ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಇಇ (Main) ನಾಲ್ಕನೇ ಹಂತದ ಪರೀಕ್ಷೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಜುಲೈ 15: ಇಂಜಿನಿಯರಿಂಗ್ ಪ್ರವೇಶಕ್ಕೆ ನಡೆಸಲಾಗುವ ಜೆಇಇ (Main) ನಾಲ್ಕನೇ ಹಂತದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಆಗಸ್ಟ್‌ 26ರಿಂದ ಸೆಪ್ಟೆಂಬರ್ 02ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಜೆಇಇ ಪರೀಕ್ಷೆಯ ಮೊದಲ ಎರಡು ಹಂತ ಕಳೆದ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಮುಗಿದಿದೆ.

ಕೊರೊನಾ ಸೋಂಕು: ಜೆಇಇ ಅಡ್ವಾನ್ಸ್ಡ್‌ಪರೀಕ್ಷೆ-2021 ಮುಂದೂಡಿಕೆಕೊರೊನಾ ಸೋಂಕು: ಜೆಇಇ ಅಡ್ವಾನ್ಸ್ಡ್‌ಪರೀಕ್ಷೆ-2021 ಮುಂದೂಡಿಕೆ

ಈ ಮುನ್ನ ಪರೀಕ್ಷೆಯು ಜುಲೈ 27ರಿಂದ ಆಗಸ್ಟ್‌ 02ವರೆಗೆ ನಿಗದಿಯಾಗಿತ್ತು. ಇದೀಗ ಆಗಸ್ಟ್‌ 26ಕ್ಕೆ ಮುಂದೂಡಲಾಗಿದ್ದು, ಎರಡು ಸೆಷನ್‌ಗಳ ನಡುವೆ ನಾಲ್ಕು ವಾರಗಳ ಅಂತರ ನೀಡಲಾಗಿದೆ. ಪರೀಕ್ಷೆಗೆ ಒಟ್ಟು 7.32 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ. ಜುಲೈ 20ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

JEE Main 4th Edition Exam Postponed To August 26

ವಿದ್ಯಾರ್ಥಿಗಳ ಮನವಿಯನ್ನು ಮುಂದಿಟ್ಟುಕೊಂಡು ಜೆಇಇ ಮೂರನೇ ಹಾಗೂ ನಾಲ್ಕನೇ ಎಡಿಷನ್ ನಡುವೆ ಒಂದು ತಿಂಗಳ ಅಂತರ ಕಾಪಾಡಿಕೊಳ್ಳಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸೂಚಿಸಲಾಗಿದ್ದು, ಪರೀಕ್ಷೆ ಮುಂದೂಡಿರುವುದಾಗಿ ತಿಳಿಸಿದ್ದಾರೆ.

ಪರೀಕ್ಷೆ ಸಮಯ ಕೊರೊನಾ ನಿಯಮಗಳ ಪಾಲನೆಗೆ ಪರೀಕ್ಷೆ ನಡೆಯುವ ನಗರಗಳ ಸಂಖ್ಯೆಯನ್ನು 232ರಿಂದ 334ಕ್ಕೆ ಏರಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು 660ರಿಂದ 828ಕ್ಕೆ ಏರಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

English summary
JEE (Main) 2021 exam: JEE-Main 4th edition postponed, now to be held from Aug 26-Sept 02,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X