ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಬಳವಿಲ್ಲದೆ ಅಮ್ಮನ ಒಡವೆ ಮಾರುವ ಸ್ಥಿತಿಗೆ ಬಂದ ಪೈಲಟ್‌ಗಳು

|
Google Oneindia Kannada News

ನವದೆಹಲಿ, ಮಾರ್ಚ್ 22: ವೆಚ್ಚವನ್ನು ಭರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೆಟ್‌ ಏರ್‌ವೇಸ್ ಕಳೆದ ಮೂರು ತಿಂಗಳಿನಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಇದರಿಂದ ಸಿಬ್ಬಂದಿ ಕೂಡ ಹಣವಿಲ್ಲದೆ ಕುಟುಂಬ ನಿರ್ವಹಣೆಗೆ ತೀರಾ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜೀವನ ಸಾಗಿಸಲು ಸೂಕ್ತ ವೇತನ ದೊರಕದೆ ಇರುವುದು ಪೈಲಟ್‌ಗಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಿದೆ. ಇದು ಒಟ್ಟಾರೆ ಇಡೀ ಸಂಸ್ಥೆಯ ಅಸ್ತಿತ್ವಕ್ಕೆ ಸಂಚಕಾರ ತರುವ ಸೂಚನೆಗಳು ದೊರೆತಿವೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ವಿಮಾನ ಹಾರಾಟ ಆರಂಭಿಸಲು ಕಾಕ್‌ಪಿಟ್‌ ಪ್ರವೇಶಿಸುವ ಮುನ್ನ ನಮ್ಮ ಎಲ್ಲ ಒತ್ತಡಗಳನ್ನು ಮರೆಯಲು ಪ್ರಯತ್ನಿಸುತ್ತೇವೆ. ಆದರೆ, ನಾವು ಕೇವಲ ಮನುಷ್ಯರು' ಎಂದು ಸಂಬಳವಿಲ್ಲದೆ ತೊಂದರೆಗೆ ಒಳಗಾಗಿರುವ ಜೆಟ್‌ಏರ್‌ವೇಸ್‌ನ ಹಿರಿಯ ಕಮಾಂಡರ್ ಒಬ್ಬರು ಹೇಳಿದ್ದಾರೆ.

ಜೆಟ್ ಏರ್‌ವೇಸ್ ಉಳಿಸಲು ತೆರಿಗೆದಾರರ ಹಣವೇಕೆ?: ಕಾಂಗ್ರೆಸ್ ಪ್ರಶ್ನೆಜೆಟ್ ಏರ್‌ವೇಸ್ ಉಳಿಸಲು ತೆರಿಗೆದಾರರ ಹಣವೇಕೆ?: ಕಾಂಗ್ರೆಸ್ ಪ್ರಶ್ನೆ

'ನಾವು ಕೂಡ ಸಾಮಾನ್ಯ ಮನುಷ್ಯರೇ. ನಾವು ಎಷ್ಟೇ ಪ್ರಯತ್ನಿಸಿದರೂ ನಮ್ಮ ಮೇಲಿನ ಒತ್ತಡದ ಮಟ್ಟ ಹೆಚ್ಚುತ್ತಲೇ ಹೋಗುತ್ತಿದೆ. ನಮ್ಮ ಶಕ್ತಿ ಮಿರಿ ಪ್ರಯತ್ನಿಸುತ್ತಿದ್ದೇವೆ. ಆದರೆ, ಸಂಬಳವಿಲ್ಲದೆ ಇರುವುದರ ಒತ್ತಡ ನಮಗೆ ಬೇಕಿಲ್ಲ. ಅದನ್ನು ತಕ್ಷಣವೇ ತೊಲಗಿಸಬೇಕು' ಎಂದು ಕ್ಯಾಪ್ಟನ್ ಕರಣ್ ಚೋಪ್ರಾ ಹೇಳಿದ್ದಾರೆ.

{photo-feature}

English summary
Thousands of officers in Jet Airways are in financial trouble as the company is not able to pay their salary from 3-4 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X