• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರರಂಗದ ವರ್ಚಸ್ಸು ಕೆಡಿಸಲಾಗದು: ಡ್ರಗ್ಸ್ ಕುರಿತ ರವಿಕಿಶನ್ ಹೇಳಿಕೆಗೆ ಜಯಾ ಬಚ್ಚನ್ ಕಿಡಿ

|

ನವದೆಹಲಿ, ಸೆಪ್ಟೆಂಬರ್ 15: ಹಿಂದಿ ಚಿತ್ರರಂಗಕ್ಕೆ ಕಳಂಕ ತರುವ ಸಂಚಿನ ಪ್ರಯತ್ನಗಳು ನಡೆಯುತ್ತಿದೆ ಎಂಬ ಆರೋಪದಡಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ರಾಜ್ಯಸಭೆಯಲ್ಲಿ ಶೂನ್ಯ ಅವಧಿ ನೋಟಿಸ್ ನೀಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವು ಹಾಗೂ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಅವರ ಮಾದಕ ವಸ್ತು ಪ್ರಕರಣಗಳು ವಿವಾದ ತೀವ್ರವಾಗಿರುವ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಕೆಟ್ಟ ಹೆಸರು ತರುತ್ತಿರುವುದರ ಬಗ್ಗೆ ಚರ್ಚೆ ನಡೆಸಲು ಅವರು ಶೂನ್ಯ ಅವಧಿ ನೋಟಿಸ್ ನೀಡಿದ್ದಾರೆ.

ದೇಶದ ಯುವಕರನ್ನು ರಕ್ಷಿಸಿ: ಸರ್ಕಾರಕ್ಕೆ ಬಿಜೆಪಿ ಸಂಸದನ ಮನವಿ

ಚಿತ್ರರಂಗದಲ್ಲಿ ಮಾದಕ ವಸ್ತು ವ್ಯಸನ ತೀವ್ರವಾಗಿದೆ ಎಂದು ಭೋಜ್‌ಪುರಿ ನಟ ಹಾಗೂ ಸಂಸದ ರವಿ ಕಿಶನ್ ಸೋಮವಾರ ಲೋಕಸಭೆಯಲ್ಲಿ ಆರೋಪಿಸಿದ್ದರು. ಇದರ ವಿರುದ್ಧ ಸಿಡಿದೆದ್ದಿರುವ ಜಯಾ ಬಚ್ಚನ್, ಕೆಲವು ವ್ಯಕ್ತಿಗಳ ಕಾರಣಕ್ಕೆ ಇಡೀ ಚಿತ್ರರಂಗಕ್ಕೆ ಮಸಿ ಬಳಿಯವುದು ಸರಿಯಲ್ಲ ಎಂದಿದ್ದಾರೆ. 'ಬಾಲಿವುಡ್‌ಗೆ ಕಳಂಕ ತರುವ ಸಂಚು' ಎಂಬ ವಿಷಯದ ಕುರಿತು ಚರ್ಚೆ ನಡೆಸಲು ಅವರು ರಾಜ್ಯಸಭೆ ಕಲಾಪದ ಎರಡನೆಯ ದಿನವಾದ ಮಂಗಳವಾರ ನೋಟಿಸ್ ನೀಡಿದ್ದಾರೆ. ಮುಂದೆ ಓದಿ.

ಕೆಲಸಮಾಡಿದವರೇ ಕೊಳಚೆ ಎನ್ನುತ್ತಾರೆ

ಕೆಲಸಮಾಡಿದವರೇ ಕೊಳಚೆ ಎನ್ನುತ್ತಾರೆ

'ಮನರಂಜನಾ ಕ್ಷೇತ್ರದಲ್ಲಿರುವ ಜನರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲಾಗುತ್ತಿದೆ. ಚಿತ್ರೋದ್ಯಮದಲ್ಲಿ ಹೆಸರು ಮಾಡಿದವರೇ ಈಗ ಅದನ್ನು ಕೊಳಚೆ ಎನ್ನುತ್ತಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಅಲ್ಲಗಳೆಯುತ್ತೇನೆ. ಅಂತಹ ವ್ಯಕ್ತಿಗಳು ಆ ರೀತಿಯ ಭಾಷೆಯನ್ನು ಬಳಸದಂತೆ ಸರ್ಕಾರ ಸೂಚಿಸುತ್ತದೆ ಎಂದು ನಾನು ಭರವಸೆ ಹೊಂದಿದ್ದೇನೆ' ಎಂಬುದಾಗಿ ರವಿ ಕಿಶನ್ ಹೇಳಿಕೆಯನ್ನು ಉಲ್ಲೇಖಿಸಿ ಜಯಾ ಬಚ್ಚನ್ ಹೇಳಿದ್ದಾರೆ.

NEET: ಸಂಸತ್ ಆವರಣದಲ್ಲಿ ಡಿಎಂಕೆ ಸಂಸದರ ಪ್ರತಿಭಟನೆ

ವರ್ಚಸ್ಸು ಕೆಡಿಸಲಾಗದು

ವರ್ಚಸ್ಸು ಕೆಡಿಸಲಾಗದು

ಸಿನಿಮಾ ರಂಗಕ್ಕೆ ಸೇರಿದವರಾಗಿದ್ದುಕೊಂಡೇ ಕೆಲವು ಜನರು ಅದರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಜಯಾ ಕಿಡಿಕಾರಿದ್ದಾರೆ. 'ಕೆಲವೇ ಜನರ ಕಾರಣಕ್ಕಾಗಿ ನೀವು ಇಡೀ ಚಿತ್ರರಂಗದ ವರ್ಚಸ್ಸನ್ನು ಕೆಡಿಸಲು ಸಾಧ್ಯವಿಲ್ಲ. ಚಿತ್ರರಂಗದಿಂದ ಬಂದಿರುವ ನಮ್ಮ ಲೋಕಸಭೆಯ ಸದಸ್ಯರೊಬ್ಬರು ನಿನ್ನೆ ಚಿತ್ರರಂಗದ ವಿರುದ್ಧವೇ ಮಾತನಾಡಿರುವುದು ನನಗೆ ನಾಚಿಕೆಯುಂಟುಮಾಡಿದೆ' ಎಂದು ಜಯಾ ವಾಗ್ದಾಳಿ ನಡೆಸಿದ್ದಾರೆ.

ರವಿ ಕಿಶನ್ ತಿರುಗೇಟು

ರವಿ ಕಿಶನ್ ತಿರುಗೇಟು

ಜಯಾ ಬಚ್ಚನ್‌ಗೆ ತಿರುಗೇಟು ನೀಡಿರುವ ಬಿಜೆಪಿ ಸಂಸದ ರವಿ ಕಿಶನ್, 'ನಮ್ಮ ಚಿತ್ರರಂಗವನ್ನು ದುರ್ಬಲವನ್ನಾಗಿರುವ ಮೂಲಕ ಅದನ್ನು ಮುಗಿಸುವ ಸಂಚು ಮಾಡಲಾಗಿದೆ. ಚಿತ್ರೋದ್ಯಮದ ಜವಾಬ್ದಾರಿಯುತ ಸದಸ್ಯನಾಗಿ ಸಂಸತ್‌ನಲ್ಲಿ ಅದರ ಬಗ್ಗೆ ಅದನ್ನು ಪ್ರಸ್ತಾಪಿಸುವುದು ನನ್ನ ಹಕ್ಕು ಮಾತ್ರವಲ್ಲ, ಜವಾಬ್ದಾರಿಯೂ ಹೌದು. ಅದನ್ನು ಜಯಾ ಬಚ್ಚನ್ ಗೌರವಿಸಬೇಕು. ನಾನು ಕೇವಲ ಅರ್ಚಕನ ಮಗ. 600 ಸಿನಿಮಾಗಳಲ್ಲಿ ಕೆಲಸ ಮಾಡಿದ ಬಳಿಕವೂ ಅಂಬೆಗಾಲಿಡುತ್ತಿದ್ದೇನೆ' ಎಂದಿದ್ದಾರೆ.

ಉದ್ಯೋಗ ಕಳೆದುಕೊಂಡ ವಲಸೆ ಕಾರ್ಮಿಕರು, ಮೃತರ ಅಂಕಿಅಂಶಗಳಿಲ್ಲ: ಕೇಂದ್ರ

ನೀಟ್ ಪರೀಕ್ಷೆ ಚರ್ಚೆಗೆ ಅವಕಾಶ

ನೀಟ್ ಪರೀಕ್ಷೆ ಚರ್ಚೆಗೆ ಅವಕಾಶ

ನೀಟ್ ಪರೀಕ್ಷೆಗೂ ಮುನ್ನ ತಮಿಳುನಾಡಿನಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಸದಸ್ಯರು ಸೋಮವಾರ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದ್ದರು. ಮಂಗಳವಾರ ಈ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿರುವ ಡಿಎಂಕೆ ಸಂಸದ ತಿರುಚಿ ಶಿವ, 'ನೀಟ್ ಪರೀಕ್ಷೆ ನಡೆಸುವುದರ ಅಡ್ಡ ಪರಿಣಾಮ, ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಕಾರಣ' ಎಂಬ ವಿಷಯದ ಬಗ್ಗೆ ರಾಜ್ಯಸಭೆಯಲ್ಲಿ ಶೂನ್ಯ ಅವಧಿ ನೋಟಿಸ್ ನೀಡಿದ್ದಾರೆ. ಖಾಸಗಿ ಕೋಚಿಂಗ್ ಸಿಗದೆ ಗ್ರಾಮೀಣ ಪ್ರದೇಶ ಹಾಗೂ ಬಡ ಮಕ್ಕಳಿಗೆ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಆಗುತ್ತಿಲ್ಲ. ಈ ಪರೀಕ್ಷೆ ಭಯದಿಂದ ತಮಿಳುನಾಡಿನಲ್ಲಿ 11 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀಟ್ ಅನ್ನು ರದ್ದುಗೊಳಿಸಿ ತಮಿಳುನಾಡಿನ ವಿದ್ಯಾರ್ಥಿಗಳ ಜೀವ ಉಳಿಸಿ ಎಂದು ಡಿಎಂಕೆ ಒತ್ತಾಯಿಸಿದೆ.

English summary
Parliament Monsoon Session 2020: Samajwadi Party Rajya Sabha MP Jaya Bachchan has given Zero Hour notice over on an alleged conspiracy to defame the film industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X