• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಇಇ ಮುಖ್ಯ ಪೇಪರ್ 2 ಪರೀಕ್ಷೆ ಫಲಿತಾಂಶ ಪ್ರಕಟ

|

ನವದೆಹಲಿ, ಸೆಪ್ಟೆಂಬರ್ 18: ಜೆಇಇ ಮುಖ್ಯ ಪೇಪರ್ 2 ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಶುಕ್ರವಾರ ಜೆಇಇ ಪೇಪರ್ 2 ಪರೀಕ್ಷೆ ಫಲಿತಾಂಶ ವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 24 ವಿದ್ಯಾರ್ಥಿಗಳಿಗೆ ಶೇ 100 ಅಂಕ

ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್(B.Arch), ಬ್ಯಾಚುಲರ್ ಪ್ಲಾನಿಂಗ್ (B.Plan) ಪೇಪರ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸಬಹುದು. ಫಲಿತಾಂಶವನ್ನು jeemain.nta.nic.in.NTA ನಲ್ಲಿ ವೀಕ್ಷಿಸಬಹುದು.

ಪರೀಕ್ಷೆಯು ಸೆಪ್ಟೆಂಬರ್ 1 ರಂದು ನಡೆದಿತ್ತು.ಶುಕ್ರವಾರ ಸಂಜೆ ಅಂತಿಮ ಆನ್ಸರ್ ಕೀಯನ್ನು ಬಿಡುಗಡೆ ಮಾಡಿತ್ತು. ಸೆಪ್ಟೆಂಬರ್ 8 ರಂದು ಮೊದಲ ಆನ್ಸರ್ ಕೀ ಬಿಡುಗಡೆ ಮಾಡಿತ್ತು. ಆನ್ಸರ್ ಕೀನಲ್ಲಿ ತಪ್ಪಿದ್ದ ಕಾರಣ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರು.

ಎನ್‌ಟಿಎ ಅಂತಿಮ ಆನ್ಸರ್ ಕೀಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸೆಪ್ಟೆಂಬರ್ 10 ರಂದು ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಬಿ.ಟೆಕ್, ಬಿ.ಇ ಅಭ್ಯರ್ಥಿಗಳ ಫಲಿತಾಂಶ ಬಂದಿತ್ತು.

-JEE Main 2020 NTA score Paper 2 ಕ್ಲಿಕ್ ಮಾಡಬೇಕು

-ಅಪ್ಲಿಕೇಷನ್ ಐಡಿ ಪಾಸ್‌ವರ್ಡ್ ನೀಡಬೇಕು

-ಜೆಇಇ ಮುಖ್ಯ ಪೇಪರ್ 2 ಫಲಿತಾಂಶ ಸ್ಕ್ರೀನ್‌ನಲ್ಲಿ ಕಾಣಿಸಲಿದೆ.

-ಡೌನ್‌ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆಯಬಹುದಾಗಿದೆ.

ಜೆಇಇ ಮುಖ್ಯ ಪರೀಕ್ಷೆಯಲ್ಲಿ 24 ವಿದ್ಯಾರ್ಥಿಗಳು ಶೇ. 100 ರಷ್ಟು ಅಂಕಗಳನ್ನು ಗಳಿಸಿದ್ದರು.

ಕೋವಿಡ್ -19 ಹಿನ್ನೆಲೆಯಲ್ಲಿ ಜೆಇಇ ಪರೀಕ್ಷೆ ಎರಡು ಬಾರಿ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 6 ರವರೆಗೆ ದೇಶದ 233 ನಗರಗಳ 660 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು.

ಇಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇ. 100 ರಷ್ಟು ಅಂಕ ಪಡೆದವರ ಪಟ್ಟಿಯಲ್ಲಿ ತೆಲಂಗಾಣ(8 ಅಭ್ಯರ್ಥಿಗಳು) ಮೊದಲ ಸ್ಥಾನದಲ್ಲಿರೆ, ದೆಹಲಿ(5) ಎರಡನೇ ಸ್ಥಾನದಲ್ಲಿದೆ. ನಂತರದಲ್ಲಿ ಸ್ಥಾನದಲ್ಲಿ ರಾಜಸ್ಥಾನ(4), ಆಂಧ್ರಪ್ರದೇಶ (3), ಹರಿಯಾಣ (2) ಮತ್ತು ಗುಜರಾತ್ ಹಾಗೂ ಮಹಾರಾಷ್ಟ್ರದ ತಲಾ ಒಬ್ಬ ಅಭ್ಯರ್ಥಿ ಶೇ. 100 ಅಂಕ ಪಡೆದಿದ್ದಾರೆ.

English summary
The National Testing Agency on Friday declared the results for JEE Main Paper 2 exam on its official website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X