ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಕ್ಸ್, ಮೀಮ್ಸ್ ಗಳಲ್ಲಿ GST ಅಸಲಿ ಅರ್ಥ ಬಹಿರಂಗ

By Mahesh
|
Google Oneindia Kannada News

ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ಇಡೀ ದೇಶವೇ ತನ್ನತ್ತ ನೋಡುವಂತೆ ಮಾಡಿದೆ. ಎಷ್ಟೋ ಮಂದಿಗೆ ಜುಲೈ 1ರ ಬೆಳಗ್ಗೆ ಭಾಗ್ಯೋದಯವಾಗುವ ನಿರೀಕ್ಷೆಗಳಿವೆ. ಇನ್ನೆಷ್ಟೋ ಮಂದಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಗುಮ್ಮನಂತೆ ಮಾಡುತ್ತಿದೆ.

GST ಎಂದರೇನು? ವಿಸ್ತರಿಸಿ ಬರೆಯಿರಿ ಎಂದು ಪ್ರಶ್ನಿಸಿದರೆ ಫೇಲಾಗುವವರ ಸಂಖ್ಯೆಯೆ ಅಧಿಕವಾಗಿರುವುದರಲ್ಲಿ ಸಂಶಯವಿಲ್ಲ. ಜಿಎಸ್ ಟಿ ಕೆಲವರಿಗೆ ಕಬ್ಬಿಣದ ಕಡಲೆಯಾದರೆ, ಮತ್ತೆ ಕೆಲವರಿಗೆ ಬಾಯಿಗೆ ಲಡ್ಡು ಬಿದ್ದಂತೆ ಆಗಲಿದೆ.

Jokes, Memes, Trolls on GST

ಸಾಮಾಜಿಕ ಜಾಲ ತಾಣಗಳಾದ ಟ್ವಿಟ್ಟರ್, ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಜಿಎಸ್ ಟಿ ಕುರಿತಂತೆ ಜೋಕ್ಸ್, ಮೀಮ್ಸ್, ಟ್ರಾಲ್ಸ್ ಮುಂದುವರೆಯುತ್ತಲೆ ಇವೆ. ಜಿಎಸ್ ಟಿ ಮಂಡನೆ ಬಳಿಕ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ವಾಟ್ಸಪ್ ಜೋಕುಗಳು
GST ಅಂದರೆ
G- ಗಾಂಚಾಲಿ ಮಾಡ್ದೆ
S - ಸುಮ್ನೆ
T - ಟ್ಯಾಕ್ಸ್ ಕಟ್ಟು

****

GST ಬಗ್ಗೆ ವಿವರಣೆ

ಜಿಎಸ್ ಟಿ ಅರ್ಥ ಮಾಡಿಕೊಳ್ಳುವುದು ತುಂಬಾ ಸುಲಭ. ಮದುವೆಗೆ ಮುಂಚೆ ಮನೆಗೆ ರಾತ್ರಿ ತಡವಾಗಿ ಬಂದರೆ, ಮೊದಲಿಗೆ ನಿಮ್ಮ ತಂಗಿ/ಅಕ್ಕ, ನಂತರ ಅಮ್ಮ ಕೊನೆಗೆ ಅಪ್ಪನಿಗೆ ಉತ್ತರ ಹೇಳ ಬೇಕಾಗುತ್ತದೆ. ಆದರೆ, ಮದುವೆಯಾದವರಿಗೆ ಎಲ್ಲಾ ಫ್ಯಾಮಿಲಿ ಸದಸ್ಯರಿಗೆ ತಿಳಿಸುವ ಸಮಸ್ಯೆ ಇಲ್ಲ. ಹೆಂಡತಿಗೆ ಉತ್ತರ ಹೇಳಿದರೆ ಸಾಕು.

***

GST ಅಂದರೆ

G-Good Night

S-Sweet Dreams

T -Take Care

***

ಕೃಷ್ಣ ಅರ್ಜುನನಿಗೆ ಹೇಳುತ್ತಾನೆ
ಅರ್ಜುನ! ಏನೆಂದು ಅಳುವೆ. ಪರಿವರ್ತನೆ ಜಗದ ನಿಯಮ.

ನಿನ್ನೆ ಮಾರಾಟ ತೆರಿಗೆಯಾಗಿದ್ದದ್ದು ಇಂದು ವ್ಯಾಟ್ ಆಗಿದೆ, ನಾಳೆ ಜಿಎಸ್‍ಟಿ ಆಗುತ್ತದೆ, ನೀನು ಗಳಿಸಿದ್ದೇನು?
ಕೊಡುವುದನ್ನು ಗ್ರಾಹಕ ಕೊಟ್ಟ. ನೀವನು ಸರ್ಕಾರಕ್ಕೆ ಕೊಟ್ಟೆ, ಉಳಿದಿದ್ದನ್ನು ಹೆಂಡತಿಯ ಕೈಗಿಟ್ಟೆ.

ನಿನ್ನ ಬಳಿ ಎಂದೂ ಏನೂ ಇರಲಿಲ್ಲ. ಏನೂ ನಿನ್ನದಲ್ಲ, ಏಕೆ ರೋಧಿಸುವೆ?

****
ದೀಪಿಕಾ ಪಡುಕೋಣೆ ಮದುವೆ ಆಫರ್ ಬಂದರೆ

ಆಲ್ಕೋಹಾಲ್ ಮೇಲೆ ತೆರಿಗೆ ಹೊರೆ ಕಂಡಾಗ ಸಿಕ್ಕ ಪ್ರತಿಕ್ರಿಯೆ

ಜಿಎಸ್ ಟಿ ಗೆ ಸ್ವಾಗತ

ಜಿಎಸ್ ಟಿ ಎಂದರೇನು ಎಂದು ಚಂದ್ರಬಾಬು ನಾಯ್ಡು ಅವರು ತಮ್ಮ ಮಗನನ್ನು ಕೇಳಿದಾಗ

English summary
Social media is abuzz with implementation of Good and Service Tax. Here are the collection of jokes, memes and trolls on GST
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X