ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಯತ್ರಿ ಪ್ರಜಾಪತಿಗೆ ಜಾಮೀನು ಕೊಟ್ಟಿದ್ದ ನ್ಯಾಯಧೀಶರೇ ಸಸ್ಪೆಂಡ್!

ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಪೋಸ್ಕೊ ಕೋರ್ಟ್ ಗಾಯತ್ರಿ ಪ್ರಜಾಪತಿಗೆ ಮಂಜೂರು ಮಾಡಿದ್ದ ಜಾಮೀನನ್ನು ರದ್ದು ಮಾಡಿತ್ತು. ಇದಾದ ನಂತರ ಪ್ರಜಾಪತಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಧೀಶರನ್ನೂ ವಜಾ ಮಾಡಿದೆ.

By Sachhidananda Acharya
|
Google Oneindia Kannada News

ಲಕ್ನೊ, ಏಪ್ರಿಲ್ 29: ಅತ್ಯಾಚಾರ ಆರೋಪಿ ಸಮಾಜವಾದಿ ಪಕ್ಷದ ನಾಯಕ ಗಾಯತ್ರಿ ಪ್ರಜಾಪತಿಗೆ ಜಾಮೀನು ನೀಡಿದ್ದ ಸೆಷನ್ಸ್ ಕೋರ್ಟ್ ನ್ಯಾಯಾಧೀಶರನ್ನೇ ವಜಾ ಮಾಡಲಾಗಿದೆ. ಮಾತ್ರವಲ್ಲ ಅವರ ವಿರುದ್ಧ ಇಲಾಖಾ ತನಿಖೆಗೂ ಆದೇಶ ನೀಡಲಾಗಿದೆ.

ಶುಕ್ರವಾರ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಪೋಸ್ಕೊ ಕೋರ್ಟ್ ಗಾಯತ್ರಿ ಪ್ರಜಾಪತಿಗೆ ಮಂಜೂರು ಮಾಡಿದ್ದ ಜಾಮೀನನ್ನು ರದ್ದು ಮಾಡಿತ್ತು. ಇದಾದ ನಂತರ ಹೈಕೋರ್ಟ್ ಆಡಳಿತ ವಿಭಾಗ ಪ್ರಜಾಪತಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಧೀಶರನ್ನು ವಜಾ ಮಾಡಿದೆ.[ಗಾಯತ್ರಿ ಪ್ರಜಾಪತಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ]

Judge Suspended Who Granted Bail to SP Leader Gayatri Prajapati

ಯೋಗಿ ಆದಿತ್ಯನಾಥ್ ಸರಕಾರ ಸೆಷನ್ಸ್ ಕೋರ್ಟ್ ನೀಡಿದ್ದ ಜಾಮೀನಿಗೆ ತಡೆ ನೀಡುವಂತೆ ಹೈಕೋರ್ಟ್ ಮೊರೆ ಹೋಗಿತ್ತು. ಇದೀಗ ಜಾಮೀನು ರದ್ದು ಮಾಡಿದ್ದಲ್ಲದೇ ಜಾಮೀನು ನೀಡಿದ್ದ ನ್ಯಾಯಾಧೀಶರನ್ನೂ ಮನೆಗಟ್ಟಿದೆ.

ಮಾರ್ಚ್ 15ರಂದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಗಾಯತ್ರಿ ಪ್ರಜಾಪತಿಯನ್ನು ಲಕ್ನೋದಲ್ಲಿ ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಆರೋಪಗಳನ್ನು ನಿರಾಕರಿಸಿದ್ದ ಪ್ರಜಾಪತಿ ಇದೊಂದು ರಾಜಕೀಯ ಷಡ್ಯಂತ್ರ ಎಂದಿದ್ದರು.

ಇದಕ್ಕೂ ಮೊದಲು 49 ವರ್ಷದ ಗಾಯತ್ರಿ ಪ್ರಜಾಪತಿ ಹಾಗೂ 6 ಜನರ ಮೇಲೆ ಮಹಿಳೆಯೊಬ್ಬರನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಮತ್ತು ಆಕೆಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಫೆಬ್ರವರಿ 17ರಂದು ಎಫ್ಐಆರ್ ದಾಖಲಾಗಿತ್ತು.[ಅತ್ಯಾಚಾರ ಆರೋಪಿ ಎಸ್ ಪಿ ಶಾಸಕ ಪ್ರಜಾಪತಿ ಬಂಧನಕ್ಕೆ ವ್ಯಾಪಕ ಜಾಲ]

ದೂರಿನಲ್ಲಿ ಮಹಿಳೆಯು ಅಕ್ಟೋಬರ್ 2014ರಿಂದ ಜುಲೈ 2016ರ ಮಧ್ಯೆ ನನ್ನ ಮೇಲೆ ಸರಣಿ ಅತ್ಯಾಚಾರ ನಡೆಸಲಾಗಿದೆ ಎಂದು ಹೇಳಿದ್ದರು. ಯಾವಾಗ ತನ್ನ ಮಗಳ ಮೇಲೆ ದೌರ್ಜನ್ಯ ನಡೆಸಲು ಯತ್ನಿಸಿದರೋ ಆಗ ಡಿಜಿಪಿಗೆ ಮಹಿಳೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು.

ಇನ್ನು 2016ರಲ್ಲಿ ಸಮಾಜವಾದಿ ಪಕ್ಷದಲ್ಲಿ ಬಿಕ್ಕಟ್ಟು ಉಲ್ಬಣವಾದಾಗ ಸಚಿವ ಸಂಪುಟದಿಂದ ಗಾಯತ್ರಿ ಪ್ರಜಾಪತಿಯನ್ನು ಕೆಳಕ್ಕಿಳಿಸಲಾಗಿತ್ತು. ಆದರೆ ನಂತರ ಮತ್ತೆ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು.

English summary
The POCSO court judge who had granted bail to rape accused Samajwadi Party leader Gayatri Prajapati has been suspended. A departmental inquiry has also been ordered against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X