ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬಗ್ಗೆ ಭಯಭೀತನಾಗಿದ್ದೇನೆ ಎಂದಿದ್ದ ಶರದ್ ಪವಾರ್: ಈಗ ಆಗುತ್ತಿರುವುದು ಇನ್ನೇನು?

|
Google Oneindia Kannada News

ಕಳೆದ ಲೋಕಸಭಾ ಚುನಾವಣೆಯ ವೇಳೆ ತಮ್ಮ ಮಗಳ ಪರವಾಗಿ ಪ್ರಚಾರ ಮಾಡುತ್ತಿದ್ದ ಶರದ್ ಪವಾರ್, " ನನ್ನ ಬೆರಳು ಹಿಡಿದು ರಾಜಕೀಯಕ್ಕೆ ಬಂದೆ ಎಂದು ಮೋದಿ ಹೇಳುತ್ತಾರೆ. ಆದರೆ ಈಗ ನಾನು ಭಯಭೀತನಾಗಿದ್ದೇನೆ. ಯಾಕೆಂದರೆ ಆ ಮನುಷ್ಯ ಏನು ಮಾಡುತ್ತಾನೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ" ಎಂದು ಹೇಳಿದ್ದರು.

ಕೇಂದ್ರ ತನಿಖಾ ಸಂಸ್ಥೆಗಳನ್ನು ನಾವೇನು ನಿಯಂತ್ರಿಸುತ್ತಿಲ್ಲ ಎಂದು ಬಿಜೆಪಿ ಹೇಳುತ್ತಾ ಬರುತ್ತಿದೆ. ಆದರೆ, ಅದೇನೋ ಕಾಕತಾಳೀಯ ಎನ್ನುವಂತೆ, ಮಹಾರಾಷ್ಟ್ರ ಚುನಾವಣೆಗೆ ಕೇವಲ ಒಂದು ತಿಂಗಳು ಇರಬೇಕಾದರೆ, ಜಾರಿ ನಿರ್ದೇಶನಾಲಯದಿಂದ ಶರದ್ ಪವಾರ್ ಮತ್ತು ಅವರ ಅಳಿಯ ಅಜಿತ್ ಪವಾರ್ ಗೆ ನೋಟಿಸ್ ಜಾರಿಯಾಗಿದೆ.

ನಾವು ಮಹಾರಾಷ್ಟ್ರದವರು, ಇ. ಡಿ. ಗೆ ಹೆದರಿ ದೆಹಲಿಗೆ ಬಗ್ಗಲ್ಲ: ಶರದ್ ಪವಾರ್ನಾವು ಮಹಾರಾಷ್ಟ್ರದವರು, ಇ. ಡಿ. ಗೆ ಹೆದರಿ ದೆಹಲಿಗೆ ಬಗ್ಗಲ್ಲ: ಶರದ್ ಪವಾರ್

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ಗೆ (ಎಂಎಸ್‌ಸಿಬಿ) ಸಂಬಂಧಿಸಿದ 25,000 ಕೋಟಿ ರೂ. ಮೊತ್ತದ ಹಗರಣದ ಆರೋಪದಲ್ಲಿ ಪವಾರ್ ಕುಟುಂಬ ಮತ್ತು ಇತರರು ವಿರುದ್ದ ಅಪರಾಧ ಪ್ರಕರಣ ದಾಖಲಾಗಿದೆ. " ಸಹಕಾರಿ ವಲಯದಲ್ಲಿ ಶರದ್ ಪವಾರ್ ಅವರ ಕೊಡುಗೆ ಅಪಾರ" ಎಂದು ಹಿಂದೊಮ್ಮೆ ಮೋದಿ ಹೇಳಿದ್ದರು.

ಅಕ್ರಮ ಹಣ ವರ್ಗಾವಣೆ ವಿರುದ್ಧ ಇ.ಡಿ ಕೇಸ್: ಶರದ್ ಪವಾರ್‌ಗೆ ಸಂಕಷ್ಟಅಕ್ರಮ ಹಣ ವರ್ಗಾವಣೆ ವಿರುದ್ಧ ಇ.ಡಿ ಕೇಸ್: ಶರದ್ ಪವಾರ್‌ಗೆ ಸಂಕಷ್ಟ

" ಉಪ್ಪು ತಿಂದವರು ನೀರು ಕುಡಿಯಲೇ ಬೇಕು" ಎನ್ನುವ ಮಾತು ಡಿ.ಕೆ.ಶಿವಕುಮಾರ್ ಬಂಧನದ ನಂತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ. ಅಕ್ರಮ ಸಂಪಾದನೆ ಎಂದು ಕಂಡು ಬಂದರೆ, ಯಾರಿಗಾದರೂ ನೊಟೀಸ್ ನೀಡಲಿ, ವಿಚಾರಣೆ ನಡೆಸಲಿ ಅಥವಾ ಬಂಧಿಸಲಿ. ಆದರೆ, ಟೈಮಿಂಗ್ಸ್!! ಶರದ್ ಪವಾರ್ ಗೆ ನೊಟೀಸ್ ಜಾರಿಯಾದ ವಿಚಾರದಲ್ಲಿ ಕೇಂದ್ರದ ಮೇಲೆ ಸಂದೇಹ ಮೂಡಲು ಕಾರಣವಾಗಿರುವುದು ಇದೇ.. ಇದರ ಹಿಂದೆ ಇಂಟರೆಸ್ಟಿಂಗ್ ರಾಜಕೀಯವಿದೆ..

ಮುಂಬೈ ಪೊಲೀಸ್ ಸುಪರ್ದಿಯಲ್ಲಿ ಬರುವ ಆರ್ಥಿಕ ಅಪರಾಧಗಳ ವಿಭಾಗ

ಮುಂಬೈ ಪೊಲೀಸ್ ಸುಪರ್ದಿಯಲ್ಲಿ ಬರುವ ಆರ್ಥಿಕ ಅಪರಾಧಗಳ ವಿಭಾಗ

" ಮುಂಬೈ ಪೊಲೀಸ್ ಸುಪರ್ದಿಯಲ್ಲಿ ಬರುವ ಆರ್ಥಿಕ ಅಪರಾಧಗಳ ವಿಭಾಗವು ಸಲ್ಲಿಸಿದ ಎಫ್‌ಐಆರ್ ಆಧರಿಸಿ ಈ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ" ಎಂದು ಇಡಿ ಕಚೇರಿ ಸ್ಪಷ್ಟನೆಯನ್ನು ನೀಡಿದೆ. 2011ರಲ್ಲಿ ಕಾಂಗ್ರೆಸ್- ಎನ್ಸಿಪಿ ನಡುವೆ ಜಟಾಪಟಿಯಾಗಿದ್ದ ವೇಳೆ ಹೊರಬಂದ ಕೆಲವೊಂದು ವಿಚಾರಗಳನ್ನು ಆಧರಿಸಿ ಇಡಿ, ಪವಾರ್ ಗೆ ನೊಟೀಸ್ ಜಡಾಯಿಸಿದೆ ಎಂದು ಹೇಳಲಾಗುತ್ತಿದೆ.

ಬ್ಯಾಂಕ್‌ ನಲ್ಲಿ 44 ನಿರ್ದೇಶಕರಿದ್ದರು. 25 ಎನ್ಸಿಪಿ ಪಕ್ಷಕ್ಕೆ ಗೆ ಸೇರಿದವರು

ಬ್ಯಾಂಕ್‌ ನಲ್ಲಿ 44 ನಿರ್ದೇಶಕರಿದ್ದರು. 25 ಎನ್ಸಿಪಿ ಪಕ್ಷಕ್ಕೆ ಗೆ ಸೇರಿದವರು

2011ರಲ್ಲಿ ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ ನಲ್ಲಿ 44 ನಿರ್ದೇಶಕರಿದ್ದರು. ಅದರಲ್ಲಿ ಆಗಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ 25 ಎನ್ಸಿಪಿ ಪಕ್ಷಕ್ಕೆ ಗೆ ಸೇರಿದ್ದವರಾಗಿದ್ದರು., 14 ಮಂದಿ ಕಾಂಗ್ರೆಸ್ ನವರು, ಇನ್ನು ಬಿಜೆಪಿಯ ಇಬ್ಬರು, ಶಿವಸೇನೆ ಮತ್ತು ರೈತ ಮತ್ತು ಕಾರ್ಮಿಕರು ಪಕ್ಷದ ಒಬ್ಬರು ಸದಸ್ಯರಾಗಿದ್ದರು.

ಮರುಪಾವತಿ ಆಗದ ಸಾಲಗಳು

ಮರುಪಾವತಿ ಆಗದ ಸಾಲಗಳು

ಆ ವೇಳೆ, ಸಹಕಾರಿ ಬ್ಯಾಂಕಿನ ವಾರ್ಷಿಕ ಲೆಕ್ಕಪರಿಶೋಧನೆ ನಡೆದಾಗ ಮರುಪಾವತಿ ಆಗದ ಸಾಲಗಳು (NPA) ಬೆಟ್ಟದಷ್ಟು ಬೆಳೆದಿತ್ತು. ಶೇ. 21ರಷ್ಟು ಎನ್ಪಿಎ ಇದ್ದಿದ್ದರಿಂದ, ಆಡಿಟರ್ ಗಳು, ಬ್ಯಾಂಕಿನ ಹಣಕಾಸು ವ್ಯವಹಾರಕ್ಕೆ 'ಡಿಗ್ರೇಡ್' ನೀಡಿದ್ದರು. ಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಲಾಭದಲ್ಲಿದೆ ಎಂದು ತೋರಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಆಡಿಟರ್ ಗಳು ಬ್ಯಾಂಕ್ ಸಾವಿರ ಕೋಟಿ ಎನ್ಪಿಎ ಎಂದು ತೋರಿಸಿದ್ದರು. ಇದು, ಎನ್ಸಿಪಿ ಮತ್ತು ಕಾಂಗ್ರೆಸ್ ನಡುವೆ ಕೆಸೆರೆರೆಚಾಟಕ್ಕೆ ಕಾರಣವಾಗಿತ್ತು.

ರಿಸರ್ವ್ ಬ್ಯಾಂಕ್ ಲೈಸೆನ್ಸ್ ಅನ್ನು ನವೀಕರಿಸಲು ನಿರಾಕರಿಸಿತ್ತು

ರಿಸರ್ವ್ ಬ್ಯಾಂಕ್ ಲೈಸೆನ್ಸ್ ಅನ್ನು ನವೀಕರಿಸಲು ನಿರಾಕರಿಸಿತ್ತು

ಈ ಬ್ಯಾಂಕಿಗೆ ಸಾಲ ಮರುಪಾವತಿಸದ ಅಕೌಂಟ್ ಗಳಲ್ಲಿ ಬಹುತೇಕ ಎಲ್ಲಾ ಸಕ್ಕರೆ ಕಾರ್ಖಾನೆಯ ಮಾಲೀಕರದ್ದು. ಆಡಿಟರ್ ವರದಿ ಆಧರಿಸಿ, ರಿಸರ್ವ್ ಬ್ಯಾಂಕ್ ಲೈಸೆನ್ಸ್ ಅನ್ನು ನವೀಕರಿಸಲು ನಿರಾಕರಿಸಿತ್ತು. ಜೊತೆಗೆ, ನಬಾರ್ಡಿಗೆ ವರದಿ ನೀಡುವಂತೆ ಸೂಚಿಸಿತ್ತು. ನಬಾರ್ಡ್ ನೀಡಿದ ವರದಿಯನ್ನು ಆಧರಿಸಿ, ಮರುಪಾವತಿಯಾಗದ ಸಾಲಕ್ಕೆ ಗ್ಯಾರಂಟಿಯಾಗಿ ಮಹಾರಾಷ್ಟ್ರ ಸರಕಾರಕ್ಕೆ ನಿಲ್ಲುವಂತೆ ಸೂಚಿಸಿತ್ತು. ಅದನ್ನು, ಮಹಾ ಸರಕಾರ ಸಾಧ್ಯವಿಲ್ಲ ಎಂದಿತ್ತು. ಗಮನಿಸಬೇಕಾದ ಅಂಶವೇನಂದರೆ ಆವೇಳೆ, ಅಲ್ಲಿನ ಸಿಎಂ ಆಗಿದ್ದದ್ದು ಕಾಂಗ್ರೆಸ್ಸಿನ ಪೃಥ್ವಿರಾಜ್ ಚೌಹಾಣ್.

ಪೃಥ್ವಿರಾಜ್ ಚೌಹಾಣ್ ಮತ್ತು ಶರದ್ ಪವಾರ್

ಪೃಥ್ವಿರಾಜ್ ಚೌಹಾಣ್ ಮತ್ತು ಶರದ್ ಪವಾರ್

ಪೃಥ್ವಿರಾಜ್ ಚೌಹಾಣ್ ಮತ್ತು ಶರದ್ ಪವಾರ್ ನಡುವಿನ ಸಂಬಂಧ ತೀರಾ ಕುಲಗೆಟ್ಟು ಹೋಗಿದ್ದ ಸಂದರ್ಭದು. ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ ನಲ್ಲಿ ಎನ್ಸಿಪಿ ಪಾರುಪತ್ಯ ಮೆಟ್ಟಿನಿಲ್ಲಲು ಚೌಹಾಣ್ ಹೂಡಿದ್ದ ತಂತ್ರಗಾರಿಕೆಯೇ ಅದು ಎಂದು ವ್ಯಾಖ್ಯಾನಿಸಲಾಗಿತ್ತು. ರಾಜ್ಯ ಸಹಕಾರಿ ಬ್ಯಾಂಕ್‌ ನಲ್ಲಿ ಅಕ್ರಮ ನಡೆದಿದ್ದು ಹೌದು ಎಂದು ಆಡಿಟರ್ ಗಳು ರಿಪೋರ್ಟ್ ನೀಡಿದ್ದರು. ಆದರೆ, ಎಂಟು ವರ್ಷದ ಹಿಂದಿನ ಅಕ್ರಮ, ಚುನಾವಣೆಯ ವೇಳೆ, ಯಾಕೆ ಮುನ್ನಲೆಗೆ ಬಂತು ಎನ್ನುವುದಕ್ಕೆ ಪ್ರಧಾನಿಗಳೇ ಉತ್ತರ ನೀಡಬೇಕು.

ರೈತರಿಗೆ ಹವಾಮಾನದ ಬಗ್ಗೆ ಹೇಗೆ ಮುನ್ಸೂಚನೆ ಇರುತ್ತದೋ, ಅದೇ ರೀತಿ ರಾಜಕೀಯದಲ್ಲಿ ಶರದ್ ಅವರಿಗೆ

ರೈತರಿಗೆ ಹವಾಮಾನದ ಬಗ್ಗೆ ಹೇಗೆ ಮುನ್ಸೂಚನೆ ಇರುತ್ತದೋ, ಅದೇ ರೀತಿ ರಾಜಕೀಯದಲ್ಲಿ ಶರದ್ ಅವರಿಗೆ

ಕೆಲವು ವರ್ಷಗಳ ಹಿಂದೆ, ಶರದ್ ಪವಾರ್ ಅವರ ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಿದ್ದರು, ಅಲ್ಲಿ ಪ್ರಧಾನಿ ಮೋದಿ ಕೂಡಾ ಇದ್ದರು. "ರಚನಾತ್ಮಕ ಕೆಲಸಗಳ ಮೂಲಕ, ಶರದ್ ಪವಾರ್, ಈಗಿನ ರಾಜಕೀಯಕ್ಕೆ ಒಂದೊಳ್ಳೆ ಉದಾಹರಣೆಯಾಗಿದ್ದಾರೆ. ರೈತರಿಗೆ ಹವಾಮಾನದ ಬಗ್ಗೆ ಹೇಗೆ ಮುನ್ಸೂಚನೆ ಇರುತ್ತದೋ, ಅದೇ ರೀತಿ ರಾಜಕೀಯದಲ್ಲಿ ಶರದ್ ಪವಾರ್ ಅವರಿಗೆ " ಎಂದು ಮೋದಿ ಹೇಳಿದ್ದರು.

English summary
Just One Month Before Maharashtra Assembly Election, ED Enquiry Against NCP Leader Sharad Pawar and Ajit Pawar. Is This Roots Of Earlier Congress and NCP Rivalry?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X