ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಸ್ವಂತ್ ಸಿಂಗ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ

By Mahesh
|
Google Oneindia Kannada News

ಜೋಧ್ ‌ಪುರ್, ಮಾ.24: ರಾಜಸ್ಥಾನದ ಬಾರ್ಮರ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಹಿರಿಯ ಬಿಜೆಪಿ ಧುರೀಣ ಜಸ್ವಂತ್ ಸಿಂಗ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ನಾನು ಇನ್ನೂ ಬಿಜೆಪಿಗೆ ರಾಜೀನಾಮೆ ನೀಡಿಲ್ಲ. ಈ ಕುರಿತು ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ಜಸ್ವಂತ್ ಸಿಂಗ್ ಹಾಲಿ ಡಾರ್ಜಿಲಿಂಗ್ ಕ್ಷೇತ್ರದ ಸಂಸದ, ಬಾರ್ಮರ್ ಕ್ಷೇತ್ರದಿಂದ ಸ್ಪರ್ಧಿಸುವ ಅವರ ಇಚ್ಛೆಗೆ ಬಿಜೆಪಿ ಪಕ್ಷ ಟಿಕೆಟ್ ನಿರಾಕರಿಸಿತ್ತು. ಹಿರಿಯ ನಾಯಕರನ್ನು ಕಡೆಗಣಿಸಿರುವ ಬಿಜೆಪಿ ಇತ್ತೀಚೆಗಷ್ಟೇ ಕಾಂಗ್ರೆಸ್ ‌ನಿಂದ ಬಂದಿದ್ದ ಸೋನಾರಾಂ ಚೌಧರಿಗೆ ಬಿಜೆಪಿ ಟಿಕೆಟ್ ಲಭಿಸಿತ್ತು. ಜಸ್ವಂತ್ ಸಿಂಗ್ ಅವರು ಈಗ ಬಿಜೆಪಿ ಅಭ್ಯರ್ಥಿ ಕರ್ನಲ್(ನಿವೃತ್ತ) ಸೋನಾ ರಾಮ್ ಚೌಧರಿ ವಿರುದ್ಧ ಸೆಣಸಲಿದ್ದಾರೆ.

Jaswant Singh files his nomination papers as an independent candidate

ಟಿಕೆಟ್ ಹಂಚಿಕೆ ಗೊಂದಲ ಪರಿಹರಿಸುವಂತೆ ಬಿಜೆಪಿಗೆ 48 ಗಂಟೆಗಳ ಗಡುವು ನೀಡಿದ್ದ ಜಸ್ವಂತ್ ಸಿಂಗ್ ಅವರು, ಬಾರ್ಮರ್ ನಲ್ಲಿ ನನ್ನ ಬೆಂಬಲಿಗರು ಮತ್ತು ಇತರರೊಂದಿಗೆ ಸಮಾಲೋಚನೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇನೆ. ಅನಂತರ ನಿಮ್ಮೆಂದಿಗೆ ಈ ವಿಚಾರದಲ್ಲಿ ಮಾತನಾಡುತ್ತೇನೆ ಎಂದು ಜಸ್ವಂತ್ ಹೇಳಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಹಿರಿಯ ನಾಯಕ ಜಸ್ವಂತ್ ಅವರು ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎಂದು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ನೀಡಿದ್ದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಜಸ್ವಂತ್ ಸಿಂಗ್, ಅಡ್ಜೆಸ್ಟ್ ಮಾಡಿಕೊಳ್ಳಲು ನಾನೇನು ಪೀಠೋಪಕರಣವಲ್ಲ. ಅಡ್ಜೆಸ್ಟ್ ಮನಸ್ಥಿತಿ ಎಲ್ಲವನ್ನು ಹೇಳುತ್ತದೆ. ಇದು ತೀವ್ರ ಆಘಾತಕಾರಿ ಹೇಳಿಕೆ ಎಂದಿದ್ದರು.

ಜನರ ಅಭಿಮತ ಸಂಗ್ರಹಿಸಿ ನಾನು ಕಣಕ್ಕಿಳಿಯುತ್ತಿದ್ದೇನೆ. ನನ್ನ ಗೆಲುವು ಸೋಲು ಜನರ ಕೈಲಿದೆ. ತತ್ತ್ವಸಿದ್ಧಾಂತಕ್ಕೆ ಬದ್ಧನಾಗಿ ನಾನು ಕಣದಲ್ಲಿದ್ದೇನೆ. ಜನರು ನನ್ನ ಕೈಹಿಡಿಯಲಿದ್ದಾರೆ ಎಂದು ಜಸ್ವಂತ್ ಸಿಂಗ್ ಹೇಳಿದ್ದಾರೆ. ನಾಮಪತ್ರ ಸಲ್ಲಿಕೆ ಚಿತ್ರ ಇಲ್ಲಿದೆ ನೋಡಿ...

English summary
BJP senior leader Jaswant Singh has filed his nomination papers from Barmer as an Independent candidate today (Mar.24).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X