ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಜೋಶ್" ಹೆಚ್ಚಿಸುವ ಸ್ಪರ್ಧೆ: 50 ಸಾವಿರ ಬಹುಮಾನ, ಸೋನು ಸೂದ್ ಭೇಟಿ ಸುವರ್ಣಾವಕಾಶ

|
Google Oneindia Kannada News

ನವದೆಹಲಿ, ಆಗಸ್ಟ್ 19: ಭಾರತದಲ್ಲಿ ಕಿರು ವಿಡಿಯೋಗಳ ಚಿತ್ರೀಕರಣ ಸದ್ಯಕ್ಕೆ ಸಖತ್ ಟ್ರೆಂಡ್ ಆಗುತ್ತಿದೆ. ಕಿರು ವಿಡಿಯೋಗಳ ಮೂಲಕ ಸಾವಿರಾರು ಮತ್ತು ಲಕ್ಷಾಂತರ ಯುವಕ ಯುವತಿಯರಿಗೆ ಹಾಗೂ ಕಲಾವಿದರು ಸಖತ್ ಫೇಮಸ್ ಆಗುತ್ತಿದ್ದಾರೆ. ಅಂಥ ಕಿರು ವಿಡಿಯೋದ ಹವ್ಯಾಸವನ್ನು ಹೊಂದಿರುವ ಪ್ರತಿಭಾವಂತರಿಗಾಗಿಯೇ ದೇಶದ ಅತ್ಯುತ್ತಮ ಕಿರು ವಿಡಿಯೋ ಫ್ಲ್ಯಾಟ್ ಫಾರ್ಮ್ 'ಜೋಶ್' ಹೊಸ ಸ್ಪರ್ಧೆಯೊಂದನ್ನು ಪರಿಚಯಿಸುತ್ತಿದೆ.

ನಿಮ್ಮ ಒಂದೇ ಒಂದು ಕಿರು ವಿಡಿಯೋದಿಂದ ನೀವು ನಗದು ಬಹುಮಾನದ ಜೊತೆಗೆ ಬಾಲಿವುಡ್ ಸ್ಟಾರ್ ನಟ ಸೋನು ಸೂದ್ ಹಾಗೂ ಕೆಜಿಎಫ್ ಬೆಡಗಿ ಮೌನಿ ರಾಯ್ ಅವರನ್ನು ಭೇಟಿ ಮಾಡುವ ಸುವರ್ಣಾವಕಾಶ ಪಡೆದುಕೊಳ್ಳಬಹುದು.

 ಜೋಶ್ ಆ್ಯಪ್ ಮೂಲಕ ಸ್ವಾತಂತ್ರ್ಯ ದಿನಕ್ಕೆ ಶುಭಕೋರಿ, ಬಹುಮಾನ ಗೆಲ್ಲಿ ಜೋಶ್ ಆ್ಯಪ್ ಮೂಲಕ ಸ್ವಾತಂತ್ರ್ಯ ದಿನಕ್ಕೆ ಶುಭಕೋರಿ, ಬಹುಮಾನ ಗೆಲ್ಲಿ

ಪ್ರತಿದಿನ 200 ಕೋಟಿಗೂ ಹೆಚ್ಚು ಮಂದಿ ಜೋಶ್ ಆಪ್‌ನಲ್ಲಿ ವಿಡಿಯೋಗಳನ್ನು ನೋಡುತ್ತಿದ್ದು, ಕಿರು ವಿಡಿಯೋ ವಿಭಾಗದಲ್ಲಿ ಆಪ್ ಮುಂಚೂಣಿಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿಯೂ ದೊಡ್ಡ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ ಜೋಶ್ ತನ್ನ ಹೊಸ ರೀತಿಯ ಕಂಟೆಂಟ್ ಮೂಲಕ ಬಳಕೆದಾರರನ್ನು ಸೆಳೆಯುತ್ತಿದೆ. ಅತ್ಯುತ್ತಮ ತಂತ್ರಜ್ಞರ ತಂಡವನ್ನು ಹೊಂದಿರುವ ಜೋಶ್ 20000ಕ್ಕೂ ಹೆಚ್ಚು ಕಂಟೆಂಟ್ ಕ್ರಿಯೇಟರ್‌ಗಳನ್ನು ಹೊಂದಿದ್ದು ಅತ್ಯುತ್ತಮ ವಿಡಿಯೋ ಕಂಟೆಂಟ್ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ.

Josh Short Video App celebrates its first anniversary with the launch of Ek Number Challenge

ಭಾರತದ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ 'ಬ್ಲೂ ವಾರಿಯರ್' ಹೆಸರಿನಲ್ಲಿ ಜನರ ನೆರವಿಗೆ ಧಾವಿಸಿದ ಜೋಶ್ ತನ್ನ ಸೃಜನಶೀಲ ಆಲೋಚನೆಗಳಿಂದ ಸದಾ ತನ್ನ ಪ್ರತಿಸ್ಪರ್ಧಿಗಳಿಗಿಂತಲೂ ಒಂದು ಹೆಜ್ಜೆ ಮುಂದಿದೆ. ಕಿರು ವಿಡಿಯೋ ವಿಭಾಗದ ಲೀಡರ್‌ ಆಗಿರುವ ಜೋಶ್, ದೇಶದ ಜನರಿಗಾಗಿ ಒಂದು ವಿನೂತನ ಅವಕಾಶ ಹೊತ್ತು ತಂದಿದೆ. ಅದುವೇ 'ಏಕ್ ನಂಬರ್' ಚಾಲೆಂಜ್.

'ಏಕ್ ನಂಬರ್' ಹೆಸರಿನ ಹೊಸ ಚಾಲೆಂಜ್:

ಜೋಶ್' ಆಪ್‌ ಕಾರ್ಯ ಆರಂಭಿಸಿ ಒಂದು ವರ್ಷ ಪೂರೈಸಿದೆ. ಈ ಸಂಭ್ರಮವನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ 'ಏಕ್ ನಂಬರ್' ಹೆಸರಿನ ಹೊಸ ಚಾಲೆಂಜ್ ಅನ್ನು ಪರಿಚಯಿಸಲಾಗುತ್ತಿದೆ. ಡ್ಯಾನ್ಸ್, ಫೂಡ್, ಫ್ಯಾಷನ್, ಕಾಮಿಡಿ, ಫಿಟ್‌ನೆಸ್ ಯಾವುದೇ ವಿಭಾಗದಲ್ಲಿ ವಿಡಿಯೋಗಳನ್ನು ಚಿತ್ರಿಸಿ ಜೋಶ್ ಆಪ್‌ಗೆ ಅಪ್‌ಲೋಡ್ ಮಾಡಬೇಕು. ನೀವು ಅಪ್‌ಲೋಡ್ ಮಾಡಿದ ವಿಡಿಯೋಗಳಲ್ಲಿನ ವಿಷಯ ಮತ್ತು ಭಾವಾರ್ಥವನ್ನು ದೇಶದ ಸೆಲೆಬ್ರಿಟಿ ಕಂಟೆಂಟ್ ಕ್ರಿಯೇಟರ್‌ಗಳು ವೀಕ್ಷಿಸಿ, ಪರಿಶೀಲಿಸುತ್ತಾರೆ.

ಅತ್ಯುತ್ತಮ ಕಂಟೆಂಟ್ ಅನ್ನು ಹೊಂದಿರುವ 120 ವಿಡಿಯೋಗಳನ್ನು ಆಯ್ಕೆ ಮಾಡಲಾಗುತ್ತದೆ. ಈ 120 ಮಂದಿ ಹತ್ತು ದಿನಗಳ ಕಾಲ ಕಿರು ವಿಡಿಯೋಗಳನ್ನು ಅಪ್‌ಲೋಡ್ ಮಾಡಬೇಕು. ಹತ್ತು ದಿನದ ಬಳಿಕ ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್‌ಗಳನ್ನು ಜಡ್ಜ್ ಮಾಡಿ ವಿಜೇತರನ್ನು ಘೋಷಿಸಲಾಗುತ್ತದೆ. ಆಗಸ್ಟ್ 17ರಿಂದ ಚಾಲೆಂಜ್ ಪ್ರಾರಂಭವಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದ ಎಲ್ಲರಿಗೂ 50,000 ನಗದು ಬಹುಮಾನದ ಜೊತೆಗೆ ಸೋನು ಸೂದ್, ಮೌನಿ ರಾಯ್ ಹಾಗೂ ಇತರೆ ಸೆಲೆಬ್ರಿಟಿ ಕಂಟೆಂಟ್ ಕ್ರಿಯೇಟರ್‌ಗಳನ್ನು ಭೇಟಿ ಮಾಡುವ ಅವಕಾಶ ಪಡೆದುಕೊಳ್ಳುತ್ತಾರೆ. ಇದರ ಜೊತೆಗೆ ವಿಜೇತರು 'ಜೋಶ್ ಅಕಾಡೆಮಿ'ಗೆ ಸೇರಿ ತರಬೇತಿ ಪಡೆದು ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್ ಆಗುವ ಅವಕಾಶವೂ ಇದೆ.

ವಿಡಿಯೋ ಅಪ್‌ಲೋಡ್ ವೇಳೆ ಟ್ಯಾಗ್ ಮರೆಯದಿರಿ:

ಭಾರತದ ಯಾವುದೇ ಮೂಲೆಯಲ್ಲಿದ್ದರೂ ನೀವು ಈ ಜೋಶ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆದರೆ ಜೋಶ್ ಆಪ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡುವಾಗ ಯಾವುದೇ ಕಾರಣಕ್ಕೂ #EkNumber #EkNumberDanceStar #EkNumberFashionStar #EkNumberFoodStar #EkNumberComedyStar #EkNumberFitnessStar ಹ್ಯಾಷ್‌ಟ್ಯಾಗ್‌ಗಳನ್ನು ಮರೆಯುವಂತಿಲ್ಲ.

ಕಿರು ವಿಡಿಯೋಗಳ ಪರಿಶೀಲನೆ ಹೇಗಿರುತ್ತದೆ?:

ಜೋಶ್‌ನ 'ಏಕ್‌ ನಂಬರ್' ಚಾಲೆಂಜ್‌ಗೆ ನೀವು ಕಳುಹಿಸುವ ವಿಡಿಯೋಗಳನ್ನು ಪರಿಶೀಲಿಸಲು ದೇಶದ ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್‌ಗಳಾದ ಫೈಜು, ಸಮೀಕ್ಷಾ, ಎಷಾನ್, ಮಧುರಾ ಮತ್ತು ಶದಾನ್ ಸೆಲೆಬ್ರಿಟಿಗಳಾದ ರಣ್ವೀರ್ ಬ್ರಾರ್, ರೂಹಿ ಸಿಂಗ್ ಸೇರಿದಂತೆ ಇನ್ನೂ ಹಲವರಿದ್ದಾರೆ. ಈ ಸವಾಲಿಗೆ ಇನ್ನಷ್ಟು ಫನ್ ತುಂಬಲು ಐಜಿ ಫಿಲ್ಟರ್, ಜೋಶ್ ಫಿಲ್ಟರ್‌ಗಳನ್ನು ಸಹ ಜೋಶ್ ಆಪ್‌ನಲ್ಲಿ ಪರಿಚಯಿಸಲಾಗಿದೆ. ಇವುಗಳನ್ನು ಬಳಸಿಕೊಂಡು ಕಿರು ವಿಡಿಯೋವನ್ನು ಇನ್ನಷ್ಟು ಅಂದವಾಗಿ, ಪರಿಣಾಮಕಾರಿ ಮಾಡಬಹುದಾಗಿದೆ.

ಜೋಶ್‌ನ 'ಏಕ್ ನಂಬರ್' ಸವಾಲಿಗೆ ಹೆಚ್ಚಿನ ಉತ್ಸಾಹ ತುಂಬಲು 'ಆಜಾ ಜೋಶ್‌ ಪೆ' ಹೆಸರಿನ ಹಾಡನ್ನು ಸಹ ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್‌ನಲ್ಲಿ ಹಾಗೂ ಜೋಶ್‌ ಆಪ್‌ನಲ್ಲಿ ಲಭ್ಯವಿರುವ ಈ ಹಾಡನ್ನು ಕ್ಲಿಂಟನ್ ಸೆರೆಜೊ ಹಾಗೂ ಬಿಯಾಂಕಾ ಗೋಮೆಸ್ ಸಂಯೋಜಿಸಿದ್ದಾರೆ. ಹಾಡಿನಲ್ಲಿ ಸೋನು ಸೂದ್, ಮೌನಿ ರಾಯ್ ಹಾಗೂ ಇತರೆ ಸೆಲೆಬ್ರಿಟಿಗಳು ಇದ್ದಾರೆ.

English summary
Josh, India's largest short video maker app Celebrating its first anniversary, Josh has come up with a special challenge titled 'Ek Number', which will be spearheaded by two of India's most popular stars, actors Sonu Sood and Mouni Roy as well as Bharat's top influencers. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X