ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜೆಎಸ್‍ಡಬ್ಲ್ಯೂ'ನಿಂದ 3ನೇ ಸ್ಟೀಲ್ ಘಟಕ, 7,500 ಕೋಟಿ ರೂ. ಹೂಡಿಕೆ

By Sachhidananda Acharya
|
Google Oneindia Kannada News

ಬಳ್ಳಾರಿ, ಜೂನ್ 27: ಜೆಎಸ್‍ಡಬ್ಲ್ಯೂ ಸ್ಟೀಲ್ ವಿಜಯನಗರದಲ್ಲಿರುವ ತನ್ನ ಘಟಕದಲ್ಲಿನ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದೆ. ಇದರಂತೆ 2020 ರ ಮಾರ್ಚ್ ವೇಳೆಗೆ ವಾರ್ಷಿಕ 13 ದಶಲಕ್ಷ ಟನ್ ಸ್ಟೀಲ್ ಉತ್ಪಾದನೆ ಮಾಡುವ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ಇಲ್ಲಿ ಮೂರನೇ ಘಟಕ ಆರಂಭವಾಗಲಿದೆ.

ಪ್ರಸ್ತುತ ವಿಜಯನಗರ ಘಟಕದಲ್ಲಿ ವಾರ್ಷಿಕ 12 ದಶಲಕ್ಷ ಟನ್‍ನಷ್ಟು ಸ್ಟೀಲ್ ಉತ್ಪಾದನೆ ಮಾಡಲಾಗುತ್ತಿದೆ. ಇದು ಭಾರತದ ಏಕೈಕ ದೊಡ್ಡ ಸ್ಟೀಲ್ ಉತ್ಪಾದನಾ ಘಟಕವಾಗಿದೆ.

ಇಲ್ಲಿನ ಜೆಎಸ್‍ಡಬ್ಲ್ಯೂ ಸ್ಟೀಲ್ ಉತ್ಪಾದನಾ ಕೇಂದ್ರದ 3 ನೇ ಘಟಕದ ವಿಸ್ತರಣಾ ಕಾಮಗಾರಿ ಪ್ರಗತಿಯಲ್ಲಿದ್ದು, 2020ಕ್ಕೆ ಇದು ಪೂರ್ಣಗೊಳ್ಳಲಿದೆ.

JSW plans to invest Rs 7,500 crore by 2020 in Ballari

ಕಂಪನಿಯು ಈಗಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ 1.5 ದಶಲಕ್ಷ ಟನ್ ಕೋನ್ ಓವನ್ ಪ್ಲಾಂಟ್ ಅನ್ನೂ ವಿಜಯನಗರದಲ್ಲಿ ಅಳವಡಿಸಲಿದೆ. ಈ ಘಟಕವೂ 2020 ರ ಮಾರ್ಚ್ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಈ ವಿಸ್ತರಣೆ ಮತ್ತು ಮೇಲ್ದರ್ಜೆಗೇರಿಸುವ ಯೋಜನೆಗಳಿಗಾಗಿ ಕಂಪನಿಯು 2020 ರ ಮಾರ್ಚ್ ವೇಳೆಗೆ ಒಟ್ಟು 7,500 ಕೋಟಿ ರೂಪಾಯಿಗಳ ಹೂಡಿಕೆ ಮಾಡಲಿದೆ.

ಜೆಎಸ್‍ಡಬ್ಲ್ಯೂ ವಿಜಯನಗರ ಘಟಕದ ವಿಸ್ತರಣಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಜೆಎಸ್‍ಡಬ್ಲ್ಯೂ ಸ್ಟೀಲ್‍ನ ಉಪ ವ್ಯವಸ್ಥಾಪಕ ನಿರ್ದೇಶಕ ಡಾ. ವಿನೋದ್ ನೋವಲ್ ಅವರು, ಜೆಎಸ್‍ಡಬ್ಲ್ಯೂ ವಿಜಯನಗರ ಘಟಕದಲ್ಲಿ ನಾವು ಅನುಷ್ಠಾನಗೊಳಿಸುತ್ತಿರುವ ಸುಧಾರಣೆ ಮತ್ತು ವಿಸ್ತರಣಾ ಕ್ರಮಗಳು ನಮ್ಮ ಉತ್ಪಾದನಾ ಸಾಮರ್ಥ್ಯದ ಹೆಚ್ಚಳಕ್ಕೆ ಕಾರಣವಾಗಲಿವೆ. ಭಾರತದಲ್ಲಿ ಸ್ಟೀಲ್‍ಗೆ ಸಾಕಷ್ಟು ಬೇಡಿಕೆ ಹೆಚ್ಚಾಗುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ನಾವು ಸಿದ್ಧರಾಗಬೇಕಿದೆ. ಈ ಮೂಲಕ ಗ್ರಾಹಕರ ಬೇಡಿಕೆಯನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ'' ಎಂದು ತಿಳಿಸಿದರು.

ತುಂಗಾ ಮತ್ತು ನಂದಿ ಮೈನ್ಸ್ ನಲ್ಲಿ ಜೆಎಸ್‍ಡಬ್ಲ್ಯೂ ಸ್ಟೀಲ್ ಕಾರ್ಯಾರಂಭ

ಕರ್ನಾಟಕದಲ್ಲಿ ಜೆಎಸ್‍ಡಬ್ಲ್ಯೂ ಸ್ಟೀಲ್ ಎರಡು ಕಬ್ಬಿಣ ಅದಿರು ಗಣಿಗಳಲ್ಲಿ ಕಾರ್ಯಾಚರಣೆ (ತುಂಗಾ ಮತ್ತು ನಂದಿ ಮೈನ್ಸ್) ಆರಂಭಿಸಿದೆ. ಇದಕ್ಕಾಗಿ ಕಂಪನಿಯು ಎಲ್ಲಾ ಕಾನೂನಾತ್ಮಕ ಅನುಮೋದನೆಗಳನ್ನು ಪಡೆದುಕೊಂಡಿದೆ. ಈ ಎರಡು ಗಣಿಗಳ ಸಾಮರ್ಥ್ಯ 0.71 ದಶಲಕ್ಷ ಟನ್ ಇದೆ. ಜೆಎಸ್‍ಡಬ್ಲ್ಯೂ ಇನ್ನೂ ಮೂರು ಗಣಿಗಳ ಅನುಮತಿಗಾಗಿ ಕಾಯುತ್ತಿದೆ. ಈ ವರ್ಷ ಅನುಮೋದನೆ ಸಿಗುವ ಸಾಧ್ಯತೆ ಇದೆ. ಈ ಎಲ್ಲಾ ಐದು ಗಣಿಗಳಿಂದ ಜೆಎಸ್‍ಡಬ್ಲ್ಯೂ ಸ್ಟೀಲ್ 2017 ರಲ್ಲಿ ವಾರ್ಷಿಕ ಸುಮಾರು 4.66 ದಶಲಕ್ಷ ಟನ್‍ನಷ್ಟು ಅದಿರು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಲಿದೆ.

ಈ ಎಲ್ಲಾ ಐದು ಗಣಿಗಳು ಕಾರ್ಯಾರಂಭ ಆರಂಭವಾದರೆ ಜೆಎಸ್‍ಡಬ್ಲ್ಯೂ ವಿಜಯನಗರದ ಕಬ್ಬಿಣ ಅದಿರಿನ ಅಗತ್ಯದಲ್ಲಿ ಶೇ. 20 ರಷ್ಟನ್ನು ಪೂರೈಸಿಕೊಂಡಂತಾಗುತ್ತದೆ. ಈ ಎಲ್ಲಾ ಐದು ಗಣಿಗಳು ವಿಜಯನಗರ ಘಟಕದಿಂದ 20 ರಿಂದ 35 ಕಿಲೋಮೀಟರ್ ವ್ಯಾಪ್ತಿಯಲ್ಲಿವೆ. ಇದರಿಂದಾಗಿ ಸಾಗಾಣಿಕೆ ವೆಚ್ಚದಲ್ಲಿ ಸಾಕಷ್ಟು ಉಳಿತಾಯ ಆಗುತ್ತದೆ. ಇದುವರೆಗೆ ಜೆಎಸ್‍ಡಬ್ಲ್ಯೂ ಸ್ಟೀಲ್ ಕಬ್ಬಿಣದ ಅದಿರಿಗಾಗಿ ಹೊರಗಿನ ಮಾರುಕಟ್ಟೆಯನ್ನೇ ಅವಲಂಬಿಸಬೇಕಿತ್ತು. ಆದರೆ, ಈಗ ಈ ಅವಲಂಬನೆ ಪ್ರಮಾಣ ಕಡಿಮೆಯಾದಂತಾಗಿದೆ.

English summary
JSW Steel has announced plans to increase steel production capacity in its unit in Vijayanagara. By March 2020, the target is to produce 13 million tonnes of steel every year. Because of this, third unit will be set up in Vijayanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X