ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮ್ಮ ಒಂದು ಡೋಸ್‌ ಲಸಿಕೆ ಡೆಲ್ಟಾ ವಿರುದ್ದ ಪರಿಣಾಮಕಾರಿ': ಜಾನ್ಸನ್ & ಜಾನ್ಸನ್‌

|
Google Oneindia Kannada News

ನವದೆಹಲಿ, ಜು. 02: ಜಾನ್ಸನ್ & ಜಾನ್ಸನ್ ಸಂಸ್ಥೆಯ ಕೊರೊನಾವೈರಸ್‌ ಲಸಿಕೆಯು ಪಡೆದ ಎಂಟು ತಿಂಗಳ ನಂತರವೂ ಹೆಚ್ಚು ಸಾಂಕ್ರಾಮಿಕವಾಗಿರುವ ''ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ'' ಯಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

''ಈ ಲಸಿಕೆಯು ಮೂಲ ವೈರಸ್ ವಿರುದ್ಧದ ಪರಿಣಾಮಕಾರಿತ್ವಕ್ಕೆ ಹೋಲಿಸಿದರೆ, ರೂಪಾಂತರದ ವಿರುದ್ದದ ಪರಿಣಾಮವು ಕೊಂಚ ಕುಸಿತಕಂಡಿದೆ'' ಎಂದು ಯುಎಸ್ ಮೂಲದ ಫಾರ್ಮಾ ಕಂಪನಿ ಹೇಳಿದೆ.

''ಆದರೆ ಈ ಲಸಿಕೆಯು ಕೊರೊನಾ ಸೋಂಕಿನ ರೂಪಾಂತರಗಳ ವಿರುದ್ದ ಶೇ.85 ರಷ್ಟು ಪರಿಣಾಮಕಾರಿಯಾಗಿದೆ. ಈ ಲಸಿಕೆ ಪಡೆದವರಿಗೆ ಕೊರೊನಾ ರೂಪಾಂತರ ತಗುಲಿದರೆ ಆಸ್ಪತ್ರೆಗೆ ದಾಖಲಾಗುವುದನ್ನು ಹಾಗೂ ಸಾವನ್ನು ತಡೆಯಲು ಸಹಕಾರಿಯಾಗುತ್ತದೆ,'' ಎಂದು ತಿಳಿಸಿದೆ.

Johnson & Johnson claims its single-shot covid vaccine effective against Delta variant

"ಎಂಟು ತಿಂಗಳ ಪ್ರಸ್ತುತ ದತ್ತಾಂಶದ ಆಧಾರದಲ್ಲಿ ಇಲ್ಲಿಯವರೆಗೆ ಅಧ್ಯಯನ ಮಾಡಿದ ಪ್ರಕಾರ ಒಂದು ಡೋಸ್‌ ಜಾನ್ಸನ್ & ಜಾನ್ಸನ್‌ ಕೋವಿಡ್‌ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿದ್ದು, ಬಲವಾದ ಪ್ರತಿಕಾಯವನ್ನು ಸೃಷ್ಟಿ ಮಾಡುತ್ತದೆ. ಆ ಪ್ರತಿಕಾಯವು ಕ್ಷೀಣಿಸುವುದಿಲ್ಲ, ಬದಲಾಗಿ ಕಾಲ ಕಳೆದಂತೆ ಅದರಲ್ಲಿ ಸುಧಾರಣೆಯನ್ನು ನಾವು ಗಮನಿಸಬಹುದು," ಎಂದು ಜೆ & ಜೆ ಔಷಧಿಗಳ ವ್ಯವಹಾರದ ಸಂಶೋಧನೆ ಮತ್ತು ಅಭಿವೃದ್ಧಿಯ ಮುಖ್ಯಸ್ಥ ಮಾಥಯ್‌ ಮಾಮೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡೆಲ್ಟಾ ರೂಪಾಂತರವು ಭಾರತದಲ್ಲಿ ಎರಡನೇ ಅಲೆಯಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ. ವಿಶ್ವದಲ್ಲಿ ಅತೀ ಹೆಚ್ಚು ಕೋವಿಡ್‌ ಸಾವಿಗೆ ಈ ಡೆಲ್ಟಾ ಕಾರಣವಾಗಿದೆ. ಈ ಡೆಲ್ಟಾ ರೂಪಾಂತರದ ಕಾರಣದಿಂದಾಗಿ ತಲ್ಲಣಿಸಿರುವ ಯುಕೆ, ಇನ್ನೂ ಕೂಡಾ ಲಾಕ್‌ಡೌನ್‌ ಸಂಪೂರ್ಣ ಸಡಿಲಿಕೆ ಮಾಡಿಲ್ಲ.

"ಪ್ರಸ್ತುತ ಸುಮಾರು 100 ದೇಶಗಳಲ್ಲಿ ಕೋವಿಡ್‌ನ ಈ ಡೆಲ್ಟಾ ರೂಪಾಂತರವಿದೆ. ಮುಂಬರುವ ತಿಂಗಳುಗಳಲ್ಲಿ ಈ ರೂಪಾಂತರ ಇನ್ನಷ್ಟು ಹೆಚ್ಚು ಹರಡುವ ಒತ್ತಡವು ಇದೆ, ಇದು ಕೊರೊನಾವೈರಸ್‌ನ ಪ್ರಬಲ ರೂಪಾಂತರವಾಗಲಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ.

(ಒನ್‌ಇಂಡಿಯಾ ಸುದ್ದಿ)

English summary
The single-shot Johnson & Johnson coronavirus vaccine is effective against the highly contagious Delta variant, even eight months after inoculation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X