ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ನರೇಂದ್ರ ಮೋದಿ ಅಪ್ಪುಗೆ ಮತ್ತು ಬೆಚ್ಚಗಿನ ಸಂಬಂಧ

|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಪ್ರಭಾವಿ ನಾಯಕರನ್ನು ಅಪ್ಪಿಕೊಂಡರೆ ಆ ದೇಶದ ಜತೆಗಿನ ಭಾರತದ ಸ್ನೇಹ ಗಟ್ಟಿಯಾದಂತೆ ಎಂಬುದೊಂದು ತುಂಬ ಪ್ರಚಲಿತದಲ್ಲಿರುವ ಮಾತು. ಅಥವಾ ಹಾಗೆ ಸ್ನೇಹ ಬೆಸೆಯುವ ದೇಶಗಳ ಜತೆಗೆ ಮಾತ್ರ ಪ್ರಧಾನಿ ಹೀಗೆ ಅಪ್ಪುಗೆಯ ಸ್ವಾಗತ ನೀಡುತ್ತಾರೇನೋ!

ಜಪಾನ್ ನ ಪ್ರಧಾನಿ ಶಿಂಜೊ ಅಬೆ ಅವರಿಗೆ ಕೂಡ ಗುಜರಾತ್ ನಲ್ಲಿ ಅಂಥದೇ ಸ್ವಾಗತ ಸಿಕ್ಕಿದೆ. ಅವರನ್ನು ಅಪ್ಪಿಕೊಂಡು ಸ್ವಾಗತ ಕೋರಿದ್ದಾರೆ ನರೇಂದ್ರ ಮೋದಿ. ಬೌದ್ಧ ಭಿಕ್ಷುಗಳು ಕೂಡ ಶಿಂಜೊ ಅಬೆ ದಂಪತಿಗೆ ಸ್ವಾಗತ ಮಾಡಿದ್ದಾರೆ. ಇದೊಂದು ಸ್ನೇಹದ ಮುಂದುವರಿಕೆ ಎಂಬಂತಿದೆ.

ಮೋದಿ, ಜಪಾನ್ ಪ್ರಧಾನಿ ಶಿಂಜೋ ಅಬೆ ರೋಡ್ ಶೋಮೋದಿ, ಜಪಾನ್ ಪ್ರಧಾನಿ ಶಿಂಜೋ ಅಬೆ ರೋಡ್ ಶೋ

ಇನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೋಲ್ಕತ್ತಾದಲ್ಲಿ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಊಟ ಮಾಡಿದ್ದಾರೆ. ಪಿತೃ ಪಕ್ಷದ ಪ್ರಯುಕ್ತ ಬಾಲಿವುಡ್ ನಟ ಸಂಜಯ್ ದತ್ ಅವರು ತಮ್ಮ ತಂದೆ-ತಾಯಿ ಸುನೀಲ್ ದತ್ ಹಾಗೂ ನರ್ಗೀಸ್ ಅವರಿಗೆ ವಾರಾಣಸಿಯ ರಾಣಿ ಘಾಟ್ ನಲ್ಲಿ ಪಿಂಡ ಪ್ರದಾನ ಮಾಡಿದ್ದಾರೆ.

ಇನ್ನಷ್ಟು ಸುದ್ದಿ-ಚಿತ್ರಗಳು ಇಲ್ಲಿವೆ. ಅವುಗಳ ಪೈಕಿ ರೋಹಿಂಗ್ಯಾ ಮುಸ್ಲಿಮ್ ಮಹಿಳೆಯರ ಪಾಡು ನೋಡಿದರೆ ಕರುಳು ಕತ್ತರಿಸುವಂತಿದೆ. ಕೆಸರಿನಲ್ಲಿ ನಿಂತಿರುವ ಈ ಮಹಿಳೆಯರ ಫೋಟೋ ಅವರ ಸ್ಥಿತಿಯನ್ನು ಮತ್ತಷ್ಟು ಮನದಟ್ಟು ಮಾಡುವಂತಿದೆ. ಇಲ್ಲಿರುವ ಪಿಟಿಐ ಸುದ್ದಿ ಸಂಸ್ಥೆಯ ಫೋಟೋಗಳು ಎಷ್ಟೊಂದು ಮಾತನಾಡುತ್ತಿವೆ!

ಜಪಾನ್ ಪ್ರಧಾನಿಗೆ ಅಪ್ಪುಗೆಯ ಸ್ವಾಗತ

ಜಪಾನ್ ಪ್ರಧಾನಿಗೆ ಅಪ್ಪುಗೆಯ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅಪ್ಪಿಕೊಂಡಂಥ ಯಾವುದೇ ದೇಶದ ನಾಯಕರು ಭಾರತಕ್ಕೆ ಸ್ನೇಹಿತರಾಗುತ್ತಾರೆ ಅನ್ನೋದು ಜನಜನಿತವಾದ ಮಾತು. ಅಥವಾ ಹಾಗೆ ಸ್ನೇಹಪರವಾದ ದೇಶಗಳ ನಾಯಕರನ್ನು ಮೋದಿ ಬರಮಾಡಿಕೊಳ್ಳುವ ಬಗೆಯೇ ಇದು. ಜಪಾನ್ ನ ಪ್ರಧಾನಿ ಶಿಂಜೋ ಅಬೆ ಅವರನ್ನು ನರೇಂದ್ರ ಮೋದಿ ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಬುಧವಾರ ಸ್ವಾಗತಿಸಿದ ಬಗೆಯಿದು.

ಚೆಂದದ ಕಣ್ಣಿನ ಚೆಲುವೆ

ಚೆಂದದ ಕಣ್ಣಿನ ಚೆಲುವೆ

ಅಂತರರಾಷ್ಟ್ರೀಯ ಖ್ಯಾತಿಯ ರೂಪದರ್ಶಿ ಹಾಗೂ ಫ್ಯಾಷನ್ ವಿನ್ಯಾಸಕಿ ಡೇನಿಯಲ್ ಪೀಟೆ ರಾಜಸ್ತಾನದ ಜೋಧ್ ಪುರ್ ನಲ್ಲಿ ಕಂಡುಬಂದಿದ್ದು ಹೀಗೆ.

ಅಮಿತ ಭೋಜನ

ಅಮಿತ ಭೋಜನ

ಕೋಲ್ಕತ್ತದ ಕಾಶೀಪುರದ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೋಜನ ಸ್ವೀಕರಿಸಿದರು.

ಸುನೀಲ್ ದತ್- ನರ್ಗೀಸ್ ಗೆ ಪಿಂಡ ಪ್ರದಾನ

ಸುನೀಲ್ ದತ್- ನರ್ಗೀಸ್ ಗೆ ಪಿಂಡ ಪ್ರದಾನ

ಬಾಲಿವುಡ್ ನಟ ಸಂಜಯ್ ದತ್ ವಾರಾಣಸಿಯ ರಾಣಿ ಘಾಟ್ ನಲ್ಲಿ ತನ್ನ ತಂದೆ ಸುನೀಲ್ ದತ್ ಹಾಗೂ ನರ್ಗೀಸ್ ಅವರಿಗೆ ಪಿಂಡ ಪ್ರದಾನ ಮಾಡಿದರು.

ಬೌದ್ಧಭಿಕ್ಷುಗಳಿಂದ ಸ್ವಾಗತ

ಬೌದ್ಧಭಿಕ್ಷುಗಳಿಂದ ಸ್ವಾಗತ

ಗುಜರಾತ್ ನ ಅಹಮದಾಬಾದ್ ನ ವಿಮಾನ ನಿಲ್ದಾಣದಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ, ಅವರ ಪತ್ನಿ ಅಕಿ ಅವರನ್ನು ಬೌದ್ಧಭಿಕ್ಷುಗಳು ಸ್ವಾಗತಿಸಿದರು.

ಬರಿಗಾಲು, ಕೆಸರು ಹಾಗೂ ಬದುಕು

ಬರಿಗಾಲು, ಕೆಸರು ಹಾಗೂ ಬದುಕು

ಇದು ಬಾಂಗ್ಲಾದೇಶದಲ್ಲಿ ಕಂಡುಬಂದ ಮಹಿಳೆಯರ ಸರತಿ. ರೋಹಿಂಗ್ಯಾ ಮುಸ್ಲಿಮ್ ಮಹಿಳೆಯರು ಕುಟುಪಲಾಂಗ್ ನಲ್ಲಿ ತಮ್ಮ ಮನೆ ನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನು ಪಡೆಯಲು ಹೀಗೆ ಸಾಲಿನಲ್ಲಿ ನಿಂತಿದ್ದಾರೆ. ಮ್ಯಾನ್ಮಾರ್ ನಿಂದ ವಲಸೆ ಬರುತ್ತಿರುವ ರೋಹಿಂಗ್ಯಾ ಮುಸ್ಲಿಮರು ಹಸಿವು ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

English summary
Japan PM Shinzo Abe visit to Gujarat, Bollywood actor pinda pradan in Varanasi and other events represent through PTI photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X