• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾಕ್ಕೆ ಅವಕಾಶ ನೀಡಿದ್ದ ನೆಹರೂ 'ಮೂಲ ತಪ್ಪಿತಸ್ಥ': ಜೇಟ್ಲಿ ಆರೋಪ

|

ನವದೆಹಲಿ, ಮಾರ್ಚ್ 15: ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲ ಮತ್ತು ಚೀನಾಕ್ಕೆ ಹೆದರಿದ್ದಾರೆ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸಿಕ್ಕಿದ್ದ ಕಾಯಂ ಸದಸ್ಯತ್ವದ ಅವಕಾಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ 'ಮೂಲ ತಪ್ಪಿತಸ್ಥ' ಎಂದು ಆರೋಪಿಸಿದ್ದಾರೆ.

ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಭಾರತದ ಪ್ರಯತ್ನಕ್ಕೆ ಚೀನಾ ನಾಲ್ಕನೆಯ ಬಾರಿ ಅಡ್ಡಗಾಲು ಹಾಕಿತ್ತು. ಇದು ರಾಜಕೀಯ ವಲಯದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಈ ವಿಚಾರವಾಗಿ ಪರಸ್ಪರ ನಿಂದನೆಗೆ ಇಳಿದಿವೆ.

ಚೀನಾವನ್ನು MFN ಪಟ್ಟಿಯಿಂದ ಕಿತ್ತೆಸೆಯಿರಿ, ಮೋದಿ ಸರ್ಕಾರಕ್ಕೆ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಅವರೊಬ್ಬ ದುರ್ಬಲ ವ್ಯಕ್ತಿ. ಚೀನಾ ಅಧ್ಯಕ್ಷರನ್ನು ಕಂಡರೆ ಅವರು ಹೆದರುತ್ತಾರೆ ಎಂದು ಲೇವಡಿ ಮಾಡಿದ್ದರು. ಬಂಧಿಯಾಗಿದ್ದ ಅಜರ್‌ನನ್ನು ಆಗಿನ ಬಿಜೆಪಿ ಸರ್ಕಾರವೇ ಒತ್ತಡಕ್ಕೆ ಮಣಿದು ಬಿಡುಗಡೆ ಮಾಡಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆದುಕೊಳ್ಳಲು ಆಗಿನ ಪ್ರಧಾನಿ ನೆಹರೂ ಎಸಗಿದ ಪ್ರಮಾದವೇ ಕಾರಣ ಎಂದು ಬಿಜೆಪಿ ಆರೋಪ ಮಾಡಿದೆ.

1995ರ ಆಗಸ್ಟ್ 2ರಂದು ಪ್ರಧಾನಿ ನೆಹರೂ ಅವರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಉಲ್ಲೇಖಿಸಿರುವ ಜೇಟ್ಲಿ, 'ಕಾಶ್ಮೀರ ಮತ್ತು ಚೀನಾ- ಈ ಎರಡೂ ಮೂಲ ತಪ್ಪುಗಳು ಒಬ್ಬರೇ ವ್ಯಕ್ತಿ ಎಸಗಿದ್ದಾರೆ' ಎಂದು ಆರೋಪಿಸಿದ್ದಾರೆ.

ಭಾರತಕ್ಕೆ ಅವಕಾಶ ನೀಡಬೇಕು

'1995ರ ಆಗಸ್ಟ್ 2ರಂದು ಮುಖ್ಯಮಂತ್ರಿಗಳಿಗೆ ನೆಹರೂ ಬರೆದ ಕುಖ್ಯಾತ ಪತ್ರದಲ್ಲಿ, ಚೀನಾವನ್ನು ವಿಶ್ವಸಂಸ್ಥೆಯಲ್ಲಿ ಸೇರಿಸಿಕೊಳ್ಳಬೇಕು ಆದರೆ ಭದ್ರತಾ ಮಂಡಳಿಯಲ್ಲಿ ಅಲ್ಲ ಮತ್ತು ಆ ಜಾಗದಲ್ಲಿ ಭಾರತಕ್ಕೆ ಅವಕಾಶ ನೀಡಬೇಕು ಎಂದು ಅಮೆರಿಕ ಅನೌಪಚಾರಿಕವಾಗಿ ಸಲಹೆ ನೀಡಿತ್ತು' ಎಂಬುದನ್ನು ಜೇಟ್ಲಿ ಒಂದು ಟ್ವೀಟ್‌ನಲ್ಲಿ ನೆನಪಿಸಿದ್ದಾರೆ.

ಚೀನಾಕ್ಕೆ ನೀಡಬೇಕು

'...ನಮಗೆ ಸಾಧ್ಯವಿಲ್ಲ. ಇದನ್ನು ಒಪ್ಪಿಕೊಳ್ಳುವುದು ಚೀನಾದೊಂದಿಗೆ ವೈಮನಸ್ಸು ಮಾಡಿಕೊಂಡಂತೆ. ಹಾಗೂ ಚೀನಾದಂತಹ ಮಹಾನ್ ದೇಶವು ಭದ್ರತಾ ಮಂಡಳಿಯಲ್ಲಿ ಇಲ್ಲದೆ ಇರುವುದು ನ್ಯಾಯೋಚಿತವಲ್ಲ' ಎಂದು ನೆಹರೂ ಬರೆದಿದ್ದರು.

ನಿಮ್ಮ ಮುತ್ತಾತ ಮಾಡಿದ ತಪ್ಪು ಅದು: ರಾಹುಲ್ ಗೆ ಬಿಜೆಪಿ ತಪರಾಕಿ

ಮೂಲ ತಪ್ಪಿತಸ್ಥ ಯಾರು?

'ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಮಗೆ ಮೂಲ ತಪ್ಪಿತಸ್ಥ ಯಾರು ಎಂಬುದನ್ನು ಹೇಳಲಿದ್ದಾರೆಯೇ?' ಎಂದು ಜೇಟ್ಲಿ ಮತ್ತೊಂದು ಟ್ವೀಟ್‌ನಲ್ಲಿ ಕೆಣಕಿದ್ದಾರೆ.

ಕ್ಸಿ ಕಂಡರೆ ಮೋದಿಗೆ ಭಯ: ರಾಹುಲ್ ಗಾಂಧಿ ವ್ಯಂಗ್ಯ, ಟ್ವಿಟ್ಟಿಗರ ತರಾಟೆ

ನೆಹರೂ ನಿರಾಕರಿಸಿರಲಿಲ್ಲ

ನೆಹರೂ ನಿರಾಕರಿಸಿರಲಿಲ್ಲ

ಆದರೆ, ಜವಹರಲಾಲ್ ನೆಹರೂ ತಮಗೆ ನೀಡಲಾಗಿದ್ದ ಆಹ್ವಾನವನ್ನು ನಿರಾಕರಿಸಿರಲಿಲ್ಲ ಎಂದು 'ದಿ ಹಿಂದೂ' ಪತ್ರಿಕೆ ವರದಿ ತಿಳಿಸಿದೆ. ಹಳೆಯ ವರದಿಯನ್ನು ಉಲ್ಲೇಖಿಸಿರುವ ಪತ್ರಿಕೆ, ಭಾರತಕ್ಕೆ ಅಂತಹ ಆಹ್ವಾನ ನೀಡಿರಲಿಲ್ಲ ಎಂದು 1955ರ ಸೆಪ್ಟೆಂಬರ್ 27ರಂದು ಲೋಕಸಭೆಯಲ್ಲಿ ಡಾ.ಜೆ.ಎನ್ ಪರೇಖ್ ಅವರ ಪ್ರಶ್ನೆಗೆ ನೆಹರೂ ಉತ್ತರ ನೀಡಿದ್ದರು ಎಂದು ವರದಿ ಹೇಳಿದೆ.

ಔಪಚಾರಿಕ ಅಥವಾ ಅನೌಪಚಾರಿಕವಾದ ಯಾವುದೇ ರೀತಿಯ ಆಹ್ವಾನ ಭಾರತಕ್ಕೆ ಬಂದಿರಲಿಲ್ಲ. ಈ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಗಳು ಅಧಾರರಹಿತ ಎಂದು ನೆಹರೂ ವಿವರಿಸಿದ್ದರು ಎಂದು ವರದಿ ತಿಳಿಸಿದೆ.

English summary
Finance Minister Arun Jaitley alleged that first Prime Minister jawaharlal nehru was the original sinner who favoured China for UNSC permanent membership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X