ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಿಲು ತೆರೆದ ಆಭರಣದ ಅಂಗಡಿಗಳು, ಗ್ರಾಹಕ ನಿಟ್ಟುಸಿರು

|
Google Oneindia Kannada News

ಬೆಂಗಳೂರು, ಮಾರ್ಚ್, 21 : ಚಿನ್ನಾಭರಣ ವರ್ತಕರು ಕಳೆದ 18 ದಿನಗಳಿಂದ ದೇಶವ್ಯಾಪಿ ನಡೆಸುತ್ತಿದ್ದ ಮುಷ್ಕರ ಹಿಂದಕ್ಕೆ ಪಡೆದುಕೊಂಡಿದ್ದಾರೆ. ಸರ್ಕಾರ ಮತ್ತು ಮುಷ್ಕರ ನಿರತ ಚಿನ್ನಾಭರಣ ವರ್ತಕರ ಮಧ್ಯೆ ನಡೆದ ಸಂಧಾನ ಮಾತುಕತೆ ಫಲ ನೀಡಿದ್ದು ಎಂದಿನಂತೆ ವ್ಯಾಪಾರ ವಹಿವಾಟು ಆರಂಭವಾಗಿದೆ.

ಮುಷ್ಕರದಿಂದ ಉದ್ಯಮಕ್ಕೆ 70 ಸಾವಿರ ಕೋಟಿ ರು. ಗಳಷ್ಟು ನಷ್ಟವಾಗಿದೆ ಎಂದು ಹರಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ ಹೇಳಿದೆ. ಶನಿವಾರ ಸಂಜೆ ವರ್ತಕರ ನಿಯೋಗವು ಸಚಿವರಾದ ಅರುಣ್‌ ಜೇಟ್ಲಿ, ಪೀಯೂಷ್‌ ಗೋಯಲ್‌, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಹಾಗೂ ಇತರ ನಾಯಕರನ್ನು ಭೇಟಿ ಮಾಡಿ ಚರ್ಚಿಸಿ ಬೇಡಿಕೆಗಳನ್ನು ಮುಂದೆ ಇಟ್ಟಿತ್ತು.['ಚಿನ್ನ ಮಹಿಳೆಗೆ ಶೃಂಗಾರ, ಫ್ಯಾಷನ್ನಿಗೆ ಅದನ್ನವರು ಕೊಳ್ಳಲ್ಲ']

jewellery

ಚಿನ್ನಾಭರಣ ವರ್ತಕರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಪರಿಶೀಲನೆಗೆ ಹಣಕಾಸು ಮತ್ತು ಕಂಪನಿ ವ್ಯವಹಾರಗಳ ಸಚಿವಾಲಯದ ಮಾಜಿ ಆರ್ಥಿಕ ಸಲಹೆಗಾರ ಅಶೋಕ್‌ ಲಹಿರಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸುವುದಾಗಿ ಜೇಟ್ಲಿ ಭರವಸೆ ನೀಡಿದ್ದಾರೆ.

ಚಿನ್ನಾಭರಣಗಳ ಮೇಲೆ ವಿಧಿಸಿರುವ ಶೇ. 1ರಷ್ಟು ಅಬಕಾರಿ ಸುಂಕ ವಿಧಿಸುವ ನಿರ್ಧಾರವನ್ನು ಮರಳಿ ಪಡೆಯುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇನ್ನೊಂದೆಡೆ ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟಿಗೆ ಪ್ಯಾನ್‌ ಕಾರ್ಡ್‌ ಕಡ್ಡಾಯ ಮಾಡಿರುವ ಸರ್ಕಾರದ ನಿರ್ಧಾರದ ಬಗ್ಗೆ ಆಕ್ಷೇಪ ಎತ್ತಿದ ವರ್ತಕರ ನಿಯೋಗ ಸಮಸ್ಯೆಯ ಬಗೆಯನ್ನು ಮನದಟ್ಟು ಮಾಡಿಕೊಡಲು ಪ್ರಯತ್ನ ಮಾಡಿತು.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

ನಿಮ್ಮ ನಗರದ ಇಂದಿನ ಚಿನ್ನದ ದರ ತಿಳಿದುಕೊಳ್ಳಿ

ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಗ್ರಾಹಕರ ತಲೆ ಬಿಸಿ ಕಡಿಮೆಯಾಗಿದೆ. ಸರ್ಕಾರ ನೀಡಿರುವ ಭರವಸೆಯನ್ನು ಆಧರಿಸಿ ಚಿನ್ನಾಭರಣ ವರ್ತಕರು ಮುಷ್ಕರ ಕೈ ಬಿಟ್ಟಿದ್ದು ಬಸವಳಿದಿದ್ದ ಗ್ರಾಹಕ ನಿಟ್ಟುಸಿರು ಬಿಡುವಂತೆ ಆಗಿದೆ.

English summary
The country's jewellers late Saturday decided to end their 18-day strike after they received government assurance that the excise department will not harass them for the collection of a proposed excise duty on non-silver jewellery. Jewellery stocks today rose sharply by up to 8 per cent after jewellers called off their 18-day old strike demanding rollback of proposed excise duty on non- silver jewellery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X