ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಾಧೀಶರ ವರ್ಗಾವಣೆ: ಸಲ್ಮಾನ್ ಖಾನ್ ಜಾಮೀನು ಕಗ್ಗಂಟು?

|
Google Oneindia Kannada News

ಬೆಂಗಳೂರು, ಏಪ್ರಿಲ್ 07: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಈ ವರ್ಗಾವಣೆ ಆದೇಶ ತಕ್ಷಣದಿಂದಲೇ ಜಾರಿಯಾಗುತ್ತದೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲ. ಇದರಿಂದ ಸಲ್ಮಾನ್ ಖಾನ್‌ಗೆ ಇಂದು ಜಾಮೀನು ಸಿಗುತ್ತದೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲ.

ಕೊನೆಗೂ ಸಲ್ಲೂಗೆ ಜೈಲು... 'ಕೃಷ್ಣಮೃಗದ ನಾಲ್ಕನೇ ಸಂತತಿಗೆ ಸಿಕ್ತು ನ್ಯಾಯ!'ಕೊನೆಗೂ ಸಲ್ಲೂಗೆ ಜೈಲು... 'ಕೃಷ್ಣಮೃಗದ ನಾಲ್ಕನೇ ಸಂತತಿಗೆ ಸಿಕ್ತು ನ್ಯಾಯ!'

ಜೋಧಪುರ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಅವರನ್ನು ಜೋಧಪುರದಿಂದ ಸಿರೋಹ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಸಲ್ಮಾನ್ ಖಾನ್‌ಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ದೇವ್ ಕುಮಾರ್ ಖತ್ರಿ ಅವರೂ ಕೂಡ ವರ್ಗಾವಣೆಯಾಗಿದ್ದಾರೆ.

judge who hearing bail plea of salman transferred

ರವೀಂದ್ರ ಕುಮಾರ್ ಜೋಶಿ ಅವರ ಸ್ಥಾನಕ್ಕೆ ನ್ಯಾಯಾಧೀಶ ಚಂದ್ರ ಕುಮಾರ್ ಸೊಂಗಾರಾ ಅವರನ್ನು ನೇಮಿಸಲಾಗಿದೆ.

ಸಲ್ಮಾನ್ ಜಾಮೀನು ಅರ್ಜಿ: ಬದಲಾಗದ ನ್ಯಾಯಾಧೀಶರುಸಲ್ಮಾನ್ ಜಾಮೀನು ಅರ್ಜಿ: ಬದಲಾಗದ ನ್ಯಾಯಾಧೀಶರು

ಒಟ್ಟು 87 ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ರಾಜಸ್ಥಾನದಲ್ಲಿ ಪ್ರತಿ ಏಪ್ರಿಲ್‌ನ ಆರಂಭದಲ್ಲಿ ಈ ರೀತಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ.

ಸಲ್ಮಾನ್ ತೀರ್ಪು ಶನಿವಾರ: ಇನ್ನೂ ಒಂದು ದಿನ ಜೈಲಿನಲ್ಲೇ ಕಳೆಯಬೇಕುಸಲ್ಮಾನ್ ತೀರ್ಪು ಶನಿವಾರ: ಇನ್ನೂ ಒಂದು ದಿನ ಜೈಲಿನಲ್ಲೇ ಕಳೆಯಬೇಕು

ನಟ ಸಲ್ಮಾನ್ ಖಾನ್ ಎರಡು ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ತಮ್ಮ ತಾಯಿ ಸಲ್ಮಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಲು ಸಲ್ಮಾನ್ ಖಾನ್‌ಗೆ ಅವಕಾಶ ನೀಡಲಾಗುವುದು ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.

ಶುಕ್ರವಾರ ಸಲ್ಮಾನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ, ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿದ್ದರು.

English summary
judge Dev Kumar Khatri, who sent Bollywood superstar Salman Khan to jail in blackbucks poaching case and Sessions Court judge Ravindra Kumar Joshi, who hearing salman's bail plea have been transferrd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X