ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬದಲಿಗೆ ಕಾಂಗ್ರೆಸ್ ಮಡಿಲಿಗೆ ಜಯಪ್ರದಾ?

By Mahesh
|
Google Oneindia Kannada News

ನವದೆಹಲಿ, ಫೆ.11: ಬಹುಭಾಷಾ ತಾರೆ ಹಾಲಿ ರಾಜಕಾರಣಿ ಜಯಪ್ರದಾ ಅವರು ಮತ್ತೊಮ್ಮೆ ಪಕ್ಷದಿಂದ ಪಕ್ಷಕ್ಕೆ ಹಾರಲು ಸಜ್ಜಾಗುತ್ತಿದ್ದಾರೆ. ಸಮಾಜವಾದಿ ಪಕ್ಷ ತೊರೆದು ಸಂಸದೆ ಜಯಪ್ರದಾ ಅವರು ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ಬಾವುಟದಡಿ ಹೋರಾಡಲು ಸಜ್ಜಾಗಿದ್ದಾರೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

ಜಯಪ್ರದಾ ಅವರಿಗೆ ಮೊರಾಬಾದ್ ಟಿಕೆಟ್ ನೀಡಲು ಕಾಂಗ್ರೆಸ್ ಇಚ್ಛಿಸಿದ್ದಾರೆ. ಇದಕ್ಕೆ ಜಯಪ್ರದಾ ಅವರು ಕೂಡಾ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಮೊರಾಬಾದಿನ ಕ್ಷೇತ್ರದ ಸಂಸದ ಮಾಜಿ ಕ್ರಿಕೆಟ್ ನಾಯಕ ಮಹಮ್ಮದ್ ಅಜರುದ್ದೀನ್ ಅವರು ತಮ್ಮ ಕ್ಷೇತ್ರ ತೊರೆಯುವುದು ಗ್ಯಾರಂಟಿಯಾಗಿದೆ. ಅಜರುದ್ದೀನ್ ಅವರು ಉತ್ತರ ಪ್ರದೇಶ ತೊರೆದು ಕರ್ನಾಟಕದ ಬೀದರ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತಿದೆ.[ಈ ಬಗ್ಗೆ ವಿವರ ಇಲ್ಲಿ ಓದಿ]

51 ವರ್ಷದ ಜಯಪ್ರದಾ ಆವರು ಸಮಾಜವಾದಿ ಪಕ್ಷದ ಟಿಕೆಟ್ ನಿಂದಲೇ ಎರಡು ಬಾರಿ(2004,2009) ರಾಂಪುರದ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದಾರೆ. ಆದರೆ, 2010ರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಜತೆಗಿನ ಕಿತ್ತಾಟದಿಂದಾಗಿ ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಜತೆಯಲ್ಲಿಯೇ ಜಯಪ್ರದಾ ಅವರನ್ನು ಎಸ್ ಪಿ ಉಚ್ಛಾಟಿಸಿತ್ತು. ಅದಾದನಂತರ, ರಾಷ್ಟ್ರೀಯ ಲೋಕ ಮಂಚ್ ನ ಉಪಾಧ್ಯಕ್ಷೆಯಾಗಿದ್ದರು.

Jaya Prada to contest LS polls from Moradabad on Cong ticket?

ನಂತರ ಕೆಲ ಕಾಲ ದೇಗುಲ ದರ್ಶನ, ಚಿತ್ರರಂಗದಲ್ಲಿ ನಟನೆ ಮುಂದುವರೆಸಿದರೂ ರಾಜಕೀಯ ರಂಗದಲ್ಲಿ ಮತ್ತೆ ಸಕ್ರಿಯರಾದರು. ಮನೆ ದೇವರು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದು ಭಾರತೀಯ ಜನತಾ ಪಕ್ಷದ ಕಚೇರಿಗೆ ಕಾಲಿಟ್ಟರು. ಈ ನಡುವೆ ಉತ್ತರ ಭಾರತ ಬಿಟ್ಟು ಬನ್ನಿ ನಿಮಗೆ ಆಂಧ್ರಪ್ರದೇಶದಲ್ಲೇ ಸೂಕ್ತ ಕ್ಷೇತ್ರ ನೀಡುತ್ತೇವೆ ಎಂದು ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಕೂಡಾ ಆಫರ್ ನೀಡಿದ್ದರಂತೆ. ಆಂಧ್ರದಲ್ಲಿರುವ ಅವರ ಹುಟ್ಟೂರು ರಾಜಮಂಡ್ರಿಯಿಂದ ಜಯಪ್ರದಾ ಸ್ಪರ್ಧೆ ಎಂಬ ಸುದ್ದಿಯೂ ಹಬ್ಬಿತ್ತು.

ಆದರೆ, ಅಮರ್ ಸಿಂಗ್ ಸಲಹೆ ಮೇರೆಗೆ ಉತ್ತರ ಭಾರತದ ಲೋಕಸಭಾ ಕ್ಷೇತ್ರದಲ್ಲೇ ಸ್ಪರ್ಧಿಸಿ ಸಂಸತ್ತು ಪ್ರವೇಶ ಪಡೆಯುವ ಇಚ್ಛೆ ಜಯಪ್ರದಾ ಅವರದ್ದಾಗಿತ್ತು. 90ರ ದಶಕದಿಂದ ರಾಜಕೀಯ ರಂಗದಲ್ಲಿರುವ ಆ ಕಾಲದ ಮೋಹಕ ನಟಿ ಜಯಪ್ರದಾ ಅವರು ಮೊದಲಿಗೆ ತೆಲುಗು ದೇಶಂ ಪಾರ್ಟಿ ಸೇರಿದ್ದರು. ಆದರೆ, ಚಂದ್ರಬಾಬು ನಾಯ್ಡು ಜತೆಗಿನ ವೈಮನಸ್ಯದಿಂದ ಪಕ್ಷ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು. ಈಗ ಮತ್ತೊಬ್ಬ ಹೈದರಾಬಾದಿ ಅಜರುದ್ದೀನ್ ಅವರ ಕ್ಷೇತ್ರದಲ್ಲಿ ಬದಲಿ ಆಟಗಾರ್ತಿಯಾಗಿ ಜಯಪ್ರದಾ ಅವರು ಹೊಸ ಇನ್ನಿಂಗ್ಸ್ ನಲ್ಲಿ ಸಿಕ್ಸರ್ ಬಾರಿಸುವರೇ ಕಾದು ನೋಡಬೇಕಿದೆ.

English summary
Actress and Rampur MP Jaya Prada may join Congress and contest from Moradabad Lok Sabha constituency, says an Economic Times report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X