ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಟನೆ ಮಾಡ್ತಿಲ್ಲ, ಸಂಬಳದ ಕಥೆ ಏನಾಯ್ತು ಹೇಳಿ: ಜೆಟ್ ಏರ್‌ವೇಸ್ ಸಿಬ್ಬಂದಿ ಅಳಲು

|
Google Oneindia Kannada News

ನವದೆಹಲಿ, ಏಪ್ರಿಲ್ 12: ಮೂರು ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೆ ಕಂಗೆಟ್ಟಿರುವ ಜೆಟ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಮುಂಬೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ನಾವು ಪ್ರತಿಭಟನೆ ನಡೆಸುತ್ತಿಲ್ಲ. ನಮ್ಮ ಸಂಬಳದ ಬಗ್ಗೆ ತಿಳಿಯಲು ಬಯಸಿದ್ದೇವೆ. ನಮಗೆ ನಮ್ಮ ವೇತನ ದೊರಕಿಲ್ಲ. ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸಂಸ್ಥೆಯಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ನಮಗೆ ಸ್ಪಷ್ಟನೆ ಬೇಕು' ಎಂದು ಉದ್ಯೋಗಿಗಳು ಹೇಳಿದ್ದಾರೆ.

ಸಂಬಳವಿಲ್ಲದೆ ಅಮ್ಮನ ಒಡವೆ ಮಾರುವ ಸ್ಥಿತಿಗೆ ಬಂದ ಪೈಲಟ್‌ಗಳುಸಂಬಳವಿಲ್ಲದೆ ಅಮ್ಮನ ಒಡವೆ ಮಾರುವ ಸ್ಥಿತಿಗೆ ಬಂದ ಪೈಲಟ್‌ಗಳು

ಸಿಬ್ಬಂದಿ ಮುಷ್ಕರದಿಂದ ಮುಂಬೈ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಅನೇಕ ಜೆಟ್ ಏರ್‌ವೇಸ್ ವಿಮಾನಗಳು ರದ್ದುಗೊಂಡಿವೆ. ಇದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತುಂಬಿಕೊಂಡಿದ್ದರು.

ಜೆಟ್ ಏರ್‌ವೇಸ್ ಹಾರಾಟ ಶೇ 90ರಷ್ಟು ಸ್ಥಗಿತಗೊಂಡಿದೆ. ಹಣಕಾಸಿನ ಕೊರತೆಯಿಂದಾಗಿ ವಿಮಾನಯಾನ ಸಂಸ್ಥೆ ಅತ್ತ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದೆ, ಸಾಲ ಮರುಪಾವತಿಸಲೂ ಆಗದೆ ಪರದಾಡುತ್ತಿದೆ. ವಿಮಾನ ನಿಲ್ದಾಣಗಳ, ತೈಲ ಕಂಪೆನಿಗಳು ಮುಂತಾದೆಡೆ ಬಾಕಿ ಮೊತ್ತವನ್ನು ಉಳಿಸಿಕೊಳ್ಳಲಾಗಿದೆ. ಇದರಿಂದ ವಿಮಾನಗಳ ಕಾರ್ಯಾಚರಣೆಯೂ ಸಾಧ್ಯವಾಗುತ್ತಿಲ್ಲ. ಜೆಟ್ ಏರ್‌ವೇಸ್‌ನ ಇಪ್ಪತ್ತಕ್ಕಿಂತಲೂ ಕಡಿಮೆ ವಿಮಾನಗಳು ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿವೆ.

jet airways ground staff demonstrate at Mumbai Airport demanding salaries

8 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಸಾಲದ ಸುಳಿಯಲ್ಲಿ ಸಂಸ್ಥೆ ಸಿಲುಕಿಕೊಂಡಿದೆ. ವಿಮಾನಯಾನ ಸಂಸ್ಥೆಗೆ ಸಾರ್ವಜನಿಕ ಬ್ಯಾಂಕುಗಳು 1500 ಕೋಟಿ ಸಾಲದ ನೆರವು ದೊರಕುವ ನಿರೀಕ್ಷೆಯಿದೆ. ಆದರೆ, ಇದುವರೆಗೂ 250 ಕೋಟಿ ರೂಪಾಯಿ ಮಾತ್ರ ಒದಗಿಸಲಾಗಿದೆ ಎನ್ನಲಾಗಿದೆ.

English summary
Jet Airways Ground staff on Friday demonstrated at Mumbai Airport demanding clarity over thier salaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X