ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Janssen ಲಸಿಕೆ ಪ್ರಯೋಗ; ಅರ್ಜಿ ಹಿಂಪಡೆದುಕೊಂಡ ಜಾನ್ಸನ್ & ಜಾನ್ಸನ್

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಆಗಸ್ಟ್ 02: ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಭಾರತದಲ್ಲಿ ತನ್ನ ಲಸಿಕೆಯ ಪ್ರಯೋಗಕ್ಕೆ ಅನುಮತಿ ಕೋರಿದ್ದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಸೋಮವಾರ ಅರ್ಜಿಯನ್ನು ಹಿಂಪಡೆದುಕೊಂಡಿದೆ.

ಕೊರೊನಾ ವಿರುದ್ಧ Janssen ಎಂಬ ಲಸಿಕೆಯನ್ನು ಜಾನ್ಸನ್ ಅಂಡ್ ಜಾನ್ಸನ್ ಅಭಿವೃದ್ಧಿಪಡಿಸಿದ್ದು, ಈ ಲಸಿಕೆಯ ಪ್ರಯೋಗಕ್ಕೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿತ್ತು. ಇದೀಗ ಅರ್ಜಿಯನ್ನು ವಾಪಸ್ ಪಡೆದುಕೊಂಡಿರುವುದಾಗಿ ಭಾರತೀಯ ಔಷಧ ನಿಯಂತ್ರಕ ಸಂಸ್ಥೆ-ಡಿಸಿಜಿಐ ಮಾಹಿತಿ ನೀಡಿದೆ.

'ನಮ್ಮ ಒಂದು ಡೋಸ್‌ ಲಸಿಕೆ ಡೆಲ್ಟಾ ವಿರುದ್ದ ಪರಿಣಾಮಕಾರಿ': ಜಾನ್ಸನ್ & ಜಾನ್ಸನ್‌'ನಮ್ಮ ಒಂದು ಡೋಸ್‌ ಲಸಿಕೆ ಡೆಲ್ಟಾ ವಿರುದ್ದ ಪರಿಣಾಮಕಾರಿ': ಜಾನ್ಸನ್ & ಜಾನ್ಸನ್‌

ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಭಾರತದಲ್ಲಿ ಲಸಿಕೆಯ ಪ್ರಯೋಗಕ್ಕೆ ಅನುಮೋದನೆ ನೀಡುವಂತೆ ಡಿಸಿಜಿಐಗೆ ಅರ್ಜಿ ಸಲ್ಲಿಸಿತ್ತು. ಲಸಿಕೆಯ ವೈದ್ಯಕೀಯ ಅಧ್ಯಯನಕ್ಕೆ ಅನುಮತಿ ನೀಡುವಂತೆ ಏಪ್ರಿಲ್ ತಿಂಗಳಿನಲ್ಲಿ ಕೇಳಿಕೊಂಡಿತ್ತು. ಸ್ಥಳೀಯ ನಿಯಮಗಳಿಗೆ ಅನುಸಾರವಾಗಿ ಭಾರತದಲ್ಲಿ ಏಕ ಡೋಸ್ ಲಸಿಕೆಯ ಅಧ್ಯಯನ ನಡೆಸಲು ಅನುಮತಿ ಅಗತ್ಯವೆಂದು ತಿಳಿಸಿತ್ತು.

 Johnson & Johnson Withdraws Application For Approval Of COVID-19 Vaccine In India

ವಿಶ್ವ ಆರೋಗ್ಯ ಸಂಸ್ಥೆ, ಇಎಂಎಯಿಂದ ಅನುಮೋದಿಸಲಾದ ಈ ಕೊರೊನಾ ಲಸಿಕೆಯ ಅಧ್ಯಯನದ ಅಗತ್ಯವಿಲ್ಲವೆಂದು ಭಾರತ ಹೇಳಿತ್ತು.

"ಡಿಸಿಜಿಐನ ಇತ್ತೀಚಿನ ಪ್ರಕಟಣೆ ಪ್ರಕಾರ, ಭಾರತದಲ್ಲಿ ಸದ್ಯಕ್ಕೆ ಕೊರೊನಾ ಲಸಿಕೆಯ ವೈದ್ಯಕೀಯ ಅಧ್ಯಯನಗಳನ್ನು ನಡೆಸುವ ಅವಶ್ಯಕತೆಯಿಲ್ಲ ಎಂದು ತಿಳಿಸಲಾಗಿದೆ. ನಮ್ಮ ಏಕ ಡೋಸ್ ಲಸಿಕೆಯನ್ನು ಭಾರತಕ್ಕೆ ತಲುಪಿಸುವ ನಮ್ಮ ಸಾಮರ್ಥ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದರ ಕುರಿತು ಅನ್ವೇಷಣೆ ನಡೆಸುತ್ತಿದ್ದೇವೆ. ಈ ಕುರಿತು ಭಾರತ ಸರ್ಕಾರದೊಂದಿಗೆ ಚರ್ಚಿಸುತ್ತಿದ್ದೇವೆ" ಎಂದು ಸೋಮವಾರ ಜಾನ್ಸನ್ ಅಂಡ್ ಜಾನ್ಸನ್ ಘೋಷಣೆ ಮಾಡಿದೆ.

ಏಪ್ರಿಲ್‌ನಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಡಿಸಿಜಿಐಗೆ ಅರ್ಜಿ ಸಲ್ಲಿಸಿದ್ದ ಸಂದರ್ಭ ಅಮೆರಿಕದಲ್ಲಿ ಈ ಲಸಿಕೆ ಪ್ರಯೋಗ ನಡೆಯುತ್ತಿತ್ತು. ಆಗ ಈ ಲಸಿಕೆ ಪಡೆದುಕೊಂಡ ನಂತರ ರಕ್ತ ಹೆಪ್ಪುಗಟ್ಟುವಿಕೆಯ ಅಪರೂಪದ ಸಮಸ್ಯೆ ಕಂಡುಬಂದಿರುವುದಾಗಿ ವರದಿಯಾಗಿತ್ತು.

ಈ ಲಸಿಕೆಯ ಸುರಕ್ಷತೆ ಕುರಿತು ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಅರ್ಜಿ ಹಿಂಪಡೆದುಕೊಂಡಿದೆ. ಲಸಿಕೆ ಉತ್ಪಾದಕರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸರ್ಕಾರ ತಿಳಿಸಿದೆ.

"ಕೇಂದ್ರದ ತಂಡವು ಲಸಿಕೆ ಸಂಬಂಧ ಫೈಜರ್, ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ. ಲಸಿಕೆ ಕುರಿತು ಹಲವು ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ" ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವೆ ಭಾರತೀ ಪ್ರವೀಣ್ ಪವಾರ್ ತಿಳಿಸಿದ್ದಾರೆ.

ಜಾನ್ಸನ್ & ಜಾನ್ಸನ್ ಸಂಸ್ಥೆಯ ಕೊರೊನಾ ವೈರಸ್‌ ಲಸಿಕೆ ಪಡೆದ ಎಂಟು ತಿಂಗಳ ನಂತರವೂ ಹೆಚ್ಚು ಸಾಂಕ್ರಾಮಿಕವಾಗಿರುವ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ತಿಳಿಸಿತ್ತು. ಈ ಲಸಿಕೆಯು ಕೊರೊನಾ ಸೋಂಕಿನ ರೂಪಾಂತರಗಳ ವಿರುದ್ಧ ಶೇ.85 ರಷ್ಟು ಪರಿಣಾಮಕಾರಿಯಾಗಿದೆ. ಈ ಲಸಿಕೆ ಪಡೆದವರಿಗೆ ಕೊರೊನಾ ರೂಪಾಂತರ ತಗುಲಿದರೆ ಆಸ್ಪತ್ರೆಗೆ ದಾಖಲಾಗುವುದನ್ನು ಹಾಗೂ ಸಾವನ್ನು ತಡೆಯಲು ಸಹಕಾರಿಯಾಗುತ್ತದೆ,'' ಎಂದು ಹೇಳಿಕೊಂಡಿತ್ತು.

ಇದರೊಂದಿಗೆ, ಈಚೆಗಷ್ಟೆ ಜಾನ್ಸನ್ ಅಂಡ್ ಜಾನ್ಸನ್ ಕೋವಿಡ್ ಲಸಿಕೆ ಕುರಿತು ಎಫ್‌ಡಿಎ ಎಚ್ಚರಿಕೆ ನೀಡಿತ್ತು. "ಈ ಲಸಿಕೆ ಕೆಲವು ಸಂದರ್ಭಗಳಲ್ಲಿ ಅಪರೂಪದ ನರಮಂಡಲದ ಸಮಸ್ಯೆಗೆ ಕಾರಣವಾಗಬಹುದು. ಇದರಿಂದಾಗಿ ಪಾರ್ಶ್ವವಾಯು ಸಂಭವಿಸಬಹುದು," ಎಂದು ಯುಎಸ್‌ನ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಎಚ್ಚರಿಕೆ ನೀಡಿತ್ತು.

ಜಾನ್ಸನ್ ಕೋವಿಡ್‌ ಲಸಿಕೆ ಪಡೆದ 42 ದಿನಗಳಲ್ಲಿ ಗುಯಿಲಿನ್-ಬಾರ್ ಸಿಂಡ್ರೋಮ್‌ ಬರುವ ಹೆಚ್ಚಿನ ಅಪಾಯಗಳು ಇವೆ. ಲಭ್ಯವಿರುವ ಪುರಾವೆಗಳು ಜಾನ್ಸೆನ್ ಲಸಿಕೆ ಮತ್ತು ಜಿಬಿಎಸ್ ಅಪಾಯದ ನಡುವಿನ ಸಂಬಂಧವನ್ನು ಸೂಚಿಸುತ್ತಿವೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಮಾಡರ್ನಾ ಮತ್ತು ಫೈಜರ್‌-ಬಯೋಟೆಕ್ ಕೋವಿಡ್‌ ಲಸಿಕೆಗಳಲ್ಲಿ ಈ ರೀತಿಯ ಸಂಕೇತಗಳು ಕಂಡು ಬಂದಿಲ್ಲ," ಎಂದಿತ್ತು.

ಈ ಕಾರಣದಿಂದಾಗಿ ಯುಸ್‌ನ ರೋಗ ನಿಯಂತ್ರಣ ಸಂಸ್ಥೆ ಮತ್ತು ಎಫ್‌ಡಿಎ ಈ ವರ್ಷದ ಆರಂಭದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಬಳಕೆಯನ್ನು ಕೊಂಚ ಸಮಯ ಸ್ಥಗಿತಗೊಳಿಸಿತ್ತು. ಅಪಾಯಗಳು ಕಡಿಮೆ ಎಂದು ದೃಢಪಟ್ಟ ಬಳಿಕ ಏಪ್ರಿಲ್‌ನಲ್ಲಿ ನಿರ್ಬಂಧವನ್ನು ತೆಗೆದುಹಾಕಲಾಗಿತ್ತು.

English summary
Johnson & Johnson has withdrawn its proposal to seek accelerated approval of its COVID-19 vaccine in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X