ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಅಧ್ಯಕ್ಷ ಸ್ಥಾನಕ್ಕೇರಲು ಜೆಪಿ ನಡ್ಡಾ ಸಜ್ಜು, ಮುಹೂರ್ತ ನಿಗದಿ

|
Google Oneindia Kannada News

ನವದೆಹಲಿ, ಜನವರಿ 13: ದೆಹಲಿ ವಿಧಾನಸಭೆ ಚುನಾವಣೆಯತ್ತ ದೆಹಲಿ ವರಿಷ್ಠರ ಗಮನ ನೆಟ್ಟಿದೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಸ್ಥಾನಕ್ಕೇರಲು ಕಾರ್ಯಕಾರಿ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಸಜ್ಜಾಗುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೇರುವ ದಿನಾಂಕ ನಿಗದಿಯಾಗಿರುವ ಸುದ್ದಿ ಬಂದಿದೆ.

ಹಾಲಿ ಅಧ್ಯಕ್ಷ ಅಮಿತ್ ಶಾ ಅವರು 2019ರ ಡಿಸೆಂಬರ್ ಅಂತ್ಯಕ್ಕೆ ತಮ್ಮ ಸ್ಥಾನದಿಂದ ಕೆಳಗಿಳಿಯುವ ಸುದ್ದಿಯಿತ್ತು. 2019ರ ಜೂನ್ ತಿಂಗಳಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜೆಪಿ ನಡ್ಡಾ ಅವರು ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮವನ್ನು ದೊಡ್ಡಮಟ್ಟದಲ್ಲಿ ಆಯೋಜಿಸಲು ಬಿಜೆಪಿ ಮುಂದಾಗಿದೆ.

ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾಗೆ ಝಡ್ ಶ್ರೇಣಿ ಭದ್ರತೆಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾಗೆ ಝಡ್ ಶ್ರೇಣಿ ಭದ್ರತೆ

ಲಭ್ಯ ಮಾಹಿತಿಯಂತೆ ಜನವರಿ 20ರಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜೆಪಿ ನಡ್ಡಾ ಅವರು ಅಧಿಕಾರ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ, ಪಕ್ಷದ ಹಾಲಿ ಅಧ್ಯಕ್ಷ ಅಮಿತ್ ಶಾ ಜೊತೆಗೆ ಕೇಂದ್ರ ಸಚಿವ ಸಂಪುಟ ಸಚಿವರು, ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿರುತ್ತಾರೆ.

JP Nadda to take over as BJP national president on Jan 20: Sources

ದೆಹಲಿ ಚುನಾವಣೆ: 70 ಕ್ಷೇತ್ರಕ್ಕೆ 1400 ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ದೆಹಲಿ ಚುನಾವಣೆ: 70 ಕ್ಷೇತ್ರಕ್ಕೆ 1400 ಬಿಜೆಪಿ ಟಿಕೆಟ್ ಆಕಾಂಕ್ಷಿಗಳು

ದೆಹಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, 70 ಕ್ಷೇತ್ರಗಳಿಗೆ ಬಂದಿರುವ 1400 ಅರ್ಜಿಗಳನ್ನು ಪರಿಶೀಲಿಸಿ ಸಂಭಾವ್ಯ ಪಟ್ಟಿ ತಯಾರಿಸಲಾಗುತ್ತಿದೆ. ದೆಹಲಿಯಲ್ಲಿ ಫೆಬ್ರವರಿ 8ರಂದು ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬರಲಿದೆ. ಜನವರಿ 14ರಿಂದ ಚುನಾವಣಾ ಆಯೋಗ ಅಧಿಸೂಚನೆ ಜಾರಿಯಾಗಲಿದೆ. ಜನವರಿ 24ರೊಳಗೆ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯಬಹುದು. 1998ರಿಂದ ದೆಹಲಿಯಲ್ಲಿ ಅಧಿಕಾರಕ್ಕೇರಲು ಸಾಹಸ ಪಟ್ಟು ಫಲ ಕಾಣದಿರುವ ಬಿಜೆಪಿಗೆ ಈ ಬಾರಿ ಅಧಿಕಾರಿ ಗದ್ದುಗೇರಲು ಭಾರಿ ತಂತ್ರಗಾರಿಕೆ ನಡೆಸಿದೆ.

English summary
BJP working president Jagat Prakash Nadda will take over as party's national president on January 20, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X