ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರಣಯ್‌ಗೆ ನ್ಯಾಯ ದೊರಕಿಸಿ': ಫೇಸ್‌ಬುಕ್‌ನಲ್ಲಿ ಬೃಹತ್ ಅಭಿಯಾನ

|
Google Oneindia Kannada News

ಮಿರ್ಯಾಲಗುಡ, ಸೆಪ್ಟೆಂಬರ್ 18: ಮೇಲ್ವರ್ಗದ ಯುವತಿಯನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಜೀವ ಕಳೆದುಕೊಂಡ ತೆಲಂಗಾಣದ ಮಿರ್ಯಾಲಗುಡದ ಕ್ರೈಸ್ತ ದಲಿತ ಪ್ರಣಯ್‌ಗೆ ನ್ಯಾಯ ದೊರಕಿಸಿಕೊಡುವ ಹೋರಾಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರೂ ಕೈಜೋಡಿಸಿದ್ದಾರೆ.

'ಜಸ್ಟೀಸ್ ಫಾರ್ ಪ್ರಣಯ್' ಎಂಬ ಫೇಸ್‌ಬುಕ್‌ ಪುಟವನ್ನು ತೆರೆಯಲಾಗಿದ್ದು, ಎರಡು ದಿನದಲ್ಲಿಯೇ 80 ಸಾವಿರಕ್ಕೂ ಹೆಚ್ಚು ಮಂದಿ ಪುಟವನ್ನು ಮೆಚ್ಚಿಕೊಂಡಿದ್ದಾರೆ.

ಪತಿಯನ್ನು ಕೊಂದಿದ್ದು ಜಾತಿಪದ್ಧತಿ: ಗರ್ಭಿಣಿ ಪತ್ನಿಯ ಭಾವುಕ ನುಡಿಪತಿಯನ್ನು ಕೊಂದಿದ್ದು ಜಾತಿಪದ್ಧತಿ: ಗರ್ಭಿಣಿ ಪತ್ನಿಯ ಭಾವುಕ ನುಡಿ

ಜಾತಿಯ ಕಾರಣಕ್ಕೆ ತನ್ನ ಪತಿಯನ್ನು ಸಾಯಿಸಿದ ಘಟನೆಯ ವಿರುದ್ಧ ಹೋರಾಟ ನಡೆಸಲು ಅಮೃತಾ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾರೆ. ಅವರ ವೈಯಕ್ತಿಕ ಖಾತೆ ಜತೆ ಸಂಪರ್ಕಹೊಂದಿರುವ ಪುಟಕ್ಕೆ ಬೆಂಬಲ ನೀಡಲು ದೇಶದ ಮೂಲೆ ಮೂಲೆಯ ಜನರು ಮುಂದಾಗುತ್ತಿದ್ದಾರೆ.

Justice for pranay Facebook page campaign

ತಮಗೆ ಸಂತಾಪಗಳನ್ನು ತಿಳಿಸುವ ಮತ್ತು ಸ್ಥೈರ್ಯ ತುಂಬುವ ಲೆಕ್ಕವಿಲ್ಲದಷ್ಟು ಸಂದೇಶಗಳು ಫೇಸ್ಬುಕ್‌ನಲ್ಲಿ ಬರುತ್ತಿರುವುದಾಗಿ ಅಮೃತಾ ತಿಳಿಸಿದ್ದಾರೆ. ಪ್ರಣಯ್ ಜಾತಿಪದ್ಧತಿಯನ್ನು ಯಾವಾಗಲೂ ವಿರೋಧಿಸುತ್ತಿದ್ದರು. ಈ ಆಂದೋಲನದ ಮೂಲಕ ಅದಕ್ಕೆ ಅಂತ್ಯ ಕಾಣಿಸಲು ಬಯಸಿರುವುದಾಗಿ ಹೇಳಿದ್ದಾರೆ.

ಪ್ರಣಯ್ ಹತ್ಯೆ ಭೇದಿಸಿದ ಪೊಲೀಸ್! ಕೊಲೆಗಾರನಿಗೆ 1 ಕೋಟಿ ರು. ಸುಪಾರಿ!ಪ್ರಣಯ್ ಹತ್ಯೆ ಭೇದಿಸಿದ ಪೊಲೀಸ್! ಕೊಲೆಗಾರನಿಗೆ 1 ಕೋಟಿ ರು. ಸುಪಾರಿ!

ಪ್ರಣಯ್ ಅವರಿಗೆ ನ್ಯಾಯ ದೊರಕಿಸಿಕೊಡುವಂತೆ ರಾಜ್ಯದಾದ್ಯಂತ ನಡೆದ ಪ್ರತಿಭಟನೆಗಳ ಫೋಟೊಗಳನ್ನು ಈ ಪುಟದಲ್ಲಿ ಪ್ರಕಟಿಸಲಾಗಿದೆ. ಇದಲ್ಲದೆ 'ಜಸ್ಟೀಸ್ ಫಾರ್ ಪ್ರಣಯ್' ಎಂಬ ಶೀರ್ಷಿಕೆಯ ಇನ್ನೂ ಎರಡು ಪುಟಗಳು ಸೃಷ್ಟಿಯಾಗಿವೆ.

'ಗರ್ಭಪಾತಕ್ಕೆ ಅಪ್ಪ ಒತ್ತಾಯಿಸಿದ್ದು ಯಾಕೆ ಅಂತ ಈಗ ತಿಳಿಯುತ್ತಿದೆ!''ಗರ್ಭಪಾತಕ್ಕೆ ಅಪ್ಪ ಒತ್ತಾಯಿಸಿದ್ದು ಯಾಕೆ ಅಂತ ಈಗ ತಿಳಿಯುತ್ತಿದೆ!'

Justice for pranay Facebook page campaign

ಪುಟವನ್ನು ಇಷ್ಟಪಡುವ ಬಳಕೆದಾರರು ಪ್ರಣಯ್ ಅವರ ಹತ್ಯೆ ಮಾಡಿಸಿದ ಆರೋಪ ಎದುರಿಸುತ್ತಿರುವ ಅಮೃತಾ ಅವರ ತಂದೆ ಮಾರುತಿ ರಾವ್‌ಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

English summary
Facebook pages were created for campaign against castism and demanding the Justice for Pranay who was the victim of honor killing in Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X