• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ ವಿರುದ್ಧ ಯುದ್ಧದ ರಣ ತಂತ್ರಕ್ಕೆ ಭಾರತದ ಜತೆ ನಿಂತ ಜಪಾನ್

|

ನವದೆಹಲಿ, ಸೆಪ್ಟೆಂಬರ್ 10: ಭಾರತ-ಚೀನಾದ ನಡುವೆ ಯುದ್ಧದ ಕಾರ್ಮೋಡ ಹೆಚ್ಚುತ್ತಿರುವ ಬೆನ್ನಲ್ಲೇ ಜಪಾನ್‌ನೊಂದಿಗೆ ಕೇಂದ್ರ ಸರ್ಕಾರ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿದೆ.

ಭಾರತ ಹಾಗೂ ಜಪಾನ್ ಸೇನೆಗಳು ಪರಸ್ಪರ ಮೂಲಸೌಕರ್ಯ ಹಾಗೂ ಲಾಜಿಸ್ಟಿಕ್ ಬಳಕೆಗೆ ಒಪ್ಪಿಗೆ ನೀಡಿವೆ. ಭಾರತದ ರಕ್ಷಣಾ ಕಾರ್ಯದರ್ಶಿ ಅಜಯ್‌ಕುಮಾರ್ ಹಾಗೂ ಜಪಾನ್ ರಾಜಭಾರಿ ಸುಜೂಕಿ ಸತೋಷಿ ನಡುವೆ ಈ ಒಪ್ಪಂದವಾಗಿದೆ.

ವಾಯುಪಡೆಗೆ ರಫೇಲ್ ಸೇರ್ಪಡೆ; ಭಾರತಕ್ಕೆ ಬಂದ ಫ್ರಾನ್ಸ್ ಸಚಿವೆ

ಒಪ್ಪಂದದ ಪ್ರಕಾರ ಎರಡೂ ಸೇನೆಗಳು ಇನ್ನಷ್ಟು ನಿಕಟ ಸಂಬಂಧದೊಂದಿಗೆ ಕಾರ್ಯನಿರ್ವಹಿಸಲಿದ್ದು, ಪರಸ್ಪರ ರಕ್ಷಣಾ ಸವಲತ್ತುಗಳ ಬಳಕೆಗೂ ಸಮ್ಮತಿ ಸಿಗಲಿದೆ. ಹಾಗೆಯೇ ಉಭಯ ರಾಷ್ಟ್ರಗಳ ನಡುವೆ ಮಿಲಿಟರಿ ತರಬೇತಿಗಳು ಕೂಡ ಇನ್ನಷ್ಟು ಹೆಚ್ಚಾಗಲಿವೆ. ಈಗಾಗಲೇ ಭಾರತವು ಅಮೆರಿಕ, ಫ್ರಾನ್ಸ್, ಸಿಂಗಾಪುರ, ಕ್ಷಿಣ ಕೊರಿಯಾ ರಾಷ್ಟ್ರಗಳೊಂದಿಗೆ ಮಾಡಿಕೊಂಡಿದೆ.

ಇವೆಲ್ಲಾ ಚೀನಾಕ್ಕೆ ಸೆಡ್ಡುಹೊಡೆಯುತ್ತಿರುವ ರಾಷ್ಟ್ರಗಳೆಂಬುದು ಗಮನಾರ್ಹ, ಈ ಒಪ್ಪಂದಗಳ ಅನುಸಾರವಾಗಿ ತುರ್ತು ಸಂದರ್ಭದಲ್ಲಿ ಸ್ಥಳೀಯ ವಾಯುನೆಲೆ, ನೌಕಾನೆಲೆಗಳ ಬಳಕೆ ಯುದ್ಧ ಹಡಗುಗಳ ನೆರವು, ಯುದ್ಧ ವಿಮಾನಗಳಿಗೆ ಇಂಧನ ಪೂರೈಕೆ ಸೇರಿ ಇತರೆ ರಕ್ಷಣಾ ನೆರವು ಸೇರಿರುತ್ತದೆ.

ಲಡಾಖ್ ಪ್ರದೇಶದಲ್ಲಿ ಚೀನಾ ಸೇನೆ ದಿನದಿಂದ ದಿನಕ್ಕೆ ಸೇನಾ ಜಮಾವಣೆ ಹೆಚ್ಚಿಸುತ್ತಿದೆ. ಇನ್ನೊಂದೆಡೆ ಪಾಕಿಸ್ತಾನ ಸೇರಿ ಇತರೆ ಕೆಲ ರಾಷ್ಟ್ರಗಳಲ್ಲಿ ತನ್ನ ಸೇನೆ ನೆಲೆಯಲ್ಲಿ ನಿರ್ಮಿಸಿಸಿಕೊಂಡಿದೆ. ಏಷ್ಯಾ ಫೆಸಿಫಿಕ್ ವಲಯದಲ್ಲಿ ಪಾರುಪತ್ಯ ಮೆರೆಯಲು ಹವಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಈ ಒಪ್ಪಂದ ಪ್ರಮುಖ ಪಾತ್ರವಹಿಸಲಿದೆ.

English summary
India has signed a mutual logistics support arrangements with Japan, with an eye firmly on china's expansion behaviour in the Indo pacific and beyond.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X