ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

JEE Advanced 2021: ಸೆಪ್ಟೆಂಬರ್ 11 ರಿಂದ ನೋಂದಣಿ ಪ್ರಕ್ರಿಯೆ ಶುರು

|
Google Oneindia Kannada News

ನವದೆಹಲಿ, ಆಗಸ್ಟ್ 31:ಖರಗ್‌ಪುರ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜೆಇಇ ಅಡ್ವಾನ್ಸ್‌ಡ್ 2021 ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 11ರಿಂದ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ.

ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಯನ್ನು ಅಕ್ಟೋಬರ್ 3, 2021 ದೇಶದಾದ್ಯಂತ ನಡೆಸಲಾಗುತ್ತದೆ. ಸಂಪೂರ್ಣ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಚೆಕ್‌ ಮಾಡಬಹುದು. ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆ ಕುರಿತು ಆಗಾಗ ಅಫೀಶಿಯಲ್‌ ವೆಬ್‌ಸೈಟ್‌ jeeadv.ac.in ಗೆ ಭೇಟಿ ನೀಡಿ ತಿಳಿಯಲು ಸೂಚಿಸಲಾಗಿದೆ. ಈಗಾಗಲೇ ಎರಡು ಬಾರಿ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆ ಬರೆದವರು ಮತ್ತೆ ರಿಜಿಸ್ಟ್ರೇಷನ್‌ ಪಡೆಯಲು ಅವಕಾಶ ಇಲ್ಲ.

ಜೆಇಇ ಮೇನ್‌ 2021 ಫಲಿತಾಂಶವನ್ನು ಸೆಪ್ಟೆಂಬರ್ 10, 2021 ರಂದು ಬಿಡುಗಡೆ ಮಾಡಲಾಗುತ್ತದೆ.

ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆಗೆ, ಜೆಇಇ ಮೇನ್‌ ಪರೀಕ್ಷೆಯಲ್ಲಿ ಅರ್ಹತೆಗಳಿಸಿದ ಟಾಪ್‌ 2.5 ಲಕ್ಷ ಅಭ್ಯರ್ಥಿಗಳು ರಿಜಿಸ್ಟ್ರೇಷನ್‌ ಪಡೆಯಬಹುದು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗಳಲ್ಲಿ ಪ್ರವೇಶಾತಿಗಾಗಿ ಜೆಇಇ ಅಡ್ವಾನ್ಸ್‌ ಪರೀಕ್ಷೆಯನ್ನು ಅರ್ಹತಾ ಪರೀಕ್ಷೆಯಾಗಿ ನಡೆಸಲಾಗುತ್ತದೆ.

JEE Exam

ಅಭ್ಯರ್ಥಿಗಳು ಬಿಟೆಕ್/ಬಿಎಸ್(4 ವರ್ಷ), ಬಿ ಆರ್ಕ್ (4 ವರ್ಷ), ಡ್ಯುಯಲ್ ಬಿಟೆಕ್-ಎಂಟೆಕ್-ಡ್ಯುಯಲ್ ಬಿಎಸ್-ಎಂಎಸ್(5 ವರ್ಷ) ಹಾಗೂ ಎಂಟೆಕ್-ಎಂಎಸ್‌ಸಿ(5 ವರ್ಷ) ಈ ಕೋರ್ಸ್‌ಗಳಿಗೆ ನೋಂದಣಿ ಮಾಡಿಕೊಳ್ಳಬಹುದು.

ಜೆಇಇ ಮೇನ್ ಅಡ್ಮಿಟ್ ಕಾರ್ಡ್: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಜೆಇಇ ಮೇನ್‌ 2021 ಸೆಷನ್‌-4 ಪರೀಕ್ಷೆಗೆ ಅಡ್ಮಿಟ್ ಕಾರ್ಡ್‌ ಅನ್ನು ಬಿಡುಗಡೆ ಮಾಡಿದೆ.

ಪರೀಕ್ಷೆಗೆ ರಿಜಿಸ್ಟ್ರೇಷನ್ ಪಡೆದಿರುವ ವಿದ್ಯಾರ್ಥಿಗಳು ನ್ಯಾಷನಲ್ ಟೆಸ್ಟಿಂಗ್‌ ಏಜೆನ್ಸಿಯ ಅಫೀಶಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರೀಕ್ಷೆಯನ್ನು ಆಗಸ್ಟ್‌ 26, 27, 31, 2021 ರಂದು ಮತ್ತು ಸೆಪ್ಟೆಂಬರ್ 1, 2, 2021 ರಂದು ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.

ಆಗಸ್ಟ್‌ 7 ರಂದು ಜೆಇಇ ಮೇನ್ ಸೆಷನ್‌ 3 ರ ಫಲಿತಾಂಶ ಬಿಡುಗಡೆ ಮಾಡಲಾಗಿತ್ತು. ಒಟ್ಟು 17 ವಿದ್ಯಾರ್ಥಿಗಳು ಶೇಕಡ 100 ಅಂಕಗಳಿಸಿದ್ದರು.

ಜೆಇಇ ಮೇನ್‌ 4ನೇ ಸೆಷನ್ ಪರೀಕ್ಷೆ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಲು jeemain.nta.nic.in ಗೆ ಭೇಟಿ ನೀಡಿ, ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಬಹುದು.

ಜೆಇಇ ಮೇನ್ ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್‌ ಹೇಗೆ?

- ಎನ್‌ಟಿಎ'ಯ ಅಫೀಶಿಯಲ್ ವೆಬ್‌ಸೈಟ್‌ jeemain.nta.nic.in ಗೆ ಭೇಟಿ ನೀಡಿ.

- ಓಪನ್‌ ಆದ ಪೇಜ್‌ನಲ್ಲಿ 'Download Admit Card for Session-4 JEE (Main) may, 2021' ಎಂದಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ.

- ಎನ್‌ಟಿಎ'ಯ ಮತ್ತೊಂದು ಪೇಜ್‌ ಓಪನ್ ಆಗುತ್ತದೆ. ಈ ಪೇಜ್‌ನಲ್ಲಿ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್‌ ನಂಬರ್, ಜನ್ಮ ದಿನಾಂಕ, ಸೆಕ್ಯೂರಿಟಿ ಪಿನ್‌ (ಕೆಳಗೆ ನೀಡಲಾದ) ನೀಡಿ 'Submit' ಎಂಬಲ್ಲಿ ಕ್ಲಿಕ್ ಮಾಡಿ.

- ಪ್ರವೇಶ ಪತ್ರ ಪ್ರದರ್ಶನವಾಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಜೆಇಇ ಮೇನ್ 2021 ಫೆಬ್ರುವರಿ ಸೆಷನ್‌ಗೆ ಒಟ್ಟು 6.60 ಲಕ್ಷ ವಿದ್ಯಾರ್ಥಿಗಳು ರಿಜಿಸ್ಟ್ರೇಷನ್‌ ಪಡೆದಿದ್ದರು. ಪರೀಕ್ಷೆಯು ಫೆಬ್ರುವರಿ 23, 24, 25 ಮತ್ತು 26 ರಂದು ಎರಡು ಶಿಫ್ಟ್‌ಗಳಲ್ಲಿ ನಡೆದಿತ್ತು. ಜೆಇಇ ನಾಲ್ಕನೇ ಸೆಷನ್‌ ಪರೀಕ್ಷೆಗೆ ಸುಮಾರು 7 ಲಕ್ಷ ವಿದ್ಯಾರ್ಥಿಗಳು ರಿಜಿಸ್ಟ್ರೇಷನ್‌ ಪಡೆದಿದ್ದಾರೆ. ಮೊದಲ ಶಿಫ್ಟ್‌ ಪರೀಕ್ಷೆಯು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ. ಎರಡನೆಯ ಶಿಫ್ಟ್‌ ಮಧ್ಯಾಹ್ನ 3 ರಿಂದ 6 ಗಂಟೆವರೆಗೆ ನಡೆಯಲಿದೆ. .

ಜೆಇಇ ಮೇನ್ ನಾಲ್ಕನೇ ಸೆಷನ್‌ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕೋವಿಡ್‌ ಹಿನ್ನೆಲೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.

English summary
If you are preparing for the JEE Advanced 2021, then we have an important piece of information for you. According to the latest updates, the Joint Entrance Examination Advanced (JEE Advanced 2021) online registration process is all set to commence from September 11, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X