• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಭಯ ಸದನಗಳಲ್ಲಿ ದತ್ತಾಂಶ ಸಂರಕ್ಷಣಾ ಮಸೂದೆ 2019 ಮಂಡನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 17: 'ದತ್ತಾಂಶ ಸಂರಕ್ಷಣಾ ಮಸೂದೆ 2019' ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಮಂಡನೆಯಾಗಿದೆ. ಬಿಜೆಪಿ ಸಂಸದ ಪಿಪಿ ಚೌಧರಿ ಅವರ ನೇತೃತ್ವದಲ್ಲಿ ಜಂಟಿ ಸಂಸದೀಯ ಸಮಿತಿಯು ಮಂಡಿಸಿದೆ.

ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ(2019)ಯ ಕರಡು ವರದಿಯ ಪರಿಗಣನೆ ಮತ್ತು ಅಳವಡಿಕೆ ಸಭೆಯ ಕಾರ್ಯಸೂಚಿಯಲ್ಲಿದೆ. ಕೇಂದ್ರ ಸಚಿವ ಸಂಪುಟವು 2019ರ ಡಿಸೆಂಬರ್‌ನಲ್ಲಿ ಭಾರತೀಯ ನಾಗರಿಕರ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯೊಂದಿಗೆ ವ್ಯವಹರಿಸುವ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ-2019 ಜಾರಿಗೆ ಅನುಮೋದನೆ ನೀಡಿತ್ತು.

2017ರಲ್ಲಿ ಗೌಪ್ಯತೆ ಮೂಲ ಹಕ್ಕು ಎಂದು ಸುಪ್ರೀಂಕೋರ್ಟ್‌ ತೀರ್ಪಿನ ನಂತರ ಮಸೂದೆಯನ್ನು ರಚಿಸಲಾಗಿದೆ. ಮಸೂದೆಯ ಕರಡು ವರದಿಯನ್ನು ಪರಿಗಣಿಸಲು ಹಾಗೂ ಅಂಗೀಕರಿಸಲು ಸಂಸತ್ತಿನ ಜಂಟಿ ಸಮಿತಿಯು ನ. 12 ರಂದು ದೆಹಲಿಯಲ್ಲಿ ಸಭೆ ನಡೆಸಿತ್ತು. 2019ರ ಡಿಸೆಂಬರ್‌ 11 ರಂದು ಲೋಕಸಭೆಯಲ್ಲಿ ಮಂಡಿಸಲಾದ 'ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ-2019' ಅನ್ನು ಪರಿಶೀಲಿಸಲು ಜಂಟಿ ಸಮಿತಿ ರಚಿಸಲಾಗಿದೆ.

ವೈಯಕ್ತಿಕ ಡೇಟಾಗೆ ಸಂಬಂಧಿಸಿದ ವ್ಯಕ್ತಿಗಳ ಗೌಪ್ಯತೆಯ ರಕ್ಷಣೆ, ವೈಯಕ್ತಿಕ ಡೇಟಾದ ಹರಿವು ಮತ್ತು ಬಳಕೆ ನಿರ್ದಿಷ್ಟಪಡಿಸುವುದು, ವೈಯಕ್ತಿಕ ಡೇಟಾ ಪ್ರಕ್ರಿಯೆಗೊಳಿಸುವ ವ್ಯಕ್ತಿಗಳು ಮತ್ತು ಘಟಕಗಳ ನಡುವೆ ನಂಬಿಕೆಯ ಸಂಬಂಧವನ್ನು ಸೃಷ್ಟಿಸುವುದು, ವೈಯಕ್ತಿಕ ಡೇಟಾ ಹೊಂದಿರುವ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವುದು ಈ ಮಸೂದೆಯ ಗುರಿಯಾಗಿದೆ.

ಡೇಟಾ ಸಂಸ್ಕರಣೆಯಲ್ಲಿ ಸಾಂಸ್ಥಿಕ ಮತ್ತು ತಾಂತ್ರಿಕ ಕ್ರಮಗಳಿಗಾಗಿ ಚೌಕಟ್ಟನ್ನು ರಚಿಸಲು, ಸಾಮಾಜಿಕ ಮಾಧ್ಯಮ ಮಧ್ಯವರ್ತಿ, ಗಡಿಯಾಚೆಗಿನ ವರ್ಗಾವಣೆ, ವೈಯಕ್ತಿಕ ಡೇಟಾವನ್ನು ಸಂಸ್ಕರಿಸುವ ಘಟಕಗಳ ಹೊಣೆಗಾರಿಕೆ, ಅನಧಿಕೃತ ಮತ್ತು ಹಾನಿಕಾರಕ ಪ್ರಕ್ರಿಯೆಗೆ ಪರಿಹಾರಗಳು ಮತ್ತು ಡೇಟಾವನ್ನು ಸ್ಥಾಪಿಸಲು ಮಾನದಂಡಗಳನ್ನು ಭಾರತದ ರಕ್ಷಣಾ ಪ್ರಾಧಿಕಾರ ರೂಪಿಸಲಿದೆ.

ಡೇಟಾ ದುರುಪಯೋಗ ತಡೆಗಟ್ಟಲು ರೂಪಿಸಿರುವ ದತ್ತಾಂಶ ಸಂರಕ್ಷಣಾ ಮಸೂದೆ ಕರಡನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮತಿ ನೀಡಿದೆ.

*ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ- 2019 (Personal Data Protection Bill, 2019) ಕುರಿತು ಚರ್ಚಿಸಲು ಬಿಜೆಪಿ ಸಂಸದ ಪಿಪಿ ಚೌಧರಿ ಅವರ ನೇತೃತ್ವದಲ್ಲಿ ಜಂಟಿ ಸಂಸದೀಯ ಸಮಿತಿಯು (Joint Parliamentary Committee) ದೆಹಲಿಯಲ್ಲಿ ನವೆಂಬರ್‌ನಲ್ಲಿ ಸಭೆ ಕರೆದಿತ್ತು.

ವೈಯಕ್ತಿಕ ಡೇಟಾವನ್ನು ಕಡ್ಡಾಯವಾಗಿ ಶೇಖರಣೆ ಮಾಡುವುದು. ಡೇಟಾ ಸಂಸ್ಕರಣೆ ಸಡಿಲಗೊಳಿಸುವುದು ಹಾಗೂ ಡೇಟಾ ದುರುಪಯೋಗಕ್ಕೆ 15 ಕೋಟಿ ರೂಪಾಯಿ ಮೊತ್ತ ದಂಡ ವಿಧಿಸುವ ಪ್ರಸ್ತಾವನೆ ಮಸೂದೆಯ ಕರಡಿನಲ್ಲಿ ಇದೆ. ರಾಷ್ಟ್ರದಲ್ಲಿರುವ ಎಲ್ಲ ಜನರ ಡೇಟಾವನ್ನು ಸಂಗ್ರಹಿಸಬೇಕು.

* ಸಂಗ್ರಹಿಸಿದ ಡೇಟಾವನ್ನು ಸೂಕ್ಷ್ಮ, ವೈಯಕ್ತಿಕ ಮತ್ತು ವಿಮರ್ಶಾತ್ಮಕ ವೈಯಕ್ತಿಕ ಡೇಟಾ ಎಂದು ವರ್ಗೀಕರಿಸಸಬೇಕು. ಸೂಕ್ಷ್ಮ ದತ್ತಾಂಶವು ಪಾಸ್‌ವರ್ಡ್‌. ಹಣಕಾಸು, ಆರೋಗ್ಯ, ಲೈಂಗಿಕ ದೃಷ್ಟಿಕೋನ, ಬಯೋಮೆಟ್ರಿಕ್, ಆನುವಂಶಿಕ, ಲಿಂಗ, ಹಾಗೂ ಜಾತಿಯ ಡೇಟಾವನ್ನು ಇದು ಒಳಗೊಂಡಿದೆ. ಈ ನಿರ್ಣಾಯಕ ಡೇಟಾವನ್ನು ಸರ್ಕಾರ ಕಾಲಕಾಲಕ್ಕೆ ವ್ಯಾಖ್ಯಾನಿಸುತ್ತದೆ.

*ಮಸೂದೆಯನ್ನು ಸಂಸತ್ತು ಅಂಗೀಕರಿಸಿದ ನಂತರ, ಡೇಟಾವನ್ನು ಕಾನೂನಿನ ಅಡಿಯಲ್ಲಿ ಅನುಮತಿ ನೀಡಲಾದ ಉದ್ದೇಶಗಳಿಗೆ ಮಾತ್ರ ಅದನ್ನು ಬಳಸಬಹುದಾಗಿದೆ. ಡೇಟಾವನ್ನು ವಿದೇಶಕ್ಕೆ ವರ್ಗಾಯಿಸಬೇಕಾದರೆ ಅನುಮತಿ ಅಗತ್ಯ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

*ಸಂಗ್ರಹಿಸಿದ ಡೇಟಾವನ್ನು ಸರ್ಕಾರದ ನೀತಿ, ಸೇವೆ, ಪರಿಹಾರ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಸಿಕೊಳ್ಳಲು ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ಇದೆ. ಆದರೆ ವೈಯಕ್ತಿಕವಲ್ಲದ ಡೇಟಾದ ಇತರ ಎಲ್ಲ ಅಂಶಗಳನ್ನು ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ನೇತೃತ್ವದ ಸಮಿತಿಯು ನಿರ್ವಹಿಸುತ್ತದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

*ದತ್ತಾಂಶ ಸಂರಕ್ಷಣಾ ಮಸೂದೆ 2019 ಕುರಿತು ಸಂಸತ್ತಿನ ಜಂಟಿ ಸಮಿತಿಯ ವರದಿಯನ್ನು ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸಲಾಗಿದೆ. ಈ ಬಹುನಿರೀಕ್ಷಿತ ವರದಿಯು ಹಲವಾರು ಸುತ್ತಿನ ಸಭೆಗಳನ್ನು ಹಾಗೂ ಹಲವಾರು ಬಾರಿ ಚರ್ಚೆಯನ್ನು ನಡೆಸಿ ಸಿದ್ಧ ಪಡಿಸಲಾಗಿದೆ.

* ಈ ಸಮಿತಿಯು 200 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಆ ಪೈಕಿ 170 ತಿದ್ದುಪಡಿಯನ್ನು ಲೋಕಸಭೆ ಸಂಸದರು, ಸಮಿತಿಯ ಅಧ್ಯಕ್ಷ ಪಿಪಿ ಚೌಧರಿ ಪ್ರಸ್ತಾಪ ಮಾಡಿದ್ದಾರೆ.

*ಈ ಮಸೂದೆಯನ್ನು ಈ ಹಿಂದೆ ವೈಯಕ್ತಿಕ ಡೇಟಾ ರಕ್ಷಣೆ ಎಂದು ಕರೆಯಲಾಗುತ್ತಿತ್ತು, ಆದರೆ ಈಗ ಡೇಟಾ ಸಂರಕ್ಷಣಾ ಮಸೂದೆ ಅಂದರೆ ದತ್ತಾಂಶ ಸಂರಕ್ಷಣಾ ಮಸೂದೆ ಎಂದು ಕರೆಯಲಾಗುತ್ತದೆ. ಈ ಮಸೂದೆಯು ವೈಯಕ್ತಿಕ ಹಾಗೂ ವ್ಯಕ್ತಿಗತವಲ್ಲದ ವಿಚಾರಗಳನ್ನು ಕೂಡಾ ಪ್ರಸ್ತಾಪ ಮಾಡುವ ಹಿನ್ನೆಲೆಯಿಂದಾಗಿ ಈ ಮಸೂದೆಯಲ್ಲಿನ ವೈಯಕ್ತಿಕ ಎಂಬ ಶಬ್ದವನ್ನು ತೆಗೆದು ಹಾಕಲಾಗಿದೆ.

*ಈ ಮಸೂದೆಯು ರಾಷ್ಟ್ರೀಯ ಭದ್ರತೆ, ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯ ವಿಷಯಗಳನ್ನೂ ಒಳಗೊಂಡಿರುತ್ತದೆ. ಈ ಮಸೂದೆಯು ವ್ಯಕ್ತಿಗಳ ವೈಯಕ್ತಿಕ ಡೇಟಾದ ರಕ್ಷಣೆಯನ್ನು ಒದಗಿಸಲು ಮತ್ತು ಅದಕ್ಕಾಗಿ ಡೇಟಾ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ. ಆದರೆ ಈ ಮಸೂದೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದೆ.

English summary
The Joint Parliamentary Committee (JPC) report on the Personal Data Protection (PDP) Bill, 2019 was tabled in both Houses of Parliament on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X