ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NoMeansNo ಅಭಿಯಾನ: ಇದು ಜೋಶ್ ಆ್ಯಪ್‌ನ ಕಳಕಳಿ

Google Oneindia Kannada News

ಜೋಶ್ ಆ್ಯಪ್ ಎನ್ನುವುದು ಕೇವಲ ಮನರಂಜನಾ ವೇದಿಕೆ ಮಾತ್ರವಲ್ಲ ಸಾಮಾಜಿಕ ಕಳಕಳಿಯೂ ಇದರ ಧ್ಯೇಯವಾಗಿದೆ. NoMeansNo ಅಭಿಯಾನದ ಮೂಲಕ ಇದು ಮತ್ತೊಮ್ಮೆ ಸಾಬೀತಾಗಿದೆ, ದೇಶದಲ್ಲಿ ನಡೆಯುತ್ತಿರುವ ಕಿರುಕುಳದ ಸುದ್ದಿಗಳನ್ನು ಆಧರಿಸಿ ಇಂಥದ್ದೊಂದು ಅಭಿಯಾನ ನಡೆಸಲಾಗಿತ್ತು.

ಗೂಗಲ್‌ನಲ್ಲಿ ಇಂತಹ ಪ್ರಕರಣಗಳನ್ನು ಸರ್ಚ್ ಮಾಡಿದಾಗ ಸಾಕಷ್ಟು ಅನ್ಯಾಯದ ಘಟನೆಗಳು ಕಣ್ಣೆದುರು ಬರುತ್ತವೆ, ಇದರಲ್ಲಿ ಸಾಕಷ್ಟು ಮಂದಿಗೆ ನ್ಯಾಯ ಸಿಗದ ಪರಿಸ್ಥಿತಿಯೂ ಇರಬಹುದು.

ಇಚ್ಚೀಚೆಗಷ್ಟೇ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಕಿರುಕುಳ ಎಲ್ಲೆಡೆ ಸುದ್ದಿಯಾಗಿತ್ತು, ಟ್ವಿಟ್ಟರ್‌ನಲ್ಲೂ ಕೂಡ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸುವ ಕುರಿತು ಅಭಿಯಾನವೂ ನಡೆದಿತ್ತು.

JOSH App Is Running NoMeansNo Campaign To Spread Awareness About Women Harassment

ಇದಾದ ಬಳಿಕ ಜೋಶ್ ಕೂಡ NoMeansNo ಅಭಿಯಾನವನ್ನು ಮಾಡಿತು. ಇದಕ್ಕೆ ದಕ್ಷಿಣ ಭಾರತದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಕೂಡ ಬಂದಿದೆ. ಕಿರುಕುಳದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ವಿಡಿಯೋಗಳು ಬಂದವು, ಕ್ರಿಯೇಟರ್‌ಗಳಖು ಕೂಡ ಜೋಶ್‌ನ ಸಾಮಾಜಿಕ ಕಳಕಳಿಯನ್ನು ನೋಡಿ ಖುಷಿ ಪಟ್ಟರು.

ವಿಡಿಯೋ ವೀಕ್ಷಣೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಜೋಶ್ ಆ್ಯಪ್ NoMeansNo ಎನ್ನುವ ವಿಶೇಷ ಅಭಿಯಾನವನ್ನು ಆರಂಭಿಸಿತು, ಇಂಥಹದ್ದೊಂದು ಅದ್ಭುತ ಅಭಿಯಾನದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ, ಪ್ರತಿ ವರ್ಷ ಲಕ್ಷಾಂತರ ಮಹಿಳೆಯರು ಕೌಟುಂಬಿಕ ದೌರ್ಜನ್ಯದ ಬಲಿಪಶುಗಳಾಗುತ್ತಿದ್ದಾರೆ.

ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲಿನ ಇಂತಹ ಹಿಂಸೆಯನ್ನು ಎಲ್ಲರೂ ಸೇರಿ ಬದಲಾಯಿಸಬೇಕಿದೆ. ಕಲಾವಿದರು ಇದನ್ನು ವಿಭಿನ್ನ ರೀತಿಯಲ್ಲಿ ಹೇಳುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಹಾಗೆಯೇ ಬೇರೆಯವರ ಮನ ಪರಿವರ್ತನೆ ಮಾಡುವ ಶಕ್ತಿಯೂ ಇದೆ. ಕಲೆಯ ಮೂಲಕ ಜನರ ಮನಸ್ಸನ್ನು ಬದಲಿಸಬಹುದಾಗಿದೆ. ಹೀಗಾಗಿ ನಿಮ್ಮ ಬದುಕಿನಲ್ಲಿ ಕಂಡ ಇಂತಹ ವಿಚಾರಗಳನ್ನು ಮುನ್ನೆಲೆಗೆ ತನ್ನಿ ನಿಮ್ಮ ಕತೆಯನ್ನು NoMeansNo ನೋ ಸಾಮಾಜಿಕ ಕಳಕಳಿ ಅಭಿಯಾನದಲ್ಲಿ ಹಂಚಿಕೊಳ್ಳಿ ಎಂದು ರಕ್ಷಿತಾ ತಮ್ಮ ವಿಡಿಯೋ ಮೂಲಕ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X