ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಎಫೆಕ್ಟ್: ಜಾರ್ಖಂಡ್ ನಲ್ಲೂ ಅಕ್ರಮ ಕಸಾಯಿ ಖಾನೆ ಬಂದ್?

ಮೂರೂ ದಿನಗಳ ಹಿಂದಷ್ಟೇ ಜಾರ್ಖಂಡ್ ನಲ್ಲೂ ಆ್ಯಂಟಿ ರೋಮಿಯೋ ದಳವನ್ನು ಅಸ್ತಿತ್ವಕ್ಕೆ ತರಲಾಗಿದೆ. ಅದರ ಬೆನ್ನಲ್ಲೇ ಈಗ, ಕಸಾಯಿ ಖಾನೆಗಳನ್ನು ಮುಚ್ಚಿಸುವಲ್ಲಿ ಜಾರ್ಖಂಡ್ ಸರ್ಕಾರ ಮುಂದಾಗಿದೆ.

|
Google Oneindia Kannada News

ರಾಂಚಿ, ಮಾರ್ಚ್ 28: ಜಾರ್ಖಂಡ್ ನಲ್ಲಿರುವ ಬಿಜೆಪಿ ಸರ್ಕಾರವು ಉತ್ತರ ಪ್ರದೇಶದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯೋಗಿ ಆದಿತ್ಯನಾಥ್ ಸರ್ಕಾರದ ಧೋರಣೆಗಳನ್ನು ಅನುಸರಿಸುವತ್ತ ಹೆಜ್ಜೆ ಇಟ್ಟಿದ್ದು, ತನ್ನ ರಾಜ್ಯದಲ್ಲೂ ಅಕ್ರಮ ಕಸಾಯಿ ಖಾನೆಗಳನ್ನು ತಕ್ಷಣವೇ ಮುಚ್ಚಬೇಕೆಂದು ಮಂಗಳವಾರ (ಮಾರ್ಚ್ 28) ಆದೇಶ ಹೊರಡಿಸಿದೆ.

ಉತ್ತರ ಪ್ರದೇಶದಲ್ಲಿ ಆ್ಯಂಟಿ ರೋಮಿಯೋ ದಳ ಅಸ್ತಿತ್ವಕ್ಕೆ ಬಂದಂತೆ, ಮೂರೂ ದಿನಗಳ ಹಿಂದಷ್ಟೇ ಜಾರ್ಖಂಡ್ ನಲ್ಲೂ ಆ್ಯಂಟಿ ರೋಮಿಯೋ ದಳವನ್ನು ಅಸ್ತಿತ್ವಕ್ಕೆ ತರಲಾಗಿದೆ. ಅದರ ಬೆನ್ನಲ್ಲೇ ಈಗ, ಕಸಾಯಿ ಖಾನೆಗಳನ್ನು ಮುಚ್ಚಿಸುವಲ್ಲಿ ಜಾರ್ಖಂಡ್ ಸರ್ಕಾರ ಮುಂದಾಗಿದೆ.

Jharkhand orders closure of illegal abattoirs despite no data on the same

ಕಾಲಾವಧಿ ನಿಗದಿ: ಅಕ್ರಮ ಕಸಾಯಿಖಾನೆಗಳಿಗೆ ಸಂಬಂಧಪಟ್ಟಂತೆ ಮಂಗಳವಾರ ಹೊರಡಿಸಲಾಗಿರುವ ಸರ್ಕಾರಿ ಸುತ್ತೋಲೆಯಲ್ಲಿ, ಅಕ್ರಮ ಕಸಾಯಿ ಖಾನೆಗಳನ್ನು ಇನ್ನು 72 ಗಂಟೆಗಳ ಒಳಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ.

ಅಂಕಿ-ಅಂಶವೇ ಇಲ್ಲ!
ಅತ್ತ, ಸರ್ಕಾರವು ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಸಮರ ಸಾರಿದ್ದರೆ, ಈ ಬಗ್ಗೆ ನಿಖರ ಅಂಕಿ ಅಂಶಗಳನ್ನು ಒದಗಿಸಬೇಕಾಗಿರುವ ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ರಾಜ್ಯದಲ್ಲಿರುವ ಒಟ್ಟು ಅನಧಿಕೃತ ಕಸಾಯಿ ಖಾನೆಗಳೆಷ್ಟಿವೆ ಎಂಬುದರ ಲೆಕ್ಕಾಚಾರವೇ ಗೊತ್ತಿಲ್ಲ ಎಂದು ಹೇಳಲಾಗಿದೆ.

English summary
The Jharkhand government followed in the footsteps of the Uttar Pradesh government and issued an order on Monday to shut down illegal slaughterhouses in the state within 72 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X