ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಇಇ ಅಡ್ವಾನ್ಸ್ಡ್‌ 2021 ಫಲಿತಾಂಶ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ 2021ರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಜೊತೆಗೆ ಅಂತಿಮ ಕೀ ಉತ್ತರಗಳನ್ನು ಸಹ ಬಿಡುಗಡೆ ಮಾಡಿದೆ.

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ದೆಹಲಿಯ ಐಐಟಿಯ ಮೃದುಲ್ ಅಗರ್​ವಾಲ್ 360ಕ್ಕೆ 348 ಅಂಕಗಳನ್ನು ಪಡೆಯುವ ಮೂಲಕ ಟಾಪ್ ಸ್ಥಾನ ಪಡೆದಿದ್ದಾರೆ.

ಜೆಇಇ ಮೇನ್ಸ್ 2021 ಫಲಿತಾಂಶ ಪ್ರಕಟ, 44 ಅಭ್ಯರ್ಥಿಗಳಿಗೆ ಶೇ.100 ಅಂಕ ಜೆಇಇ ಮೇನ್ಸ್ 2021 ಫಲಿತಾಂಶ ಪ್ರಕಟ, 44 ಅಭ್ಯರ್ಥಿಗಳಿಗೆ ಶೇ.100 ಅಂಕ

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶವನ್ನು (JEE Advanced Result 2021) ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeeadv.ac.in ಕ್ಲಿಕ್​ ಮಾಡುವ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.

JEE Advanced Result 2021 Declared, Details In Kannada

ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್-2021ರ ರೋಲ್ ಸಂಖ್ಯೆ, ಜನ್ಮದಿನಾಂಕ ಮತ್ತು ಫೋನ್ ನಂಬರ್​ಗಳ ಮೂಲಕ ಫಲಿತಾಂಶವನ್ನು ತಿಳಿದುಕೊಳ್ಳಬಹುದಾಗಿದೆ. ಫಲಿತಾಂಶವು ಅಂಕಪಟ್ಟಿ ಮಾದರಿಯಲ್ಲಿ ಲಭ್ಯವಿರಲಿದ್ದು, ದೇಶದ ಟಾಪರ್‌ಗಳ ಪಟ್ಟಿ ಮತ್ತು ಇತರ ಸಂಬಂಧಿತ ಮಾಹಿತಿಯೂ ಇರಲಿದೆ.

ಜೆಇಇ ಮೇನ್​ ಅರ್ಹ ಅಭ್ಯರ್ಥಿಗಳು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮತ್ತು ಇತರ ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳ (ಜಿಎಫ್‌ಟಿಐ) ಪ್ರವೇಶಕ್ಕಾಗಿ ನಡೆಯುವ ಜಂಟಿ ಸೀಟು ಹಂಚಿಕೆ ಪ್ರಾಧಿಕಾರದ ದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಿಂದ ಜೆಇಇ ಅಡ್ವಾನ್ಸ್ಡ್​ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಮೊದಲು ನೋಂದಾವಣೆ ಮಾಡಿಕೊಂಡು, ನಂತರ ತಮ್ಮ ಆದ್ಯತೆಯ ಸಂಸ್ಥೆಗಳು ಮತ್ತು ಕೋರ್ಸ್‌ಗಳ ಆಯ್ಕೆಯನ್ನು ಭರ್ತಿ ಮಾಡಬೇಕು.

ಜೆಇಇ ಕರ್ನಾಟಕ ಟಾಪರ್ಸ್: 10 ರಲ್ಲಿ 7 ವಿದ್ಯಾರ್ಥಿಗಳು ಬೆಂಗಳೂರಿನವರುಜೆಇಇ ಕರ್ನಾಟಕ ಟಾಪರ್ಸ್: 10 ರಲ್ಲಿ 7 ವಿದ್ಯಾರ್ಥಿಗಳು ಬೆಂಗಳೂರಿನವರು

ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ರೋಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ಭರ್ತಿ ಮಾಡುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಜೆಇಇ ಅಡ್ವಾನ್ಸ್ಡ್ ಫಲಿತಾಂಶದೊಂದಿಗೆ, ಐಐಟಿ ಖರಗ್‌ಪುರವು ಅಖಿಲ ಭಾರತ ಟಾಪರ್‌ಗಳ ಪಟ್ಟಿಯನ್ನು ಕೂಡ ಪ್ರಕಟಿಸಿದೆ.

ಜೆಇಇ ಅಧಿಕೃತ ವೆಬ್‌ಸೈಟ್‌ jeeadv.ac.inನಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್-2021ರ ರೋಲ್ ಸಂಖ್ಯೆ, ಜನ್ಮದಿನಾಂಕ ಮತ್ತು ಫೋನ್ ನಂಬರ್​ಗಳ ಮೂಲಕ ಫಲಿತಾಂಶವನ್ನು ತಿಳಿದುಕೊಳ್ಳಬಹುದು. ಫಲಿತಾಂಶವು ಅಂಕಪಟ್ಟಿ ಮಾದರಿಯಲ್ಲಿ ಲಭ್ಯವಿರಲಿದ್ದು, ದೇಶದ ಟಾಪರ್‌ಗಳ ಪಟ್ಟಿ ಮತ್ತು ಇತರ ಸಂಬಂಧಿತ ಮಾಹಿತಿಯೂ ಇರಲಿದೆ.

ಜೆಇಇ ಮೇನ್​ ಅರ್ಹ ಅಭ್ಯರ್ಥಿಗಳು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮತ್ತು ಇತರ ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಯುವ ಜಂಟಿ ಸೀಟು ಹಂಚಿಕೆ ಪ್ರಾಧಿಕಾರದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಜಂಟಿ ಸೀಟು ಹಂಚಿಕೆ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳಿಗೆ ಐಐಟಿಯಲ್ಲಿನ ಸೀಟು ಹಂಚಿಕೆ ನಡೆಯುತ್ತದೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ 44 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕ​ ಗಳಿಸುವ ಮೂಲಕ ಸಾಧನೆ ಮಾಡಿದ್ದರು. ಕರ್ನಾಟಕದ ಗೌರವ್​ ದಾಸ್​ ಮೊದಲ ಸ್ಥಾನ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದರು.

ಜೆಇಇ ಅಡ್ವಾನ್ಸ್ಡ್ 2021ರ ಫಲಿತಾಂಶವನ್ನು ಇಂದು ಘೋಷಿಸಲಾಗಿದೆ. JoSAA ಅಡಿಯಲ್ಲಿ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಅಭ್ಯರ್ಥಿ ಗಳ ನೋಂದಣಿ/ ಆಯ್ಕೆ ಪ್ರಕ್ರಿಯೆ ಅಕ್ಟೋಬರ್ 16ರಂದು ಆರಂಭವಾಗುತ್ತದೆ.

ಮೊದಲ ಅಣಕು ಸೀಟು ಹಂಚಿಕೆಯನ್ನು ಅಕ್ಟೋಬರ್ 22ರಂದು 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಎರಡನೇ ಪಟ್ಟಿಯನ್ನು ಅಕ್ಟೋಬರ್ 24ರ ಬೆಳಿಗ್ಗೆ 10ಕ್ಕೆ ಬಿಡುಗಡೆ ಮಾಡಲಾಗುತ್ತದೆ. ಮೊದಲ ಹಂತದ ಸೀಟು ಹಂಚಿಕೆ ಪ್ರಕ್ರಿಯೆ ಅ. 27ರಂದು ನಡೆಯಲಿದೆ.

ಐಐಟಿ ದೆಹಲಿಯ ಕಾವ್ಯ ಚೋಪ್ರಾ 360ಕ್ಕೆ 286 ಅಂಕಗಳನ್ನು ಪಡೆದು ಮಹಿಳೆಯರ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಜೆಇಇ ಅಡ್ವಾನ್ಸ್ಡ್-2021ರಲ್ಲಿ ರ‍್ಯಾಂಕ್ ಪಡೆದ ಎಲ್ಲ ಅಭ್ಯರ್ಥಿಗಳು ಜಂಟಿ ಸೀಟು ಹಂಚಿಕೆ ಪ್ರಾಧಿಕಾರ (JoSAA) ದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳು ಮೊದಲು ನೋಂದಾವಣೆ ಮಾಡಿಕೊಂಡು, ನಂತರ ತಮ್ಮ ಆದ್ಯತೆಯ ಕಾಲೇಜು ಮತ್ತು ಕೋರ್ಸ್‌ಗಳ ಆಯ್ಕೆಯನ್ನು ಭರ್ತಿ ಮಾಡಬೇಕು.

ಸೆಪ್ಟೆಂಬರ್ 15ಕ್ಕೆ ಜೆಇಇ ಮೇನ್ಸ್ ಫಲಿತಾಂಶ ಪ್ರಕಟಗೊಂಡಿತ್ತು. ಜೆಇಇ ಮೇನ್ಸ್ 2021 ಫಲಿತಾಂಶ ಪ್ರಕಟವಾಗಿದ್ದು, 44 ಅಭ್ಯರ್ಥಿಗಳು ಶೇ.100 ಅಂಕಗಳನ್ನು ಗಳಿಸಿದ್ದಾರೆ. ಹಾಗೂ 18 ಮಂದಿ ಟಾಪ್ ರಾಂಕ್‌ ಪಡೆದಿದ್ದರು.

ಕರ್ನಾಟಕದ ಗೌರವ್ ದಾಸ್,ಬಿಹಾರದ ವೈಭವ್ ವಿಶಾಲ್, ಆಂಧ್ರಪ್ರದೇಶದ ದುಗ್ಗಿನೇನಿ ವೆಂಕಟ ಪನೀಶ್, ರಾಜಸ್ಥಾನದ ಸಿದ್ಧಾಂತ್ ಮುಖರ್ಜಿ, ಅಂಶುಲ್ ವರ್ಮಾ ಹಾಗೂ ಮೃದುಲ್ ಅಗರ್ವಾಲ್, ದೆಹಲಿಯ ರುಚಿರ್ ಬನ್ಸಾಲ್ ಹಾಗೂ ಕಾವ್ಯಾ ಚೋಪ್ರಾ, ಉತ್ತರ ಪ್ರದೇಶದ ಅಮಯ್ಯ ಸಿಂಘಾಲ್ ಹಾಗೂ ಪಾಲ್ ಅಗರ್ವಾಲ್, ತೆಲಂಗಾಣದ ಕೊಮ್ಮಾ ಶರಣ್ಯ ಮತ್ತು ಜೋಯ್ಸುಲಾ ವೆಂಕಟ ಆದಿತ್ಯ, ಆಂಧ್ರಪ್ರದೇಶದ ಪಸಾಲ ವೀರ ಶಿವ, ಕರ್ಣಂ ಲೋಕೇಶ್ ಹಾಗೂ ಕಾಂಚನಪಲ್ಲಿ ರಾಹುಲ್ ನಾಯ್ಡು, ಪಂಜಾಬ್‌ನ ಪುಲ್ಕಿತ್ ಗೋಯಲ್, ಚಂಡೀಗಢದ ಗುರಮೃತ್ ಸಿಂಗ್ ಮೊದಲ ಸ್ಥಾನ ಪಡೆದಿದ್ದರು.

veerendra patil

ಕರ್ನಾಟಕದ ಟಾಪರ್: ಅಲೇನ್ ತರಬೇತಿ ಕೇಂದ್ರದ ಮೂಲಕ ತರಬೇತಿ ಪಡೆದಿದ್ದ ವಿದ್ಯಾರ್ಥಿ ವಿರೇಶ್ ಬಿ.ಪಾಟೀಲ್ ಅಖಿಲ ಭಾರತೀಯ ಮಟ್ಟದಲ್ಲಿ 39ನೇ ರ್‍ಯಾಂಕ್ ಗಳಿಸಿದ್ದಾನೆ. ಆ ಮೂಲಕ ಕರ್ನಾಟಕ ಟಾಪರ್ ಆಗಿದ್ದಾನೆ.

ಈ ವಿದ್ಯಾರ್ಥಿಯು ಕರ್ನಾಟಕ ಕೆ-ಸಿಇಟಿನಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ 7ನೇ ರ್‍ಯಾಂಕ್, ಕಾಮೆಡ್-ಕೆನಲ್ಲಿ ಪ್ರಥಮ ರ್‍ಯಾಂಕ್, ಜೆಇಇ ಮೈನ್ಸ್‌ನಲ್ಲಿ 187ನೇ ರ್‍ಯಾಂಕ್ ಪಡೆದಿದ್ದ.

ಈ ಕುರಿತು ಮಾತನಾಡಿದ ಅಲೇನ್ ದಕ್ಷಿಣ ಭಾರತ ಕೇಂದ್ರದ ಶೈಕ್ಷಣಿಕ ಮುಖ್ಯಸ್ಥ ಮಹೇಶ್ ಯಾದವ್, ವೀರೇಶ್ ಈ ಹಿಂದೆ ಕೆಲವು ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ. ತಿಳಿಯುವ ಆಸಕ್ತಿ ಹೆಚ್ಚಾಗಿರುವುದರಿಂದ ಈ ರ್‍ಯಾಂಕ್ ಪಡೆಯಲು ವೀರೇಶ್‌ಗೆ ಸಾಧ್ಯವಾಗಿದೆ. ಆದ್ಯೋತ್ ಭಾರದ್ವಾಜ್ 144, ಅನಿರುದ್ಧ 384 ಈ ರೀತಿ 11 ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್ ಪಡೆದಿದ್ದಾರೆ.

''ನಾನು ಪ್ರತಿ ನಿತ್ಯ 6ರಿಂದ 7 ಗಂಟೆ ಸಮಯ ವ್ಯಾಸಂಗ ಮಾಡುತ್ತಿದ್ದೆ. ಉತ್ತಮ ರ‌್ಯಾಂಕ್ ಬಂದಿದೆ. ದೆಹಲಿಯ ಐಐಟಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡುವ ಉದ್ದೇಶ ಇದೆ. ಅಲೇನ್ ಕೇಂದ್ರದ ಉಪನ್ಯಾಸಕರು ಮತ್ತು ಪ್ರೋತ್ಸಾಹ ನೀಡಿದ ಪಾಲಕರಿಗೆ ಧನ್ಯವಾದಗಳು,'' ವಿರೇಶ್ ಬಿ.ಪಾಟೀಲ್, ಜೆಇಇ 39ನೇ ರ್‍ಯಾಂಕ್.

English summary
The National Testing Agency On Friday Announced The Join Entrance Examination Advanced Results 2021. Details Here In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X