ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂಕೋರ್ಟ್ ಮಹಿಳಾ ನ್ಯಾಯಮೂರ್ತಿಯಾಗಿ ಜಸ್ಟೀಸ್ ಬಿವಿ ನಾಗರತ್ನ ಪ್ರಮಾಣವಚನ ಸ್ವೀಕಾರ

|
Google Oneindia Kannada News

ನವದೆಹಲಿ, ಆಗಸ್ಟ್ 31: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕವಾದ 9 ಮಂದಿ ಇಂದು ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದು, ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನಿಸಿಕೊಂಡಿದ್ದಾರೆ. ಹಾಲಿ ಸಿಜೆಐ ಎನ್. ವಿ ರಮಣ ಅವರು ನೂತನ ನ್ಯಾಯಮೂರ್ತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನಾಗಿಸುವ ಕೊಲಿಜಿಯಂ 9 ಮಂದಿ ನ್ಯಾಯಾಧೀಶರ ನೇಮಕಾತಿ ಕುರಿತಂತೆ ನೀಡಿದ್ದ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈ ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದರು.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಅಭಯಶ್ರೀನಿವಾಸ ಓಕಾ, ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಂನಾಥ್, ಸಿಕ್ಕಿಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿತೇಂದ್ರಕುಮಾರ್ ಮಹೇಶ್ವರಿ, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾಕೋಹ್ಲಿ, ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್, ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್, ಗುಜರಾತ್ ಹೈಕೋರ್ಟ್‌ನ ಬೇಲಾ ಎಂ. ತ್ರಿವೇದಿ ಮತ್ತು ಹಿರಿಯ ವಕೀಲ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಇವರುಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Justice BV Nagarathna, the first woman Chief Justice of India takes oath as a judge of the Supreme Court

ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾ. ಬಿ.ವಿ ನಾಗರತ್ನ ಅವರು ಸಿಜೆಐಯಾಗಿ ಅಲ್ಪಾವಧಿ ಹುದ್ದೆಯಲ್ಲಿರಲಿದ್ದಾರೆ. ಈ ಮೂಲಕ ತಂದೆ ಹಾಗೂ ಮಗಳಿಬ್ಬರೂ ಸಿಜೆಐ ಆದ ಮತ್ತೊಂದು ದಾಖಲೆ ಸೃಷ್ಟಿಯಾಗಿದೆ.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಬಡ್ತಿ ಪಡೆದು 36 ದಿನಗಳು ಮಾತ್ರ ಮಹತ್ವದ ಹುದ್ದೆಯಲ್ಲಿರಲಿದ್ದಾರೆ. 2027ರ ಸೆಪ್ಟೆಂಬರ್‌ 24ರಿಂದ ಅಕ್ಟೋಬರ್‌ 29ರ ವರೆಗೆ ನ್ಯಾ. ನಾಗರತ್ನ ಸಿಜೆಐ ಹುದ್ದೆಯಲ್ಲಿ ಇರಲಿದ್ದಾರೆ. ನ್ಯಾ. ಓಕಾ ಅವರು 2025ರ ಮೇನಲ್ಲಿ ನಿವೃತ್ತಿ ಹೊಂದಲಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರ ನಿವೃತ್ತ ವಯಸ್ಸು 62 ವರ್ಷವಿದ್ದರೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷವಾಗಿದೆ.

Justice BV Nagarathna, the first woman Chief Justice of India takes oath as a judge of the Supreme Court


"ದೇಶದಲ್ಲಿ ಮಹಿಳೆಯೊಬ್ಬರು ಮುಖ್ಯ ನ್ಯಾಯಮೂರ್ತಿಯಾಗಬೇಕೆಂಬ ಆಸಕ್ತಿ ಇದೆ ಹಾಗೂ ಆ ಉದ್ದೇಶವನ್ನು ಉತ್ತಮವಾಗಿ ಕಾರ್ಯಗತಗೊಳಿಸುವ ಪ್ರಯತ್ನದಲ್ಲಿದ್ದೇವೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಉತ್ತಮ ಅಭ್ಯರ್ಥಿಗಳು ಸಿಗಬೇಕು ಎನ್ನುವ ಒಂದೇ ವಿಷಯ ನಮ್ಮ ಮುಂದಿದೆ" ಎಂದು ಏಪ್ರಿಲ್ ತಿಂಗಳಿನಲ್ಲಿ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Justice BV Nagarathna, the first woman Chief Justice of India takes oath as a judge of the Supreme Court

ನ್ಯಾ. ನಾಗರತ್ನ: ನ್ಯಾ. ನಾಗರತ್ನ ಅವರು 1987ರ ಅಕ್ಟೋಬರ್ 28ರಂದು ಬೆಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದರು. ಬಳಿಕ 18 ಫೆಬ್ರವರಿ 2008 ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿರಾಗಿ ನೇಮಕಗೊಂಡರು. 2010ರ ಫೆಬ್ರವರಿ 17ರಂದು ಅವರನ್ನು ಖಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಯಿತು. ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇ ಎಸ್ ವೆಂಕಟರಾಮಯ್ಯ ಅವರ ಪುತ್ರಿ ಇವರು. 2009ರಲ್ಲಿ ನಡೆದ ವಕೀಲರ ಪ್ರತಿಭಟನೆ ವೇಳೆ ಅವರನ್ನು ಬಲವಂತವಾಗಿ ಬಂಧಿಸಿದ್ದು ಸಾಕಷ್ಟು ಜನರ ಗಮನ ಸೆಳೆಯಿತು. ನ್ಯಾಯಮೂರ್ತಿಯಾಗಿ ಕಳೆದ ಹದಿಮೂರು ವರ್ಷಗಳಲ್ಲಿ, ಅವರು ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ತಮ್ಮ ತೀರ್ಪುಗಳಲ್ಲಿ ಹಲವು ಕಠಿಣ ಅವಲೋಕನಗಳನ್ನು ಮಾಡಿದ್ದಾರೆ.

ತಂದೆ-ಮಗಳು ಇಬ್ಬರು ಸಿಜೆಐ: ನೂತನ ನ್ಯಾಯಮೂರ್ತಿ ಬಿ. ವಿ ನಾಗರತ್ನ ಅವರ ತಂದೆ ಇ.ಎಸ್ ವೆಂಕಟರಾಮಯ್ಯ ಅವರು 1989ರಲ್ಲಿ ಸಿಜೆಐ ಆಗಿ ಕರ್ತವ್ಯ ನಿರ್ವಹಿಸಿದ್ದರು. 2027ರ ಸೆಪ್ಟೆಂಬರ್ 24ರಂದು ದೇಶದ ಪ್ರಥಮ ಮಹಿಳಾ ಸಿಜೆಐಯಾಗಿ ನಾಗರತ್ನ ಅವರು ನೇಮಕವಾಗಲಿದ್ದು, ತಂದೆ ಮಗಳು ದೇಶದ ಉಚ್ಚ ನ್ಯಾಯಾಲಯದ ಮುಖ್ಯಸ್ಥ ಹುದ್ದೆಗೇರಿದ ಇತಿಹಾಸ ನಿರ್ಮಿಸಲಿದ್ದಾರೆ.

ಸೇವಾ ಹಿರಿತನದ ಆಧಾರದ ಮೇಲೆ ಸಿಜೆಐಗಳ ಪಟ್ಟಿ ತಯಾರಾಗಿದ್ದು, ಹಾಲಿ ಸಿಜೆಐ ಎನ್. ವಿ ರಮಣ 2022ರ ಆಗಸ್ಟ್ 26ರಂದು ನಿವೃತ್ತರಾಗುತ್ತಾರೆ. ಬಳಿಕ ನ್ಯಾಯಮೂರ್ತಿ ಯು. ಯು ಲಲಿತ್ ಆಗಸ್ಟ್ 27ರಿಂದ ನವೆಂಬರ್ 8ರ ವರೆಗೆ ಸಿಜೆಐ ಆಗಿರಲಿದ್ದಾರೆ. 2022ರ ನವೆಂಬರ್ 9ರಿಂದ 2024ರ ನವೆಂಬರ್ 10ರ ವರೆಗೆ ನ್ಯಾ. ಡಿ.ವೈ ಚಂದ್ರಚೂಡ್ ಸಿಜೆಯಾದರೆ, 2024ರ ನವೆಂಬರ್ 11ರಿಂದ 2025ರ ಮೇ 13ರವರೆಗೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಸಿಜೆಐಯಾಗಿರಲಿದ್ದಾರೆ. ನ್ಯಾಯಮೂರ್ತಿ ಬಿ. ಆರ್ ಗವಾಯಿ 2025ರ ಮೇ 14ರಿಂದ ನವೆಂಬರ್ 23ರವರೆಗೆ ಸಿಜೆಐಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ನ್ಯಾಯಮೂರ್ತಿ ಸೂರ್ಯಕಾಂತ್ 2025ರ ನವೆಂಬರ್ 24ರಿಂದ 2027ರ ಫೆಬ್ರವರಿ 9ರ ವರೆಗೆ ಸಿಜೆಐ ಆಗಲಿದ್ದಾರೆ. ನಂತರ ನ್ಯಾ. ವಿಕ್ರಮ್ ನಾಥ್, ನ್ಯಾ ಬಿ. ವಿ ನಾಗರತ್ನ ಹಾಗೂ ನ್ಯಾ ಪಿ.ಎಸ್ ನರಸಿಂಹ ಅವರು ಸಿಜೆಐ ಆಗುವ ಅವಕಾಶ ಪಡೆಯಲಿದ್ದಾರೆ.

English summary
In a first, nine judges of the Supreme Court took oath in one go. The oath was administered to the judges by Chief Justice of India, N V Ramanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X