ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಜಾಫರ್ ನಗರ : ಯುವತಿಯರಿಗೆ ಜೀನ್ಸ್, ಮೊಬೈಲ್ ನಿಷೇಧ

|
Google Oneindia Kannada News

ಲಕ್ನೋ, ಆ.9 : ಕೋಮಗಲಭೆಗಳಿಂದ ಸುದ್ದಿ ಮಾಡಿದ್ದ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಅವಿವಾಹಿತ ಯುವತಿಯರು ಜೀನ್ಸ್ ಧರಿಸುವುದು ಮತ್ತು ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಗುಜ್ಜಾರ್ ಸಮುದಾಯ ನಡೆಸಿದ ಪಂಚಾಯಿತಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ.

ಗುಜ್ಜಾರ್ ಸಮುದಾಯದ ಪಂಚಾಯಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಾಡ್ ವಾಡ್ ಗ್ರಾಮದ ಮುಖ್ಯಸ್ಥ ಅಶೋಕ್ ಕುಮಾರ್ ಹೇಳಿದ್ದಾರೆ. ಜಿನ್ಸ್ ಧರಿಸುವುದು ಮತ್ತು ಮೊಬೈಲ್ ಬಳಕೆ ಅವಿವಾಹಿತ ಯುವತಿಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದ್ದರಿಂದ ಇದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Jeans

ಅವಿವಾಹಿತ ಹೆಣ್ಣು ಮಕ್ಕಳು ಜೀನ್ಸ್ ಧರಿಸುವುದರಿಂದ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಪಂಚಾಯಿತಿ ಈ ನಿರ್ಧಾರ ಕೈಗೊಂಡಿದ್ದು, ನಮ್ಮ ಸಮುದಾಯದ ಹೆಣ್ಣುಮಕ್ಕಳು ಜೀನ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ. [ಹರ್ಯಾಣ: ಮಹಿಳೆಯರಿಗೆ ನೋ ಜೀನ್ಸ್]

ಪಂಚಾಯಿತಿ ಸಭೆಯಲ್ಲಿ ಜೀನ್ಸ್ ಮತ್ತು ಮೊಬೈಲ್ ಗಳಿಗೆ ಮಾತ್ರ ನಿಷೇಧ ಹೇರಿಲ್ಲ. ವಿವಾಹ ಸಮಾರಂಭದಲ್ಲಿ ಯುವತಿಯರು ನರ್ತಿಸುವುದಕ್ಕೂ ನಿಷೇಧ ಹೇರಲಾಗಿದೆ. ಇದು ನಮ್ಮ ಸಮುದಾಯಕ್ಕೆ ಮಾತ್ರ ಅನ್ವಯಿಸಲಿದೆ ಎಂದು ಅಶೋಕ್ ತಿಳಿಸಿದ್ದಾರೆ.

ಹಿಂದೆಯೂ ನಡೆದಿತ್ತು : ಜೀನ್ಸ್ ನಿಷೇಧಿಸಿರುವುದು ಇದೇ ಮೊದಲಲ್ಲ ಹಿಂದೆ, ಹರ್ಯಾಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳೆಯರು ಸಲ್ವಾರ್ ಕಮೀಜ್ ಅಥವಾ ಸೀರೆ ಮಾತ್ರ ತೊಡಬೇಕು ಎಂದು ಹೇಳಿತ್ತು. ಉದ್ಯೋಗಸ್ಥ ಮಹಿಳೆಯರು ಟೀಶರ್ಟ್ ಹಾಗೂ ಜೀನ್ಸ್ ಧರಿಸುವುದನ್ನು ನಿಷೇಧಿಸಿತ್ತು.

English summary
A Gujjar community panchayat has banned girls from wearing jeans and keeping mobile phones claiming that they were having a bad effect on them and were responsible for eve-teasing incidents. The panchayat of Gujjar community was held at Jadwad village on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X