ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಜೆಇಇ ಮೇನ್ ಪರೀಕ್ಷೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 23: ಮುಂದಿನ ವರ್ಷದಿಂದ ಮುಖ್ಯ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿದೆ. ನೂತನ ಶಿಕ್ಷಣ ನೀತಿಯ ಅಡಿ ಜಂಟಿ ಪ್ರವೇಶಾತಿ ಮಂಡಳಿಯು (ಜೆಎಬಿ) ಈ ನಿರ್ಧಾರ ತೆಗೆದುಕೊಂಡಿದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದರು.

ಪಿಐಎಸ್‌ಎ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸುವ ದೇಶಗಳಲ್ಲಿ ಪರೀಕ್ಷೆಯು ಮಾತೃಭಾಷೆಯ ಮಾಧ್ಯಮದಲ್ಲಿಯೇ ನಡೆಯುತ್ತಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದರು. ಅವರು ಹೇಳಿರುವಂತೆ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ಪ್ರಧಾನಿಗೆ ಅದರ ಶ್ರೇಯಸ್ಸು ಸಲ್ಲಿಸಿದ್ದಾರೆ.

ನೀಟ್ 2020: ಸಾಮಾನ್ಯ ವರ್ಗಗಳ ಕಟ್ ಆಫ್ ಅಂಕಗಳಲ್ಲಿ ಏರಿಕೆನೀಟ್ 2020: ಸಾಮಾನ್ಯ ವರ್ಗಗಳ ಕಟ್ ಆಫ್ ಅಂಕಗಳಲ್ಲಿ ಏರಿಕೆ

ಜೆಎಬಿ ತೆಗೆದುಕೊಂಡ ನಿರ್ಧಾರವು ವಿದ್ಯಾರ್ಥಿಗಳಿಗೆ ಪ್ರಶ್ನೆಯನ್ನು ಇನ್ನಷ್ಟು ಚೆನ್ನಾಗಿ ಗ್ರಹಿಸಲು ಹಾಗೂ ಅಧಿಕ ಅಂಕಗಳನ್ನು ಗಳಿಸಲು ನೆರವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

 JEE Main To Be Held In More Regional Languages: Ramesh Pokhriyal

'ಪರೀಕ್ಷೆಗಳ ಆಧಾರದಲ್ಲಿ ರಾಜ್ಯ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶವನ್ನು ನಿರ್ಧರಿಸುವ ಕಡೆಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಕೂಡ ಪರೀಕ್ಷೆಗಳನ್ನು ನಡೆಸಲಾಗುವುದು. ಜೆಇಇ ಮುಖ್ಯ ಪರೀಕ್ಷೆಯ ಆಧಾರದಲ್ಲಿ ಪ್ರವೇಶ ನೀಡುವ ರಾಜ್ಯಗಳ ರಾಜ್ಯಭಾಷೆಯೂ ಇದರಲ್ಲಿ ಸೇರಿಕೊಳ್ಳಲಿದೆ' ಎಂದು ಅವರು ಹೇಳಿದ್ದಾರೆ.

ನೀಟ್ ಅಂಕಗಳಲ್ಲಿ ವ್ಯತ್ಯಾಸ: ಕಂಗಾಲಾದ ವಿದ್ಯಾರ್ಥಿಗಳುನೀಟ್ ಅಂಕಗಳಲ್ಲಿ ವ್ಯತ್ಯಾಸ: ಕಂಗಾಲಾದ ವಿದ್ಯಾರ್ಥಿಗಳು

ಪ್ರಸ್ತುತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ವರ್ಷಕ್ಕೆ ಎರಡು ಬಾರಿ ಜೆಇಇ ಮೇನ್ ಪರೀಕ್ಷೆ ನಡೆಸುತ್ತಿದ್ದು, ಇಂಗ್ಲಿಷ್, ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಈಗ ಯಾವ ಯಾವ ಭಾಷೆಗಳನ್ನು ಇದಕ್ಕೆ ಸೇರಿಸಲಾಗಿದೆ ಅಥವಾ ದೇಶದ ಎಲ್ಲ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿಯೂ ಪರೀಕ್ಷೆ ಬರೆಯುವ ಅವಕಾಶ ನೀಡಲಾಗುತ್ತಿದೆಯೇ ಎಂಬ ಮಾಹಿತಿ ನೀಡಿಲ್ಲ.

English summary
Education Minister Ramesh Pokhriyal said, JEE Main will be conducted in more regional languages from next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X