6 ತಿಂಗಳ ಜೈಲು ಶಿಕ್ಷೆಗೆ ಗುರಿಯಾದ ನ್ಯಾ. ಕರ್ಣನ್ ವಿದೇಶಕ್ಕೆ ಪಲಾಯನ?

Posted By:
Subscribe to Oneindia Kannada

ಚೆನ್ನೈ, ಮೇ 11 : ಸುಪ್ರೀಂ ಕೋರ್ಟ್ ನಿಂದ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಶ್ಚಿಮ ಬಂಗಾಳ ಹೈಕೋರ್ಟ್ ನ ನ್ಯಾಯಮೂರ್ತಿ ಕರ್ಣನ್ ಅವರನ್ನು ಬಂಧಿಸಲು ಚೆನ್ನೈಗೆ ತೆರಳಿದ್ದ ಪಶ್ಚಿಮ ಬಂಗಾಳದ ಪೊಲೀಸರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.

ಕರ್ಣನ್‌ ಅವರು ಭಾರತದ ಗಡಿ ದಾಟಿ ನೇಪಾಳ ಅಥವಾ ಬಾಂಗ್ಲಾದೇಶಕ್ಕೆ ತೆರಳಿರುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.[ಬಂಧನ ಆದೇಶದ ವಿರುದ್ಧ ಸುಪ್ರೀಂಗೆ ನ್ಯಾ. ಕರ್ಣನ್ ಮೇಲ್ಮನವಿ]

Justice Karnan has left the country after being sentenced to 6 months in jail

ಕರ್ಣನ್‌ ಅವರು ಬುಧವಾರ ಆಂಧ್ರಪ್ರದೇಶದ ಕಾಳಹಸ್ತಿ ದೇವಾಲಯಕ್ಕೆ ತೆರಳಿ, ನಂತರ ಉತ್ತರ ಭಾರತದ ಕಡೆ ಪ್ರಯಾಣ ಬೆಳೆಸಿ ನೇಪಾಳ ಅಥವಾ ಬಾಂಗ್ಲಾದೇಶಕ್ಕೆ ತೆರಳಿರಬಹುದು ಎನ್ನಲಾಗುತ್ತಿದೆ.

ನ್ಯಾ. ಕರ್ಣನ್ ಅವರ ಕಾರ್ಯಕ್ಷೇತ್ರವಾದ ಕೋಲ್ಕತ್ತಾದಲ್ಲಿ ಪೊಲೀಸರು ಅವರಿಗಾಗಿ ಜಾಲಾಡಿದ್ದರು. ಆದರೂ ಪತ್ತೆಯಾಗಿಲ್ಲ. ಇದರಿಂದ ಇವರ ಮೂಲಸ್ಥಳವಾದ ಚೆನ್ನೈಗೆ ತೆರಳಿ ಹುಡುಕಾಡಿದರೂ ಕರ್ಣನ್ ಪತ್ತೆಯಾಗಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Calcutta high court judge CS Karnan might have escaped to Nepal or Bangladesh and his team is preparing to approach the President for relief, his legal adviser said on Thursday, the latest twist in an unprecedented face-off in India’s higher judiciary.
Please Wait while comments are loading...