ಸಲ್ಮಾನ್ ಜಾಮೀನು ಅರ್ಜಿ: ಬದಲಾಗದ ನ್ಯಾಯಾಧೀಶರು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ಜೋಧಪುರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ವರ್ಗಾವಣೆಗೊಂಡಿದ್ದರೂ, ಸಲ್ಮಾನ್ ಅರ್ಜಿಯ ತೀರ್ಪು ಪ್ರಕಟಿಸಲಿದ್ದಾರೆ.

ನ್ಯಾಯಾಧೀಶರ ವರ್ಗಾವಣೆ ಕಾರಣ ಸಲ್ಮಾನ್‌ ಜಾಮೀನು ಅರ್ಜಿಯ ತೀರ್ಪು ಅತಂತ್ರಗೊಳ್ಳುವ ಸಾಧ್ಯತೆ ಇತ್ತು. ಆದರೆ, ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಅವರೇ ಸಲ್ಮಾನ್ ಖಾನ್ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಲಿದ್ದಾರೆ.

ನ್ಯಾಯಾಧೀಶರ ವರ್ಗಾವಣೆ: ಸಲ್ಮಾನ್ ಖಾನ್ ಜಾಮೀನು ಕಗ್ಗಂಟು?

ತಾವು ವಿಚಾರಣೆ ನಡೆಸಿ ಬಾಕಿ ಉಳಿದಿರುವ ಇತರೆ ಪ್ರಕರಣಗಳನ್ನು ರವೀಂದ್ರ ಕುಮಾರ್ ಜೋಶಿ ಅವರು ಮುಂದುವರಿಸಲಿದ್ದಾರೆ.

judge ravindra kumar joshi will hear salmans bail plea

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಜೋಧಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಸಲ್ಮಾನ್ ಅವರನ್ನು ನಟಿ ಪ್ರೀತಿ ಝಿಂಟಾ ಶುಕ್ರವಾರ ಭೇಟಿ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sessions Court judge Ravindra Kumar Joshi, who transferred to siroh will continue on salman's bail plea case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ