ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೇಕಿಂಗ್ ನ್ಯೂಸ್ : ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ

|
Google Oneindia Kannada News

ನವದೆಹಲಿ, ಮಾರ್ಚ್ 11 : ಮಂಗಳವಾರ ಕಾಂಗ್ರೆಸ್ ಪಕ್ಷ ತೊರೆದಿದ್ದ ಮಧ್ಯಪ್ರದೇಶದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿದರು. ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷ ಬಿಟ್ಟಿದ್ದು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ ಉಂಟಾಗಿದೆ.

Recommended Video

Madhya Pradesh Congress leader Jyotiraditya Scindia quits party | Congress | Operation Kamala

ಬುಧವಾರ ಮಧ್ಯಪ್ರದೇಶದ ಯುವ ನಾಯಕ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ (49) ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಬಿಜೆಪಿ ರಾಷ್ಟ್ರೀ ಅಧ್ಯಕ್ಷ ಜೆ. ಪಿ. ನಡ್ಡಾ ಪಕ್ಷಕ್ಕೆ ಬರಮಾಡಿಕೊಂಡರು.

ಬಿಜೆಪಿ ಸೇರುವ ಜ್ಯೋತಿರಾದಿತ್ಯ ಸಿಂಧಿಯಾ ಲೆಕ್ಕಾಚಾರವೇನು? ಬಿಜೆಪಿ ಸೇರುವ ಜ್ಯೋತಿರಾದಿತ್ಯ ಸಿಂಧಿಯಾ ಲೆಕ್ಕಾಚಾರವೇನು?

ಕಾಂಗ್ರೆಸ್‌ನ ನೇತಾರ ದಿ.ಮಾಧವರಾವ್ ಸಿಂಧಿಯಾ ಅವರ 75ನೇ ಜನ್ಮದಿನದಂದು ಅವರ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷ ತೊರೆದಿದ್ದರು. ಬುಧವಾರ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.

ಮಧ್ಯಪ್ರದೇಶ: ಮಹಾರಾಜರ ದಿನ ಹೋದವು, ಸರ್ಕಾರ ಉಳಿಯಲಿದೆ! ಮಧ್ಯಪ್ರದೇಶ: ಮಹಾರಾಜರ ದಿನ ಹೋದವು, ಸರ್ಕಾರ ಉಳಿಯಲಿದೆ!

ಎಐಸಿಸಿ ಮಾಜಿ ಅಧ್ಯಕ್ಷ ಅಪ್ತರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷದಲ್ಲಿ ಭರವಸೆ ಮೂಡಿಸಿದ್ದ ಯುವ ನಾಯಕರಾಗಿದ್ದರು. ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆಯುತ್ತಿದ್ದಂತೆ ಮಧ್ಯಪ್ರದೇಶದ 19 ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಮಧ್ಯಪ್ರದೇಶ; ಸಿಎಂ ಕಮಲನಾಥ್ ಭೇಟಿಯಾದ ಬಿಜೆಪಿ ಶಾಸಕರು!ಮಧ್ಯಪ್ರದೇಶ; ಸಿಎಂ ಕಮಲನಾಥ್ ಭೇಟಿಯಾದ ಬಿಜೆಪಿ ಶಾಸಕರು!

ಸೋನಿಯಾಗಾಂಧಿಗೆ ಪತ್ರ

ಸೋನಿಯಾಗಾಂಧಿಗೆ ಪತ್ರ

ಮಂಗಳವಾರ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನು ಜ್ಯೋತಿರಾದಿತ್ಯ ಸಿಂಧಿಯಾ ಕಳಿಸಿದ್ದರು. "ಕಾಂಗ್ರೆಸ್‌ನಲ್ಲಿದ್ದುಕೊಂಡು ದೇಶದ ಜನತೆಯ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ. 18 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿದ್ದೆ. ಈಗ ಪಕ್ಷದಿಂದ ದೂರವಾಗುವ ಸಮಯ ಬಂದಿದೆ" ಎಂದು ವಿವರಿಸಿದ್ದರು.

ಕಾಂಗ್ರೆಸ್‌ನಿಂದ ಉಚ್ಛಾಟನೆ

ಕಾಂಗ್ರೆಸ್‌ನಿಂದ ಉಚ್ಛಾಟನೆ

ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡಿದ ತಕ್ಷಣ ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಅವರ ರಾಜೀನಾಮೆ ಪತ್ರ 12.20ಕ್ಕೆ ಸೋನಿಯಾ ಗಾಂಧಿ ನಿವಾಸಕ್ಕೆ ತಲುಪಿತು. ಅದಕ್ಕೂ ಮುನ್ನವೇ ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿತ್ತು.

ಸಿಂಧಿಯಾ ಕುಟುಂಬದ ರಾಜಕೀಯ

ಸಿಂಧಿಯಾ ಕುಟುಂಬದ ರಾಜಕೀಯ

ಗ್ವಾಲಿಯರ್‌ನ ರಾಜವಂಶಸ್ಥ ಸಿಂಧಿಯಾ ಕುಟುಂಬ ದೇಶದ ರಾಜಕೀಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಜ್ಯೋತಿರಾದಿತ್ಯ ಸಿಂಧಿಯಾ ಅತ್ತೆ ವಸುಂಧರಾ ರಾಜೆ ಬಿಜೆಪಿಯಲ್ಲಿದ್ದಾರೆ. ವಸುಂಧರಾ ರಾಜೆ 10 ವರ್ಷಗಳ ಕಾಲ ರಾಜಸ್ಥಾನ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ತಂದೆ 1971ರಲ್ಲಿ ಜನಸಂಘದಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಬಂದಿದ್ದರು. ಬಳಿಕ ಕಾಂಗ್ರೆಸ್ ಸೇರಿದ್ದರು.

4 ಬಾರಿ ಸಂಸದರು

4 ಬಾರಿ ಸಂಸದರು

ಜ್ಯೋತಿರಾದಿತ್ಯ ಸಿಂಧಿಯಾ 4 ಬಾರಿ ಕಾಂಗ್ರೆಸ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಕೇಂದ್ರ ಸಚಿವರಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಗುನಾ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಇವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು.

English summary
Jyotiraditya Scindia who quit the Congress on March 10, 2020 joined BJP in the presence of party president J.P.Nadda at party headquarters, New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X