ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಉಡುಗೊರೆ ಪಡೆಯುವುದಕ್ಕೆ ತಮಿಳುನಾಡಲ್ಲಿ ನಿಯಮವಿಲ್ಲ'

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಏಪ್ರಿಲ್, 07: ರಾಜಕೀಯ ಮುಖಂಡರು ಉಡುಗೊರೆ ಪಡೆದಿದ್ದನ್ನು ದಾಖಲಿಸಬೇಕು ಎಂಬ ನಿಯಮ ತಮಿಳುನಾಡಿನಲ್ಲಿ ಇಲ್ಲ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಮುಂದೆ ಇಡಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ನಾಗೇಶ್ವರ ರಾವ್ ವಾದ ಮಂಡನೆ ಮುಂದುವರಿಸಿದರು. ಪಕ್ಷದ ಅನುಯಾಯಿಗಳು ಎಷ್ಟು ಉಡುಗೊರೆಯನ್ನಾದರೂ ನೀಡಬಹುದು ಎಂದು ವಾದ ಮಂಡಿಸಿದರು.

ಪಿಜಿ ಘೋಷ್ ಮತ್ತು ಅಮಿತ್ವ ರಾಯ್ ಅವರ ಪೀಠದ ಮುಂದೆ ವಾದ ಮಂಡನೆ ಮಾಡಿದ್ದಾರೆ. ರಾಜಾರಣಿಗಳು ಪಡೆದುಕೊಂಡ ಉಡುಗೊರೆಯ ಮೂಲವನ್ನು ಬಹಿರಂಗ ಮಾಡಬೇಕು ಎಂದು ಕರ್ನಾಟಕ ವಾದ ಮುಂದಿಟ್ಟಿದ್ದಕ್ಕೆ ಜಯಾ ಪರ ವಕೀಲರು ಉತ್ತರ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 19ಕ್ಕೆ ನಿಗದಿ ಮಾಡಲಾಗಿದೆ.[ಬೇರೆಯವರ ಆಸ್ತಿ ಬಗ್ಗೆ ಜಯಾ ಯಾಕೆ ಲೆಕ್ಕ ಕೊಡಬೇಕು?]

jayalalithaa

ಉಡುಗೊರೆ ವಿರುದ್ಧ ಯಾವ ಕಾನೂನು ಇಲ್ಲ
* ಜಯಾ ಪಡೆದುಕೊಂಡ ಉಡುಗೊರೆಗಳೆಲ್ಲವೂ ಕಾನೂನು ಬದ್ಧವಾಗಿಯೇ ಇದೆ.
* ಉಡುಗೊರೆಯನ್ನು ನೆಪವಾಗಿರಿಸಿಕೊಂಡು ಜಯಾ ಅವರನ್ನು ಹಿಂಸಿಸಲಾಗಿದೆ. ಬೇಡದ ಪ್ರಶ್ನೆಗಳನ್ನು ಕೇಳಲಾಗಿದೆ.
* ಮ್ಯಾಗಝಿನ್ ವೊಂದು ಹಣ ಪಡೆದುಕೊಳ್ಳುವುದಕ್ಕೂ ಜಯಾ ಅವರಿಗೂ ಸಂಬಂಧವಿಲ್ಲ.[ತಮಿಳುನಾಡು ಚುನಾವಣೆಗೆ ಮುನ್ನ ಜಯಾ ಕೇಸ್ ತೀರ್ಪು?]
* ಆದಾಯ ತೆರಿಗೆ ಇಲಾಖೆಯೇ ಜಯಾ ಅವರ ಲೆಕ್ಕವನ್ನು ಒಪ್ಪಿಕೊಂಡಿರುವಾಗ ಕರ್ನಾಟಕ ಸಲ್ಲದ ಕ್ಯಾತೆ ತೆಗೆಯುತ್ತಿದೆ.
* ಸುಧಾಕರನ್ ಮದುವೆಗೆ ಮಾಡಿದ ಎಲ್ಲ ಖರ್ಚನ್ನು ಜಯಾ ಅವರೇ ಭರಿಸಿದ್ದಾರೆ ಎಂಬುದಕ್ಕೆ ಯಾವ ಆಧಾರಗಳು ಇಲ್ಲ.

English summary
Arguments in the appeal filed by Karnataka challenging the acquittal of Tamil Nadu chief minister, J Jayalalithaa continued today before the Supreme Court. Arguing on behalf of Jayalalithaa, senior counsel L Nageshwar Rao told the Bench there is no law in Tamil Nadu that bars party cadres from giving gifts to leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X