ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ನಾಯಕತ್ವಕ್ಕೆ ಜೈ, ಬಿಜೆಪಿಯತ್ತ ವಾಲಿದ ಜಯಪ್ರದಾ

By Mahesh
|
Google Oneindia Kannada News

ನವದೆಹಲಿ, ಜ.30: ಸಮಾಜವಾದಿ ಪಕ್ಷದಿಂದ ಹೊರಬಿದ್ದಿರುವ ರಾಜಕಾರಣಿ, ನಟಿ ಜಯಪ್ರದಾ ಬಿಜೆಪಿ ಸೇರುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ದುಡಿಯಲು ಬಯಸಿರುವುದಾಗಿ ಸ್ವತಃ ಜಯಪ್ರದಾ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಜಯಪ್ರದಾ, ನಾನು ಬಿಜೆಪಿ ಕಾರ್ಯಕರ್ತೆಯಾಗಲು ಬಯಸುತ್ತೇನೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಚುನಾವಣೆಗೆ ಸ್ಪರ್ಧಿಸಲು ಅವಕಾಶವೂ ಬೇಡ ಎಂದು ಹೇಳಿದ್ದಾರೆ. [ಬಿಜೆಪಿ ಬದಲಿಗೆ ಕಾಂಗ್ರೆಸ್ ಮಡಿಲಿಗೆ ಜಯಪ್ರದಾ?]

ಬಿಜೆಪಿಯ ಉನ್ನತ ಮಟ್ಟದ ನಾಯಕರ ಜೊತೆ ಮಾತುಕತೆ ನಡೆಯುತ್ತಿದೆ. ನಾನು ಇನ್ನೂ ಈ ಬಗ್ಗೆ ನಿರ್ಧರಿಸಿಲ್ಲ. ಅಮರ್ ಸಿಂಗ್ ಅವರ ಜೊತೆ ಕೂಡಾ ಬಿಜೆಪಿಯವರ ಜೊತೆ ಮಾತನಾಡುತ್ತಿದ್ದಾರೆ. ಎಲ್ಲವೂ ಅಂತಿಮಗೊಂಡಾಗ ನಾನೇ ನಿಮಗೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.

ನನಗೆ ನರೇಂದ್ರ ಮೋದಿ ನಾಯಕತ್ವದಡಿ ಕೆಲಸ ಮಾಡಬೇಕು ಎಂಬ ಆಸೆಯಿದೆ. ನನಗೆ ಆರೋಗ್ಯಕರ ರಾಜಕೀಯ ಬೇಕು. ರಾಜಕೀಯದಲ್ಲಿ ಇದ್ದುಕೊಂಡು ಅಳುತ್ತಾ ಕೂರಲು ನಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Jaya Prada wants to work under Narendra Modi, says talks on for joining BJP

52 ವರ್ಷದ ಜಯಪ್ರದಾ ಆವರು ಸಮಾಜವಾದಿ ಪಕ್ಷದ ಟಿಕೆಟ್ ನಿಂದಲೇ ಎರಡು ಬಾರಿ (2004,2009) ರಾಂಪುರದ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದರು. ಆದರೆ, 2010ರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಜತೆಗಿನ ಕಿತ್ತಾಟದಿಂದಾಗಿ ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಜತೆಯಲ್ಲಿಯೇ ಜಯಪ್ರದಾ ಅವರನ್ನು ಎಸ್ ಪಿ ಉಚ್ಛಾಟಿಸಿತ್ತು. ಅದಾದನಂತರ, ರಾಷ್ಟ್ರೀಯ ಲೋಕ ಮಂಚ್ ನ ಉಪಾಧ್ಯಕ್ಷೆಯಾಗಿದ್ದರು.

90ರ ದಶಕದಿಂದ ರಾಜಕೀಯ ರಂಗದಲ್ಲಿರುವ ಆ ಕಾಲದ ಮೋಹಕ ನಟಿ ಜಯಪ್ರದಾ ಅವರು ಮೊದಲಿಗೆ ತೆಲುಗು ದೇಶಂ ಪಾರ್ಟಿ ಸೇರಿದ್ದರು. ಆದರೆ, ಚಂದ್ರಬಾಬು ನಾಯ್ಡು ಜತೆಗಿನ ವೈಮನಸ್ಯದಿಂದ ಪಕ್ಷ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು. ಈಗ ಮತ್ತೊಬ್ಬ ಹೈದರಾಬಾದಿ ಅಜರುದ್ದೀನ್ ಅವರ ಕ್ಷೇತ್ರದಲ್ಲಿ ಬದಲಿ ಆಟಗಾರ್ತಿಯಾಗಿ ಜಯಪ್ರದಾ ಅವರು ಹೊಸ ಇನ್ನಿಂಗ್ಸ್ ಆರಂಭಿಸಲು ಯತ್ನಿಸಿದ್ದರು. ಈಗ ಎನ್ ಡಿಎ ಬಾಗಿಲಲ್ಲಿ ನಿಂತಿದ್ದಾರೆ.

ನಾನು ಎನ್ ಟಿ ರಾಮರಾವ್, ಚಂದ್ರಬಾಬುನಾಯ್ಡು ಹಾಗೂ ಮುಲಾಯಂ ಸಿಂಗ್ ಯಾದವ್ ಅವರ ನಾಯಕತ್ವವನ್ನು ಕಂಡಿದ್ದೇನೆ. ಈಗ ನರೇಂದ್ರ ಮೋದಿ ನಾಯಕತ್ವದಲ್ಲಿ ಜನಸೇವೆ ಮಾಡಲು ಬಯಸಿದ್ದಾನೆ ಎಂದಿದ್ದಾರೆ.

ಕನ್ನಡ ಸೇರಿದಂತೆ ತೆಲುಗು, ಹಿಂದಿ ಇನ್ನಿತರ ಭಾಷೆಗಳು ಸೇರಿ ಸುಮಾರು 70 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಮೋಹಕ ತಾರೆ ಜಯಪ್ರದಾ ಅವರು 2014ರಲ್ಲಿ ರಾಷ್ಟ್ರೀಯ ಲೋಕದಳ ಟಿಕೆಟ್ ಪಡೆದು ಬಿಜ್ನೋರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)

English summary
Actor-turned-politician Jaya Prada, who was expelled from the Samajwadi Party, today said that talks were on with senior leaders of the BJP on her joining the party, and that she wanted to do so to “serve” it and not to contest any elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X