ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಇಇ ಮೇನ್ ಪರೀಕ್ಷೆ ಫಲಿತಾಂಶ: ಆರು ಮಂದಿಗೆ ಶೇ 100ರಷ್ಟು ಅಂಕ

|
Google Oneindia Kannada News

ನವದೆಹಲಿ, ಮಾರ್ಚ್ 9: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ), ಜೆಇಇ ಮೇನ್ ಪರೀಕ್ಷೆ 2021ರ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ಬಾರಿ ಆರು ಮಂದಿ ಶೇ 100ರಷ್ಟು ಅಂಕಗಳೊಂದಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಈ ಆರೂ ಮಂದಿ ಬಾಲಕರು ಎನ್ನುವುದು ವಿಶೇಷ. ಸಾಮಾನ್ಯವಾಗಿ ಬಾಲಕಿಯರೇ ಹೆಚ್ಚು ಟಾಪರ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತೆಲಂಗಾಣದ ಕೊಮ್ಮ ಶರಣ್ಯಾ 99.9990421 ಅಂಕಗಳೊಂದಿಗೆ ವಿದ್ಯಾರ್ಥಿನಿಯರ ವಿಭಾಗದಲ್ಲಿ ಟಾಪರ್ ಎನಿಸಿಕೊಂಡಿದ್ದಾರೆ. ಒಟ್ಟು ಹತ್ತು ಬಾಲಕಿಯರು 99ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.

ಸರಿಯಾಗಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದವರೆಂದರೆ- ಸಾಕೇತ್ ಝಾ, ಪ್ರವರ್ ಕಟಾರಿಯಾ, ರಂಜಿಮ್ ಪ್ರಬಲ್ ದಾಸ್, ಗುರಮ್ರಿತ್ ಸಿಂಗ್, ಸಿದ್ಧಾರ್ಥ್ ಮುಖರ್ಜಿ ಮತ್ತು ಅನಂತ್ ಕೃಷ್ಣ ಸಿದಂಬಿ. ಟಾಪರ್‌ಗಳಲ್ಲಿ ಇಬ್ಬರು ದೆಹಲಿಯವರಾಗಿದ್ದು, ಉಳಿದವರು ಮಹಾರಾಷ್ಟ್ರ, ಗುಜರಾತ್, ಚಂಡೀಗಡ ಮತ್ತು ರಾಜಸ್ಥಾನದ ತಲಾ ಒಬ್ಬರಾಗಿದ್ದಾರೆ.

ನೀಟ್, ಜೆಇಇ ಪರೀಕ್ಷೆಗಳಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರದ ಮಹತ್ವದ ಚಿಂತನೆನೀಟ್, ಜೆಇಇ ಪರೀಕ್ಷೆಗಳಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರದ ಮಹತ್ವದ ಚಿಂತನೆ

ಆರ್ಥಿಕವಾಗಿ ದುರ್ಬಲರಾದ ವರ್ಗದಲ್ಲಿ (ಇಡಬ್ಲ್ಯೂಎಸ್) ಆಂಧ್ರಪ್ರದೇಶದ ಅನುಮುಲಾ ವೆಂಕಟ ಜಯ ಚೈತನ್ಯ ಟಾಪರ್ ಆಗಿದ್ದಾರೆ. ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಮುಂದೆ ಓದಿ.

ಪರೀಕ್ಷೆ ಬರೆದಿದ್ದ 6.52 ಲಕ್ಷ ಮಂದಿ

ಪರೀಕ್ಷೆ ಬರೆದಿದ್ದ 6.52 ಲಕ್ಷ ಮಂದಿ

ಎಂಜಿನಿಯರಿಂಗ್ ಕೋರ್ಟ್‌ಗಳ ಪ್ರವೇಶಕ್ಕಾಗಿ ಒಟ್ಟು 6,52,627 ವಿದ್ಯಾರ್ಥಿಗಳು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ ಬರೆದಿದ್ದರು. 331 ನಗರಗಳ 800ಕ್ಕೂ ಅಧಿಕ ಕೇಂದ್ರಗಳಲ್ಲಿ ಫೆ. 23 ರಿಂದ ಫೆ 26ರವರೆಗೆ ಪರೀಕ್ಷೆಗಳು ನಡೆದಿದ್ದವು.

ಕಟ್ ಆಫ್ 90%ಕ್ಕಿಂತ ಅಧಿಕ

ಕಟ್ ಆಫ್ 90%ಕ್ಕಿಂತ ಅಧಿಕ

ಒಟ್ಟಾರೆ ಇರುವ ಸವಾಲಿನ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಜೆಇಇ ಮೇನ್‌ನ ಕಟ್ ಆಫ್ ಅನ್ನು ಈ ವರ್ಷ ಶೇ 90ಕ್ಕಿಂತ ಹೆಚ್ಚು ನಿಗದಿಗೊಳಿಸಲಾಗುತ್ತದೆ. ಪರೀಕ್ಷೆಗೆ ಹಾಜರಾಗಿದ್ದ ಆಕಾಂಕ್ಷಿಗಳು, ಲಭ್ಯವಿರುವ ಸೀಟುಗಳ ಸಂಖ್ಯೆ, ಪರೀಕ್ಷೆಯ ಸವಾಲಿನ ಮಟ್ಟ, ಕಳೆದ ವರ್ಷದ ಕಟ್-ಆಫ್ ಟ್ರೆಂಡ್, ಹೀಗೆ ಪರೀಕ್ಷೆ ಮೇಲೆ ಪ್ರಭಾವ ಬೀರುವ ವಿವಿಧ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕಟ್ ಆಫ್ ಸಿದ್ಧಪಡಿಸಲಾಗುತ್ತಿದೆ.

ರಾಜ್ಯದಲ್ಲಿ ಅಕ್ಟೋಬರ್ 4 ರಿಂದ ಪದವಿ,ಸ್ನಾತಕೋತ್ತರ, ಎಂಜಿನಿಯರಿಂಗ್ ತರಗತಿಗಳು ಶುರುರಾಜ್ಯದಲ್ಲಿ ಅಕ್ಟೋಬರ್ 4 ರಿಂದ ಪದವಿ,ಸ್ನಾತಕೋತ್ತರ, ಎಂಜಿನಿಯರಿಂಗ್ ತರಗತಿಗಳು ಶುರು

ರಾಜ್ಯವಾರು ಟಾಪರ್‌ಗಳು

ರಾಜ್ಯವಾರು ಟಾಪರ್‌ಗಳು

ರಾಜ್ಯವಾರು ಟಾಪರ್‌ಗಳ ಪಟ್ಟಿಯಲ್ಲಿ ಕರ್ನಾಟಕದಿಂದ ಉದ್ಧವ್ ಶರ್ಮಾ ಅತ್ಯಧಕ ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕೇರಳದಿಂದ ಫಯಜ್ ಹಶೀಮ್, ತಮಿಳುನಾಡಿನ ತಿರುವರುಳ್ ಪಿ, ತೆಲಂಗಾಣದ ಚಲ್ಲ ವಿಶ್ವನಾಥ್ ಮತ್ತು ಕೊಮ್ಮ ಶರಣ್ಯಾ, ಆಂಧ್ರಪ್ರದೇಶದ ಪೋತಮ್‌ಸೆಟ್ಟಿ ಚೇತನ್ ಮನೋಜ್ಞಾ ಸಾಯಿ, ಪುದುಚೆರಿಯ ಚಿತಲ್ಯ ರವಿತೇಜಾ ಟಾಪರ್‌ಗಳಾಗಿದ್ದಾರೆ.

ಶಿಕ್ಷಣ ಸಚಿವರ ಅಭಿನಂದನೆ

ಶಿಕ್ಷಣ ಸಚಿವರ ಅಭಿನಂದನೆ

'ಆತ್ಮೀಯ ವಿದ್ಯಾರ್ಥಿಗಳೇ, ಜೆಇಇ (ಮೇನ್) ಫೆಬ್ರವರಿ 2021ರ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಕಳೆದ ವರ್ಷದವರೆಗೂ ಮೂರು ಭಾಷೆಗಳಲ್ಲಿ ಮಾತ್ರ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ 13 ಭಾಷೆಗಳಲ್ಲಿ ಪರೀಕ್ಷೆಗಳು ನಡೆದಿದ್ದು, ಹತ್ತೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಿದೆ. ಎನ್‌ಟಿಎದಿಂದ ಅದ್ಭುತ ಸಾಧನೆ' ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಜೆಇಇ ಮೇನ್ ಪರೀಕ್ಷೆಮತ್ತಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಜೆಇಇ ಮೇನ್ ಪರೀಕ್ಷೆ

ಇನ್ನೂ ಮೂರು ಅವಧಿಗಳಲ್ಲಿ ಅವಕಾಶ

ಇನ್ನೂ ಮೂರು ಅವಧಿಗಳಲ್ಲಿ ಅವಕಾಶ

ಪರೀಕ್ಷಾ ಸಂಸ್ಥೆಯು ಜೆಇಇ ಮೇನ್ 2021 ಫಲಿತಾಂಶದ ಮರು ಮೌಲ್ಯಮಾಪನ/ಮರು ಪರಿಶೀಲನೆಗೆ ಯಾವುದೇ ಅವಕಾಶ ನೀಡುವುದಿಲ್ಲ. ಅಂಕಗಳನ್ನು ಸುಧಾರಿಸಿಕೊಳ್ಳಲು ಅಭ್ಯರ್ಥಿಗಳು ಮುಂದಿನ ಮೂರು ಅವಧಿಗಳಾದ ಮಾರ್ಚ್, ಏಪ್ರಿಲ್ ಮತ್ತು ಮೇ 2021ರಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಹಾಜರಾಗಬೇಕು. ಮಾರ್ಚ್ ತಿಂಗಳ ಪರೀಕ್ಷೆಯು 15, 16, 17 ಮತ್ತು 18ರಂದು ನಡೆಯಲಿವೆ.

English summary
6 boys have score 100 percentile in the JEE MAIN exams, which was held last month. Komma Sharanya from Telangana tops amongd girls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X