ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಅಟಾರ್ನಿ ಜನರಲ್ ಆಗಿ ಕೆಕೆ ವೇಣುಗೋಪಾಲ್?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 27: ಹಿರಿಯ ನ್ಯಾಯವಾದಿ ಮತ್ತು ಸಂವಿಧಾನ ತಜ್ಞ ಕೆಕೆ ವೇಣುಗೋಪಾಲ್ ಮುಂದಿನ ಅಟಾರ್ನಿ ಜನರಲ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

ಹಾಲಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ತಮ್ಮ ಅವಧಿ ಮುಂದುವರಿಸಲು ನಿರಾಕರಿಸಿರುವುದರಿಂದ ಅವರ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳನ್ನು ಕೇಂದ್ರ ಸರಕಾರ ಹುಡುಕಾಟ ನಡೆಸುತ್ತಿದೆ.

ಹಲವು ಸುತ್ತಿನ ಮಾತುಕತೆಗಳ ನಂತರ ಹಿರಿಯರಾದ 86 ವರ್ಷ ವಯಸ್ಸಿನ ವೇಣುಗೋಪಾಲ್ ರ ನೇಮಕಕ್ಕೆ ಸರಕಾರ ಚಿಂತನೆ ನಡೆಸಿದೆ.

K K Venugopal is the next Attorney General of India?

ವಿವಿಧ ವಿಷಯಗಳ ಮೇಲೆ ವೇಣುಗೋಪಾಲ್ ರಿಗೆ ಇರುವ ಜ್ಞಾನವನ್ನು ಗಮನಕ್ಕೆ ತೆಗೆದುಕೊಂಡು ಅವರ ನೇಮಕಕ್ಕೆ ಕಾನೂನು ಇಲಾಖೆ ಮುಂದಾಗಿದೆ.

1960ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲು ಆರಂಭಿಸಿದ ವೇಣುಗೋಪಾಲ್ 50ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ. 1972ರಲ್ಲಿ ಅವರು ಹಿರಿಯ ವಕೀಲರಾಗಿ ಪದೋನ್ನತಿ ಹೊಂದಿದ್ದರು.

ಚೆನ್ನೈನಲ್ಲಿ ವಾಸವಿದ್ದ ವೇಣುಗೋಪಾಲ್ ಮೊರಾರ್ಜಿ ದೇಸಾಯಿ ಸರಕಾರದ ಅವಧಿಯಲ್ಲಿ ಅವರ ಆಹ್ವಾನವನ್ನು ಒಪ್ಪಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದರು. ಈ ವೇಳೆ ತಮ್ಮ ನೆಲೆಯನ್ನು ದೆಹಲಿಗೆ ವರ್ಗಾಯಿಸಿದ್ದರು.

English summary
Senior advocate and constitutional expert, K K Venugopal may take over as the next Attorney General of India. The government was looking for a replacement after Mukul Rohatgi stepped down from the post and refused an extension.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X