ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಸವಾಲೆಸೆದ 15ರ ಬಾಲಕಿ

By Madhusoodhan
|
Google Oneindia Kannada News

ನವದೆಹಲಿ, ಜುಲೈ, 23: ಜವಹರಲಾಲ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯ ಕುಮಾರ್ ಗೆ ಸವಾಲು ಎಸೆದಿದ್ದ ಬಾಲಕಿ ಇದೀಗ ಸ್ವಾತಂತ್ರ್ಯ ದಿನಾಚರಣೆಯಂದು ಶ್ರೀನಗರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತೇನೆ ಎಂದು ಹೇಳಿದ್ದಾಳೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವಾಗ ಪ್ರಜ್ಞೆ ಇರಲಿ. ಅವರು ಜನರು ಆಯ್ಕೆ ಮಾಡಿರುವ ಪ್ರತಿನಿಧಿ. ಅವರ ವಿರುದ್ಧ ಮಾತನಾಡುವುದಕ್ಕೂ ಮುಂಚೆ ಎರಡು ಬಾರಿ ಯೋಚನೆ ಮಾಡಿ. ಮೋದಿ ಅವರನ್ನು ನಿಂದಿಸುವುದು ಸರಿಯಲ್ಲ. ಅವರ ಕುರಿತು ಕೆಟ್ಟಭಾಷೆ ಬಳಸುವುದು ಒಳ್ಳೆಯದಲ್ಲ ಎಂದು ಪಂಜಾಬ್ ರಾಜ್ಯದ ಲುಧಿಯಾನ ಝಾನ್ವಿ ಎಚ್ಚರಿಸಿದ್ದರು.[ಕನ್ಹಯ್ಯನಿಗೆ ಸವಾಲೆಸೆದ ಬಾಲಕಿಯನ್ನು ಮೆಚ್ಚಲೇಬೇಕು]

india

ಕಾಶ್ಮೀರದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಅವಮಾನಿಸಿದ್ದಾರೆ. ಪಾಕ್ ಧ್ವಜ ಹಾರಿಸಲಾಗಿದೆ. ನಮ್ಮ ದೇಶದ ಹಿರಿಮೆ ಸಾರಲು ಹಿಂಸಾಚಾರದಲ್ಲಿ ನಲುಗಿರುವ ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇನೆ. ಯಾರು ಬಂದು ತಡೆಯುತ್ತಾರೆ ನೋಡೋಣ ಎಂದು ಹೇಳಿದ್ದಾಳೆ.

ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಶ್ಲಾಘಿಸಿರುವ ಝಾನ್ವಿ ಬೆಹಾಲ್, ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಭಂಗ ತರುವವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.[ಕಾಶ್ಮೀರದಲ್ಲಿ ಹಿಂಸಾಚಾರ ಹುಟ್ಟಿಕೊಂಡಿದ್ದು ಹೇಗೆ?]

ಸಾಮಾಜಿಕ ಜಾಲ ತಾಣಗಳಲ್ಲಿ ಅಶ್ಲೀಲತೆ, ವಯಸ್ಕರ ಚಿತ್ರಗಳನ್ನು ನಿಷೇಧಿಸಬೇಕು ಎಂದು ಹರ್ಯಾಣ ಹೈಕೋರ್ಟಿನಲ್ಲಿ ರಿಟ್ ಪಿಟೀಷನ್ ಹಾಕಿ ಝಾನ್ವಿಸುದ್ದಿ ಮಾಡಿದ್ದರು. ಸದ್ಯ ರಕ್ಷಾ ಜ್ಯೋತಿ ಫೌಂಡೇಷನ್ ಎಂಬ ಸರ್ಕಾರೇತರ ಸಂಸ್ಥೆಯ ಸಕ್ರಿಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.

English summary
Jhanvi Behal, the 15-year-old girl from Ludhiana, who made it to the headlines after challenging JNU student union president Kanhaiya Kumar to a debate on freedom of speech and expression, has now said she would hoist the tricolour at Lal Chowk in Srinagar on the occasion of Independence Day, August 15. 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X