• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜು.13 ಸೂರ್ಯಗ್ರಹಣ: ತಿಳಿಯಬೇಕಾದ 6 ಸಂಗತಿ

|
   ಜುಲೈ 13 ಸೂರ್ಯ ಗ್ರಹಣ : ಈ ದಿನ ಏನು ಮಾಡಬೇಕು? ಯಾವುದನ್ನು ಮಾಡಬಾರದು? | Oneindia Kannada

   ಜಗದೊಡೆಯ ಸೂರ್ಯ ನಾಳೆ ಕೊಂಚ ಕಾಲ ಮಂಕು ಹಿಡಿದು ಕೂರುತ್ತಾನೆ! ಜು.13 ರಂದು ಸಂಭವಿಸಲಿರುವ ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಕಾಣುವುದಿಲ್ಲ ಅನ್ನೋದು ಬೇರೆ ಮಾತು.

   ಆದರೂ ಪ್ರತಿ ಗ್ರಹಣದಲ್ಲೂ (ಸೂರ್ಯ ಅಥವಾ ಚಂದ್ರ ಗ್ರಹಣ) ನಾವು ಭಾರತೀಯರು ಹಿಂದೂ ಸಂಪ್ರದಾಯದ ಪ್ರಕಾರ ಕೆಲವು ಪದ್ಧತಿಗಳನ್ನು ಅನುಸರಿಸುತ್ತ ಬಂದಿದ್ದೇವೆ. ಆದರೆ ಈ ಭಾರಿಯ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದ ಕಾರಣ, ಭಾರತದಲ್ಲಿ ಇದರ ಆಚರಣೆ ಇಲ್ಲ.

   2018ರ ಸೂರ್ಯ ಮತ್ತು ಚಂದ್ರ ಗ್ರಹಣಗಳ ಪಟ್ಟಿ

   ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಬಾರಿಯ ಭಾಗಶಃ ಸೂರ್ಯ ಗ್ರಹಣ ದಕ್ಷಿಣ ಆಸ್ಟ್ರೇಲಿಯಾ, ಪೆಸಿಫಿಕ್, ಹಿಂದೂ ಮಹಾಸಾಗರಗಳಲ್ಲಿ ಕಂಡುಬರಲಿದೆ. ಈ ಪ್ರಾಕೃತಿಕ ದೃಶ್ಯ ವೈಭವವನ್ನು ಇದ್ದಲ್ಲಿಂದಲೇ ಆನಂದಿಸಬಹುದಲ್ಲವೆ?

   ಈ ಸೂರ್ಯ ಗ್ರಹಣ ಭಾರತದಲ್ಲಿ ಕಾಣುವುದಿಲ್ಲವಾದರೂ ಎಲ್ಲೆಲ್ಲಿ ಗೋಚರವಾಗುತ್ತದೋ ಅಲ್ಲೆಲ್ಲ ಭಾರತೀಯರು ಇದ್ದಾರಲ್ಲವೆ? ಅವರು ಈ ಪದ್ಧತಿಗಳನ್ನು ಅನುಸರಿಸಬಹುದು. ಅಲ್ಲದೆ, ಭಾರತದಲ್ಲಿ ಕೂಡ ಸೂರ್ಯ ಗ್ರಹಣ ಗೋಚರಿಸದಿದ್ದರೂ ಆಚರಿಸುವವರು ಇದ್ದೇ ಇರುತ್ತಾರೆ.

   ಎಷ್ಟು ಗಂಟೆಗೆ ಗ್ರಹಣ?

   ಎಷ್ಟು ಗಂಟೆಗೆ ಗ್ರಹಣ?

   ಜುಲೈ 13 ಶುಕ್ರವಾರದಂದು ಗ್ರಹಣ ಸಂಭವಿಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 7.18 ಕ್ಕೆ ಗ್ರಹಣ ಸ್ಪರ್ಶವಾಗಲಿದೆ. ನಂತರ ಸುಮಾರು 9.43 ಕ್ಕೆ ಗ್ರಹಣ ಮೋಕ್ಷ ಕಾಲ. ಭಾರತದಲ್ಲಿ ಈ ಗ್ರಹಣ ಕಾಣಿಸುವುದಿಲ್ಲ.

   ದುರದೃಷ್ಟ ಎನ್ನುವುದು ಏಕೆ?

   ದುರದೃಷ್ಟ ಎನ್ನುವುದು ಏಕೆ?

   ಸೂರ್ಯ ದೇವ ಎಂದರೆ ರಾಜನ ಸಂಕೇತ. ಆತ ಇಡೀ ಜಗತ್ತಿಗೂ ದೇವ, ರಾಜ. ಗ್ರಹಣವೆಂದರೆ ಆತನ ಹಾದಿಗೆ ಅಡ್ಡಿಯಾಗುವುದು ಎಂದೇ ಅರ್ಥ. ಬೆಳಕು ನೀಡುವ ಸೂರ್ಯನ ಹಾದಿಗೆ ಅಡ್ಡ ನಿಂತರೆ, ಜಗತ್ತೇ ಕತ್ತಲಾಗುತ್ತದೆ. ಆದ್ದರಿಂದ ಈ ಗ್ರಹಣವನ್ನು ದುರದೃಷ್ಟ ಎಂದು ಕರೆಯಲಾಗುತ್ತದೆ.

   ಗ್ರಹಣ ಸಮಯದಲ್ಲಿ ಏನು ಮಾಡಬೇಕು?

   ಗ್ರಹಣ ಸಮಯದಲ್ಲಿ ಏನು ಮಾಡಬೇಕು?

   ಸೂರ್ಯ ದೇವ ಆತ್ಮವಿಶ್ವಾಸ, ಶಕ್ತಿ, ಯಶಸ್ಸಿನ ಸಂಕೇತ. ಮೇಲೆ ಹೇಳಿದಂತೆ ಭಾರತದಲ್ಲಿ ಸೂರ್ಯ ಗ್ರಹಣದ ಆಚರಣೆ ಇಲ್ಲ. ಆದರೂ ಸಾಮಾನ್ಯವಾಗಿ ಸೂರ್ಯಗ್ರಹಣ ಸಂಭವಿಸಿದಾಗ, ಇದನ್ನು ಆಚರಿಸುವವರು ಗ್ರಹಣ ಕಾಲದಲ್ಲಿ ಸೂರ್ಯನನ್ನು ಜಪಿಸಬೇಕು. ಈ ದಿನ ಸೂರ್ಯನನ್ನು ಪೂಜಿಸಿ, ಜಪಿಸುವುದರಿಂದ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆ ಇದೆ. ಈ ಸಮಯ ಧ್ಯಾನಕ್ಕೂ ಪ್ರಾಶಸ್ತ್ಯ.

   ಸೂತಕ ಎಂಬ ನಂಬಿಕೆ

   ಸೂತಕ ಎಂಬ ನಂಬಿಕೆ

   ಗ್ರಹಣ ದಿನವೆಂದರೆ ಸೂತಕದ ದಿನ ಎಂಬ ನಂಬಿಕೆ ಇಂದಿಗೂ ಹಲವರಲ್ಲಿದೆ. ಸೂತಕ ಎಂದರೆ ಅಮಂಗಳದ ಸಂಕೇತ. ಆದರೆ ಬಡವರಿಗೆ, ಅಶಕ್ತರ ಸೇವೆಗೆ ಈ ದಿನವನ್ನು ಮೀಸಲಿಡುವುದರಿಂದ ಯಾವುದೇ ಸೂತಕದ ಭಾವ ಇರುವುದಿಲ್ಲ.

   ಗರ್ಭಿಣಿಯರೇಕೆ ನೋಡಬಾರದು?

   ಗರ್ಭಿಣಿಯರೇಕೆ ನೋಡಬಾರದು?

   ಸೂರ್ಯಗ್ರಹಣವನ್ನು ಗರ್ಭಿಣಿಯರು ನೋಡಬಾರದು ಮತ್ತು ಗ್ರಹಣ ಕಾಲದಲ್ಲಿ ಮನೆಯಿಂದ ಆಚೆ ಬರಬಾರದು ಎಂಬ ಸೂಚನೆಯನ್ನು ಹಲವರು ನೀಡುತ್ತಾರೆ. ಇದಕ್ಕೆ ಕಾರಣ ಗ್ರಹಣ ಕಾಲದ ಸೂರ್ಯನ ವಿಕಿರಣಗಳು ತೀರಾ ಅಪಾಯಕಾರಿ. ಇದರಿಂದ ಗರ್ಭಿಣಿಯರಿಗೂ, ಅವರ ಹೊಟ್ಟೆಯಲ್ಲಿರುವ ಭ್ರೂಣಕ್ಕೆ ತೊಂದರೆಯಾಗುತ್ತದೆ. ಸೂರ್ಯಗ್ರಹಣದ ಆಚರಣೆ ಇಲ್ಲದಿದ್ದರೂ, ಗರ್ಭಿಣಿಯರ ಆರೋಗ್ಯದ ದೃಷ್ಟಿಯಿಂದ ಈ ದಿನ ಸೂರ್ಯನ ಕಿರಣಗಳಿಗೆ ಮೈಯೊಡ್ಡದಿರುವುದು ಒಳಿತು.

   ಗ್ರಹಣ ಸಮಯದಲ್ಲಿ ತಿನ್ನುವಾಗ ಎಚ್ಚರಿಕೆಯಿರಲಿ

   ಗ್ರಹಣ ಸಮಯದಲ್ಲಿ ತಿನ್ನುವಾಗ ಎಚ್ಚರಿಕೆಯಿರಲಿ

   ಭೂಮಿಯಿಂದ ಲಕ್ಷಾಂತರ ಕಿ.ಮೀ.ದೂರದಲ್ಲಿದ್ದರೂ ಸೂರ್ಯನ ಶಕ್ತಿಶಾಲಿ ವಿಕಿರಣಗಳು ಅಪಾಯಕಾರಿಯೇ. ಆದ್ದರಿಂದ ಗ್ರಹಣದ ಸಮಯದಲ್ಲಿ ಹೊರಬರುವ ವಿಕಿರಣಗಳಿಗೆ ಮೈಯೊಡ್ಡುವುದು, ಅಥವಾ ಸೂರ್ಯನ ಬೆಳಕಿನಲ್ಲಿ ಏನನ್ನಾದರೂ ತಿನ್ನುವುದು ಒಳ್ಳೆಯದಲ್ಲ. ಇದು ಸೂರ್ಯ ಗ್ರಹಣ ಆಚರಣೆಯ ಸಮಯದಲ್ಲಿ ಮಾತ್ರ ಅನ್ವಯಿಸುತ್ತದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Solar Eclipse Day - July 13, 2018: Here are list of dos and don'ts on solar eclipse day on July 13, 2018, observed on Friday. And also some information about why solar eclipse are called as misfortune.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more