮುಟ್ಟಿದಾಗ ಯಾತ್ರಿಗಳ ದೇಹದಲ್ಲಿ ತೀವ್ರ ಪಲ್ಲಟಗಳಾಗುತ್ತವೆ. ರಕ್ತದ ಪರಿಚಲನೆಯಲ್ಲೇ ವ್ಯತ್ಯಾಸವಾಗುತ್ತದೆ. ಇದನ್ನು ನಿಭಾಯಿಸುವ ಸರಿಯಾದ ತರಬೇತಿ ಹೊಂದಿಲ್ಲದಿದ್ದರೆ ಗಗನ್ನಾಟ್‌ಗಳು ಅಲ್ಲೇ ಕೋಮಾಗೆ ಹೋಗಬಹುದು.

English summary
The first uncrewed mission part of the Gaganyaan programme, which ISRO was hoping to launch by December this year has been postponed to next year. In fact, it is unlikely to be launched before June 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X