ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 31ಕ್ಕೆ ಜಿಯೋ ಆಫರ್ ಮುಕ್ತಾಯ, ಮುಂದೇನು?

By Sachhidananda Acharya
|
Google Oneindia Kannada News

ನವದೆಹಲಿ, ಫೆಬ್ರವರಿ 21: ಜಿಯೋ ಮೂಲಕ ಉಚಿತ ಕರೆ ಮತ್ತು ಡಾಟಾ ಸೌಲಭ್ಯ ಪಡೆಯುತ್ತಿದ್ದ ಗ್ರಾಹಕರಿಗಿದು ಕಹಿ ಸುದ್ದಿ. ಮಾರ್ಚ್ 31ಕ್ಕೆ ಜಿಯೋ ತನ್ನ 'ಹ್ಯಾಪಿ ನ್ಯೂ ಇಯರ್ ಆಫರ್' ಅಂತ್ಯಗೊಳಿಸಲಿದೆ. ಸ್ವತಃ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇದನ್ನು ಬಹಿರಂಗಪಡಿಸಿದ್ದಾರೆ.[ರಿಲಯನ್ಸ್ ಜಿಯೋ ಜತೆ ಉಬರ್ ಮಹತ್ವದ ಡೀಲ್]

ಏಪ್ರಿಲ್ ನಂತರ 'ಡೇಟಾ ಪ್ಯಾಕ್' ಹಾಕಿಕೊಂಡು ಗ್ರಾಹಕರು ಉಚಿತ ಕರೆ ಸೌಲಭ್ಯಗಳನ್ನು ಪಡೆಯಬಹುದು. ಆದರೆ ಡಾಟಾ ಸೇವೆ ಪಡೆಯಲು ಮಾತ್ರ ಹಣ ನೀಡಬೇಕು. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋದ ಈವರೆಗಿನ ಸಾಧನೆಗಳು, ಜಿಯೋದ ಭವಿಷ್ಯದ ಯೋಜನೆಗಳು ಹಾಗೂ ಇತರ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವುಗಳು ಹೀಗಿವೆ..[ಜಿಯೋ ಎಫೆಕ್ಟ್ : ಉಚಿತ ಕರೆ ಆಫರ್ ನೀಡಿದ ಬಿಎಸ್ಎನ್ಎಲ್]

ದರವೆಷ್ಟು?

ದರವೆಷ್ಟು?

ಮಾರ್ಚ್ 31ರ ನಂತರ ಜಿಯೋ ಪಾವತಿ ಸೇವೆಗಳನ್ನು ಮಾತ್ರ ನೀಡಲಿದೆ. ಉಳಿದ ಮೊಬೈಲ್ ಕಂಪೆನಿಗಳು ನೀಡುವ ಪ್ಲಾನ್ ಗಳನ್ನೇ ಜಿಯೋ ನೀಡಲಿದೆ. ಆದರೆ ಡೇಟಾ ಮಾತ್ರ ಶೇಕಡಾ 20ರಷ್ಟು ಹೆಚ್ಚು ಇರಲಿದೆ. ಯಾವುದೇ ಕರೆಗಳಿಗೆ ದರಗಳು ಇರುವುದಿಲ್ಲ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

ದಿನಕ್ಕೆ 10 ರೂಪಾಯಿ

ದಿನಕ್ಕೆ 10 ರೂಪಾಯಿ

99 ರೂಪಾಯಿಗೆ ಜಿಯೋ ಗ್ರಾಹಕರು 'ಜಿಯೋ ಪ್ರೈಮ್' ಸದಸ್ಯತ್ವ ಪಡೆಯಬಹುದು. ಒಮ್ಮೆ ಪ್ರೈಮ್ ಸದಸ್ಯರಾದರೆ ದಿನಕ್ಕೆ 10 ರೂಪಾಯಿ ಬೆಲೆಯಲ್ಲಿ ತಿಂಗಳಿಗೆ 303 ರೂಪಾಯಿಯಂತೆ 12 ತಿಂಗಳು ಈಗಿರುವ ಆಫರನ್ನೇ ಪಡೆಯಬಹುದು. ಅಂದರೆ ಅನ್ ಲಿಮಿಟೆಡ್ ಡಾಟಾ (1 ಜಿಬಿ ಹೈ ಸ್ಪೀಡ್) ಸೇವೆ ಪಡೆಯಬಹುದು.

ಏನು ಮಾಡಬೇಕು?

ಏನು ಮಾಡಬೇಕು?

ಈ ಸೇವೆಗಳನ್ನು ಜೀಯೋ ಗ್ರಾಹಕರು 'ಮೈ ಜಿಯೋ' ಆ್ಯಪ್ ಮೂಲಕ ಆರಂಭಿಸಬಹುದು. ಆ್ಯಪ್ ಮೂಲಕ ಸಾಧ್ಯವಾಗದವರು ಜಿಯೋ ಸ್ಟೋರಿಗೆ ಹೋಗಿ ಈ ಸೇವೆಯನ್ನು ಪಡೆದುಕೊಳ್ಳಬಹುದು.

10 ಕೋಟಿ ಗ್ರಾಹಕರು

10 ಕೋಟಿ ಗ್ರಾಹಕರು

ಜಿಯೋ ಈಗಾಗಲೇ 10 ಕೋಟಿ ಗ್ರಾಹಕರನ್ನು ತಲುಪಿದೆ. ಕೇವಲ 170 ದಿನಗಳಲ್ಲಿ ಜಿಯೋ ಈ ಸಾಧನೆ ಮಾಡಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಜಿಯೋ ಆರಂಭವಾದ ನಂತರ ಕೇವಲ 83 ದಿನಗಳಲ್ಲಿ 5 ಕೋಟಿ ಗ್ರಾಹಕರನ್ನು ಜಿಯೋ ಸಂಪಾದಿಸಿದ್ದು, ಪ್ರತಿ ದಿನ 6 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

2017ರ ಅಂತ್ಯಕ್ಕೆ 99% ಗುರಿ

2017ರ ಅಂತ್ಯಕ್ಕೆ 99% ಗುರಿ

2017ರ ಅಂತ್ಯಕ್ಕೆ ದೇಶದ ಶೇಕಡಾ 99 ಜನರನ್ನು ತಲುಪುವ ಗುರಿಯನ್ನು ಜಿಯೋ ಹಾಕಿಕೊಂಡಿದೆ. ಈಗಾಗಲೇ ಪ್ರತಿಸ್ಪರ್ಧಿಗಳಿಗಿಂತ ಎರಡು ಪಟ್ಟು ಹೆಚ್ಚು ಟವರುಗಳನ್ನು ಜಿಯೋ ಹೊಂದಿದ್ದು ವರ್ಷಾಂತ್ಯಕ್ಕೆ ಈ ಸಂಖ್ಯೆಯನ್ನು ದುಪ್ಪಟ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಅಂಬಾನಿ ತಿಳಿಸಿದ್ದಾರೆ.

ವಿಶ್ವಕ್ಕೇ ನಂ. 1

ವಿಶ್ವಕ್ಕೇ ನಂ. 1

ವಿಶ್ವದಲ್ಲಿ ಮೊಬೈಲ್ ಇಂಟರ್ನೆಂಟ್ ಬಳಕೆಯಲ್ಲಿ ಭಾರತ ವಿಶ್ವಕ್ಕೆ ನಂಬರ್ ವನ್ ಸ್ಥಾನಕ್ಕೆ ಏರಿದೆ. ಇಲ್ಲೀವರಗೆ ಜಿಯೋ ಬಳಕೆದಾರರು 100 ಕೋಟಿ ಜಿಬಿಗೂ ಹೆಚ್ಚು ಡೇಟಾ ಬಳಕೆ ಮಾಡಿಕೊಂಡಿದ್ದಾರೆ ಎಂದು ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ. ಜಿಯೋ ಬರುವುದಕ್ಕೆ ಮುಂಚೆ ಭಾರತ 150 ನೇ ಸ್ಥಾನದಲ್ಲಿತ್ತು. ಈಗ ನಂಬರ್ ವನ್ ಸ್ಥಾನಕ್ಕೆ ಬಂದಿದೆಯಂತೆ.

English summary
Reliance Industries Chairman Mukesh Ambani said that Jio's Happy New Year offer, which offers free voice and data services, lapses on March 31 in his speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X