ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಷ್ಟದಲ್ಲಿ ಸಂಸ್ಥೆ: ಹಾರಾಟ ಸ್ಥಗಿತಗೊಳಿಸಲು ನಿರ್ಧರಿಸಿದ ಜೆಟ್ ಏರ್‌ವೇಸ್

|
Google Oneindia Kannada News

ಮುಂಬೈ, ಏಪ್ರಿಲ್ 17: ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ದೇಶದ ಅತಿ ದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ಬುಧವಾರ ರಾತ್ರಿಯಿಂದಲೇ ತಮ್ಮ ಎಲ್ಲ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಳೆದ ಕೆಲವು ದಿನಗಳಿಂದ ಸಂಸ್ಥೆಯು ಕೇವಲ 35-40 ವಿಮಾನಗಳ ಸೇವೆ ಒದಗಿಸುತ್ತಿತ್ತು. ಅತೀವ ಆರ್ಥಿಕ ಸಂಕಷ್ಟದಿಂದಾಗಿ ಈಗ ಅವುಗಳ ಹಾರಾಟಕ್ಕೂ ತೊಡಕು ಉಂಟಾಗಿದ್ದು, ಸಂಪೂರ್ಣವಾಗಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲು ಅದು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸಂಬಳವಿಲ್ಲದ ಜೆಟ್‌ ಏರ್‌ವೇಸ್‌ನ ಸಾವಿರಾರು ನೌಕರರ ಪಾಡು ಏನಾಗಿದೆ ಗೊತ್ತೇ? ಸಂಬಳವಿಲ್ಲದ ಜೆಟ್‌ ಏರ್‌ವೇಸ್‌ನ ಸಾವಿರಾರು ನೌಕರರ ಪಾಡು ಏನಾಗಿದೆ ಗೊತ್ತೇ?

ಜೆಟ್ ಏರ್‌ವೇಸ್‌ನ ಸಾಲದಾತ ಸಂಸ್ಥೆಗಳು ಅದರ ಆರ್ಥಿಕ ಪುನಶ್ಚೇತನಕ್ಕೆ ಹೆಚ್ಚುವರಿ ಹಣಕಾಸಿನ ನೆರವು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

Jet Airways to temporarily suspend all its flights from Wednesday night

ವಿಮಾನ ಸಂಸ್ಥೆಯು ಗುರುವಾರದಿಂದ ತನ್ನ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ ಎಂದು ಹೇಳಲಾಗಿತ್ತು. ಅದರ ಬೆನ್ನಲ್ಲೇ ಅದರ ಷೇರುಗಳು ಶೇ 20ರಷ್ಟು ನೆಲಕಚ್ಚಿದ್ದವು. ಮಂಗಳವಾರ ಅಂತ್ಯದ ವೇಳೆಗೆ 242 ರೂ ಮೌಲ್ಯದಲ್ಲಿ ಶೇ 8ರಲ್ಲಿ ಅಂತ್ಯಗೊಂಡಿತ್ತು. ಬುಧವಾರ ಮಾರುಕಟ್ಟೆಗಳು ತೆರೆದಿರಲಿಲ್ಲ.

ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?

ಸಂಸ್ಥೆಯ ವಿಮಾನಗಳು ಹಾರಾಟ ನಡೆಸದೆ ಇದ್ದರೆ ಅವುಗಳ ಪರವಾನಗಿ ಅಮಾನತು ಆಗುವ ಭೀತಿ ಎದುರಾಗಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಕುರಿತು ಸೂಚನೆ ನೀಡಿಲ್ಲ.

ಪ್ರತಿಭಟನೆ ಮಾಡ್ತಿಲ್ಲ, ಸಂಬಳದ ಕಥೆ ಏನಾಯ್ತು ಹೇಳಿ: ಜೆಟ್ ಏರ್‌ವೇಸ್ ಸಿಬ್ಬಂದಿ ಅಳಲುಪ್ರತಿಭಟನೆ ಮಾಡ್ತಿಲ್ಲ, ಸಂಬಳದ ಕಥೆ ಏನಾಯ್ತು ಹೇಳಿ: ಜೆಟ್ ಏರ್‌ವೇಸ್ ಸಿಬ್ಬಂದಿ ಅಳಲು

ಬುಧವಾರ ಬೆಳಿಗ್ಗೆ ಸಂಸ್ಥೆಯ ಆರು ವಿಮಾನಗಳು ಮಾತ್ರ ಹಾರಾಟ ನಡೆಸಿದ್ದವು. ಮಧ್ಯಾಹ್ನದ ಬಳಿಕ ಎಲ್ಲ ವಿಮಾನಗಳ ಹಾರಾಟ ನಿಲ್ಲಿಸಲು ನಿರ್ಧಾರ ಕೈಗೊಳ್ಳಲಾಯಿತು.

English summary
Jet Airways has decided to suspend temporarily all of its flights from Wednesday night after lenders rehected its request for additional funds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X