ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎನ್‌ಯು ಗಲಭೆ : ಉಮರ್ ಖಾಲಿದ್‌ಗೆ 5 ಪ್ರಶ್ನೆಗಳು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಫೆಬ್ರವರಿ 22 : ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಉಮರ್ ಖಾಲಿದ್ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ವಿವಿಗೆ ಭಾನುವಾರ ರಾತ್ರಿ ವಾಪಸ್ ಆಗಿದ್ದಾರೆ. ಐವರು ಇಂದು ನ್ಯಾಯಾಲಯದ ಮುಂದೆ ಶರಣಾಗುವ ಸಾಧ್ಯತೆ ಇದೆ.

ಫೆಬ್ರವರಿ 9ರಂದು ಜೆಎನ್‌ಯುನಲ್ಲಿ ಡೆಮಾಕ್ರಟಿಕ್ ವಿದ್ಯಾರ್ಥಿ ಸಂಘಟನೆ (ಡಿಎಸ್‌ಯು) ಮಾಜಿ ಸದಸ್ಯ ಉಮರ್ ಖಾಲಿದ್ ಅಫ್ಜಲ್ ಗುರು ಕಾರ್ಯಕ್ರಮ ಆಯೋಜಿಸಿದ್ದ ಎಂಬ ಆರೋಪವಿದೆ. ವಿವಿಯಲ್ಲಿ ಗಲಭೆ ನಡೆದ ಬಳಿಕ ಉಮರ್ ಮತ್ತು ಇತರ ನಾಲ್ವರು ನಾಪತ್ತೆಯಾಗಿದ್ದರು. [ಉಮರ್ ಖಾಲೀದ್ ಎಲ್ಲಿ?]

jnu incident

ಉಮರ್ ಮತ್ತು ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ವಿವಿಯಿಂದ ನಾಪತ್ತೆಯಾದ ಇವರ ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಭಾನುವಾರ ರಾತ್ರಿ ಉಮರ್ ಮತ್ತು ಇತರರು ವಿವಿಗೆ ವಾಪಸ್ ಆಗಿದ್ದಾರೆ. [JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]

ಉಮರ್‌ಗೆ 5 ಪ್ರಶ್ನೆಗಳು : ದೆಹಲಿ ಪೊಲೀಸರು ಉಮರ್ ಖಾಲಿದ್‌ನನ್ನು ಪ್ರಶ್ನಿಸಲು ಸಿದ್ಧವಾಗಿದ್ದಾರೆ. ವಿವಿ ಆವರಣದಲ್ಲಿ ಕಾರ್ಯಕ್ರಮ ಆಯೋಜನೆಗೆ ಹಣ ಎಲ್ಲಿಂದ ಬಂತು? ಎಂಬುವುದರಿಂದ ಹಿಡಿದು, ದೇಶ ವಿರೋಧಿ ಘೋಷಣೆಗಳನ್ನು ಕೂಗಿರುವ ತನಕ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಉಮರ್ ಉತ್ತರ ನೀಡಬೇಕಾಗಿದೆ.

ಪ್ರಶ್ನೆ 1 : ಜವಾಹರಲಾಲ್ ನೆಹರು ವಿಶ್ವ ವಿದ್ಯಾನಿಲಯದಲ್ಲಿ ಸಂಸತ್‌ ಭವನದ ಮೇಲಿನ ದಾಳಿ ಪ್ರಕರಣದ ರೂವಾರಿ ಅಫ್ಜಲ್‌ ಗುರು ಪರವಾಗಿ ಕಾರ್ಯಕ್ರಮ ಆಯೋಜನೆ ಮಾಡಿದವರು ಯಾರು? ಎಂಬ ಪ್ರಶ್ನೆಗೆ ಉಮರ್ ಉತ್ತರಿಸಬೇಕು.

ಪ್ರಶ್ನೆ 2 : ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕ ಎಸ್‌.ಎ.ಆರ್‌ ಗಿಲಾನಿ ಅವರು ದೆಹಲಿ ಪ್ರೆಸ್ ಕ್ಲಬ್ ಆವರಣದಲ್ಲಿ ಇದೇ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಜೆಎನ್‌ಯೂನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ಗುಂಪೇ ಅಲ್ಲಿಯೂ ಕಾರ್ಯಕ್ರಮ ಆಯೋಜನೆಗೆ ಸಹಕಾರ ನೀಡಿತ್ತೇ? ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.

ಪ್ರಶ್ನೆ 3 : ಈ ಕಾರ್ಯಕ್ರಮಕ್ಕಾಗಿ ಖಾಲಿದ್ ಕಾಶ್ಮೀರದಿಂದ ಯುವಕರನ್ನು ಕರೆಸಿದ್ದ ಎಂಬ ಆರೋಪಗಳಿವೆ. ಈ ಕುರಿತು ಉಮರ್ ಖಾಲಿದ್ ಉತ್ತರ ನೀಡಬೇಕು. ಫೆ.9ರಂದು ಜೆಎನ್‌ಯು ಕ್ಯಾಂಪಸ್ ಆವರಣದಲ್ಲಿ ವಿವಿಗೆ ಸಂಬಂಧಪಡದ ಹಲವು ವ್ಯಕ್ತಿಗಳಿದ್ದರು ಎಂಬುದು ಈಗಾಗಲೇ ಬಹಿರಂಗವಾಗಿದೆ.

ಪ್ರಶ್ನೆ 4 : ಫೆ.9ರಂದು ಜೆಎನ್‌ಯು ವಿವಿ ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರು ಯಾರು? ಎಂದು ಖಾಲಿದ್‌ನಿಂದ ಪೊಲೀಸರು ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ.

ಪ್ರಶ್ನೆ 5 : ಜೆಎನ್‌ಯು ಕ್ಯಾಂಪಸ್ ಆವರಣದಲ್ಲಿ ಫೆ.9ರಂದು ಕಾರ್ಯಕ್ರಮ ಆಯೋಜನೆ ಮಾಡಲು ಹಣ ನೀಡಿದ ವ್ಯಕ್ತಿ ಯಾರು? ಅಥವ ಸಂಸ್ಥೆ ಯಾವುದು ಎಂದು ಖಾಲಿದ್ ಪೊಲೀಸರಿಗೆ ಉತ್ತರ ನೀಡಬೇಕಾಗಿದೆ.

English summary
Even as the students at the JNU booked under sedition returned to the university last night, the Delhi police is keen on questioning Umar Khalid alleged to be the organizer of the Afzal Guru event on February 9th. Delhi police which had issued a look out circular against Khalid and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X