ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀವ್ರ ಸಂಕಷ್ಟದಲ್ಲಿ ಜೆಟ್ ಏರ್‌ವೇಸ್‌: ಮೋದಿ ತುರ್ತು ಸಭೆ

|
Google Oneindia Kannada News

ನವದೆಹಲಿ, ಏಪ್ರಿಲ್ 13: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೆಟ್ ಏರ್‌ವೇಸ್ ವಿಮಾನ ಸಂಸ್ಥೆ ಸೋಮವಾರದ ವರೆಗೆ ತನ್ನೆಲ್ಲಾ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ರದ್ದುಗೊಳಿಸಿದೆ.

ಸಿಬ್ಬಂದಿಗಳು ಸಂಬಳಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದು, ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಜೆಟ್ ಏರ್‌ವೇಸ್‌ ಸಂಸ್ಥೆ ಸೋಮವಾರದಿಂದ ತನ್ನೆಲ್ಲಾ ವಿಮಾನದ ಹಾರಾಟವನ್ನು ಬಂದ್ ಮಾಡುವ ಸಾಧ್ಯತೆ ಇದೆ.

ಜೆಟ್ ಏರ್‌ವೇಸ್‌ನ ಸಂಕಷ್ಟದ ಸ್ಥಿತಿಯ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಇಂದು ಸಂಜೆ ವೇಳೆಗೆ ಪ್ರಧಾನಿ ಮೋದಿ ಅವರು ವಿಮಾನಯಾನ ಸಚಿವರೊಳಗೊಂಡತೆ ತುರ್ತು ಸಭೆಯನ್ನು ನಡೆಸಿದ್ದಾರೆ.

Jet Airways cancel its international flights till Monday

ಜೆಟ್‌ಏರ್‌ವೇಸ್‌ಗೆ ಬ್ಯಾಂಕುಗಳಿಂದ ಸಿಗಬೇಕಿದ್ದ ಸಾಲವೂ ಸಹ ಸಿಕ್ಕಿಲ್ಲ ಇದು ವಿಮಾನ ಸಂಸ್ಥೆಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಜೆಟ್‌ ಏರ್‌ವೇಸ್‌ನ ಈಗಿನ ಸ್ಥಿತಿಗೆ ಕಾರಣಗಳನ್ನು ಪತ್ತೆ ಹಚ್ಚುವ ಯತ್ನವನ್ನು ಸರ್ಕಾರ ನಡೆಸುತ್ತಿದೆ. ಜೆಟ್ ಏರ್‌ವೇಸ್ ಅನ್ನು ಹರಾಜಿಗೆ ಇಡುವುದು ಸೂಕ್ತ ಎಂದು ಹಲವು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ಮಾಡ್ತಿಲ್ಲ, ಸಂಬಳದ ಕಥೆ ಏನಾಯ್ತು ಹೇಳಿ: ಜೆಟ್ ಏರ್‌ವೇಸ್ ಸಿಬ್ಬಂದಿ ಅಳಲು ಪ್ರತಿಭಟನೆ ಮಾಡ್ತಿಲ್ಲ, ಸಂಬಳದ ಕಥೆ ಏನಾಯ್ತು ಹೇಳಿ: ಜೆಟ್ ಏರ್‌ವೇಸ್ ಸಿಬ್ಬಂದಿ ಅಳಲು

ಪ್ರಸ್ತುತ ದೇಶದಲ್ಲಿ ಮಾತ್ರವೇ ಜೆಟ್ ಏರ್‌ವೇಸ್ ವಿಮಾನಗಳು ಹಾರಾಟ ನಡೆಸುತ್ತಿದ್ದು, ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಲಾಗಿದೆ. ದೇಶದಲ್ಲಿ ಸಹ ಕೆಲವು ವಿಮಾನಗಳು ಸಿಬ್ಬಂದಿ ಇಲ್ಲದ ಕಾರಣ ಹಾರಾಟ ನಡೆಸಿಲ್ಲ, ಸೋಮವಾರ ದೇಶದಲ್ಲಿ ಹಾರಾಡುತ್ತಿರುವ ವಿಮಾನಗಳನ್ನೂ ರದ್ದು ಮಾಡುವ ಸಾಧ್ಯತೆ ದಟ್ಟವಾಗಿದೆ.

ಯುಎಇಯ ಕೆರೀರ್ ಇಥೆಡ್ ಏರ್‌ವೇ, ಏರ್ ಕೆನಡಾ, ಏರ್‌ಲೈನ್ ಸಂಸ್ಥಾಪಕ ನರೇಶ್ ಘೋಯಲ್ ಇನ್ನೂ ಕೆಲವರು ಜೆಟ್ ಏರ್‌ವೇಸ್‌ ಅನ್ನು ಕೊಳ್ಳಲು ಮುಂದೆ ಬಂದಿದ್ದು, ಈಗಾಗಲೇ ತಮ್ಮ ಮೊತ್ತವನ್ನು ವಿಮಾನಯಾನ ಸಂಸ್ಥೆಗೆ ತಿಳಿಸಿದ್ದಾರೆ.

English summary
Jet Airways cancel all its international flights till Monday. Jet Airways may cancel its regional flights from Monday onward. The company is in deep trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X