ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್-ಪ್ಯಾನ್ ಕಾರ್ಡ್ ಜೋಡಣೆಗೆ ಕೊನೆ ದಿನ ಪ್ರಕಟಿಸದ ಸರಕಾರ

|
Google Oneindia Kannada News

ಆಧಾರ್ ಸಂಖ್ಯೆ ಜತೆಗೆ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಜೋಡಣೆ ಮಾಡಿಸುವುದಕ್ಕೆ ಜುಲೈ ಒಂದು ಕೊನೆ ದಿನ ಎಂಬ ಸುದ್ದಿಯಾಗಿ ವಿಪರೀತ ಜನರು ಏಕ ಕಾಲಕ್ಕೆ ಪ್ರಯತ್ನಿಸಿ, ವೆಬ್ ಸೈಟೇ ಕ್ರ್ಯಾಶ್ ಆಗುವ ಮಟ್ಟಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ ಯಾರೂ ಗಾಬರಿ ಆಗಬೇಕಿಲ್ಲ. ಜುಲೈ ಒಂದರೊಳಗೆ ಆ ರೀತಿ ಜೋಡಣೆ ಆಗಲೇ ಬೇಕು ಎಂದು ನಿಯಮ ಮಾಡಿಲ್ಲ.

ಅಂದರೆ ಹಾಗೆ ಲಿಂಕ್ ಆಗಲಿಲ್ಲ ಅಂದರೆ ಆಧಾರ್ ಅಥವಾ ಪ್ಯಾನ್ ಕಾರ್ಡ್ ರದ್ದು ಆಗೋದಿಲ್ಲ. ಜುಲೈ ಒಂದರಿಂದ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಸಂಖ್ಯೆ ಜೋಡಣೆ ಆಗಬೇಕು ಅನ್ನೋದು ನಿಜ. ಆದರೆ ಆ ದಿನಕ್ಕೆ ಮುಂಚೆಯೇ ಆಗಬೇಕು ಎಂಬ ಕಡ್ಡಾಯವಿಲ್ಲ. ಯಾರಿಗೆ ಈ ರೀತಿ ಲಿಂಕ್ ಮಾಡಲು ಸಾಧ್ಯ ಆಗಿರುವುದಿಲ್ಲವೋ ಅಂಥವರ ಪ್ಯಾನ್ ಕಾರ್ಡ್ ತಾನೇತಾನಾಗಿ ರದ್ದು ಆಗಿಬಿಡುತ್ತದೆ ಎಂಬ ಆತಂಕದ ಅಗತ್ಯವಿಲ್ಲ.

ನೆನಪಿಡಿ, ಆಧಾರ್ - ಪ್ಯಾನ್ ಜೋಡಣೆಗೆ ಕೊನೆಯ ದಿನಾಂಕ ಜೂನ್ 30ನೆನಪಿಡಿ, ಆಧಾರ್ - ಪ್ಯಾನ್ ಜೋಡಣೆಗೆ ಕೊನೆಯ ದಿನಾಂಕ ಜೂನ್ 30

July 1 is not the date when your unlinked PAN will become invalid

ಪ್ಯಾನ್ ಕಾರ್ಡ್ ಹಾಗೂ ಆಧಾರ್ ಜೋಡಣೆ ಆಗಲಿಲ್ಲ ಅಂದರೆ ಯಾವಾಗ ರದ್ದು ಮಾಡಲಾಗುತ್ತದೆ ಎಂಬ ದಿನಾಂಕವನ್ನು ಸರಕಾರ ಇನ್ನು ಘೋಷಣೆ ಮಾಡಿಲ್ಲ. ನಿಯಮಗಳು ಹೇಳೋದೇನು ಅಂದರೆ, ಯಾವಾಗ ಮತ್ತು ಯಾವ ದಿನಕ್ಕೂ ಮುನ್ನ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಸಂಖ್ಯೆ ಜೋಡಣೆ ಆಗಬೇಕು ಎಂಬುದಕ್ಕೆ ಸರಕಾರವೇ ಅಧಿಸೂಚನೆ ಹೊರಡಿಸಬೇಕು.

ನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿ

ಆದರೆ, ಜುಲೈ ಒಂದರಿಂದ ಪ್ಯಾನ್ ಕಾರ್ಡ್ ಗೆ ಅರ್ಜಿ ಹಾಕಬೇಕಾದರೆ ಹಾಗೂ ಆದಾಯ ತೆರಿಗೆ ಪಾವತಿಗೆ ರಿಟರ್ನ್ ಸಲ್ಲಿಸಬೇಕಾದರೆ ಆಧಾರ್ ಕಡ್ಡಾಯ ಮಾಡಲಾಗಿದೆ.

English summary
The linking of PAN and Aadhaar will become mandatory from July 1, and it's not mandatory to link before July 1. If you are not able to link it before July 1, your PAN will not become invalid automatically. After July 1, the linking will become mandatory and the government may declare a date after which the PAN not linked to Aadhaar will become invalid. The government has not declared that date yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X