ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಹೊತ್ತಿಗೆ ದೇಶದ ಪ್ರತಿ ಗಲ್ಲಿಗಳಲ್ಲೂ ಜನೌಷಧ ಕೇಂದ್ರ : ಸಚಿವ ಮನ್ಸುಖ್

|
Google Oneindia Kannada News

ನವದೆಹಲಿ, ಮಾರ್ಚ್ 07: ಜನೌಷಧಗಳ ಬಳಕೆಯ ಬಗ್ಗೆ ಅರಿವು ಮೂಡಿಸಲು ಮತ್ತು ಉತ್ತೇಜನ ನೀಡಲು, ದೇಶದಾದ್ಯಂತ 2019ರ ಮಾರ್ಚ್ 7ರಂದು ಜನೌಷಧ ದಿನವಾಗಿ ಆಚರಿಸಲು ಕೇಂದ್ರ ಸರ್ಕಾರ ಆರಂಭಿಸಿದೆ. 2019ರ ಮಾರ್ಚ್ 7ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಾದ್ಯಂತವಿರುವ ಜನೌಷಧ ಕೇಂದ್ರಗಳ ಮಾಲೀಕರು ಮತ್ತು ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ನನಗೆ ಅಧಿಕರಕ್ತದೊತ್ತಡ, ಮಧುಮೇಹ, ಪ್ರೊಸ್ಟೇಟ್ ಸಮಸ್ಯೆ ಇದೆ, ಈ ಮುಂಚೆ ತಿಂಗಳಿಗೆ ಮಾತ್ರೆ, ಔಷಧಕ್ಕೆ 6000 ರು ಖರ್ಚಾಗುತ್ತಿತ್ತು. ಈಗ ಜನ್ ಔಷಧಿ ಮಳಿಗೆಯಿಂದ ಇದೇ ಮಾತ್ರೆಗಳನ್ನು 603ರುಗಳಿಗೆ ಪಡೆದುಕೊಳ್ಳುತ್ತಿದ್ದೇನೆ ಎಂದು ಲಕ್ನೋನಿವಾಸಿ ಅಶೋಕ್ ಮೆಹ್ರಾ ಅವರು ಮೋದಿ ಜತೆ ನಡೆಸಿದ ಸಂವಾದದಲ್ಲಿ ಹೇಳಿದರು. ಇದೇ ರೀತಿ ಅಬ್ದುಲ್ ಅವರು ತಮ್ಮ ವೈದ್ಯಕೀಯ ಖರ್ಚು ವೆಚ್ಚ 400 ರು ನಿಂದ 44 ರುಗೆ ಇಳಿದಿದೆ ಎಂದರು.

ಏನಿದು ಜನೌಷಧ? ಏನಿದರ ಮಹತ್ವ, ಎಲ್ಲೆಲ್ಲಿ ಸಿಗುತ್ತೆ? ಏನಿದು ಜನೌಷಧ? ಏನಿದರ ಮಹತ್ವ, ಎಲ್ಲೆಲ್ಲಿ ಸಿಗುತ್ತೆ?

ಭವಿಷ್ಯದ ಅಭಿವೃದ್ಧಿ ಕ್ರಮಗಳ ಬಗ್ಗೆ ಮಾತನಾಡಿದ ಮಾಂಡವೀಯ ಈ ವೇಗದಲ್ಲಿನ ಪ್ರಗತಿಯೊಂದಿಗೆ 2020ರ ಹೊತ್ತಿಗೆ ದೇಶದ ಎಲ್ಲ ವಿಭಾಗಗಳಲ್ಲೂ ಕನಿಷ್ಠ 1 ಪಿಎಂಬಿಜೆಪಿ ಕೇಂದ್ರ ಹೊಂದಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದರು.

ಬಡ ಜನರು ಕೈಗೆಟಕುವ ದರದ ಗುಣಮಟ್ಟದ ಔಷಧ ದೊರಕದ ಕಾರಣಕ್ಕೆ ಮೃತಪಡಬಾರದು ಎಂಬ ಪ್ರಧಾನಮಂತ್ರಿಯವರ ನಿಲುವನ್ನು ಪ್ರಸ್ತಾಪಿಸಿದ ಮಾಂಡವೀಯ, ಹೆಚ್ಚು ಹೆಚ್ಚು ವೈದ್ಯರು ಜನೌಷಧಗಳನ್ನು ಬರೆದುಕೊಡುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ದೇಶದ 652 ಜಿಲ್ಲೆಗಳಲ್ಲಿ 5050ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕುರಿತು ಜಾಗೃತಿ ಮೂಡಿದೆ ಮತ್ತು ಕೈಗೆಟಕುವ ದರದಲ್ಲಿ ಅತ್ಯುನ್ನತ ಗುಣಮಟ್ಟದ ಔಷಧ ಲಭ್ಯತೆ ದೇಶದಲ್ಲಿ ಹೆಚ್ಚಾಗಿದೆ ಎಂದರು. ಸುಮಾರು 10-15 ಲಕ್ಷ ಜನರು ಪ್ರತಿನಿತ್ಯ ಜನೌಷಧಗಳ ಪ್ರಯೋಜನ ಪಡೆಯುತ್ತಿದ್ದಾರೆ ಮತ್ತು ಮಾರುಕಟ್ಟೆಯಲ್ಲಿ ಜನೌಷಧದ ಪಾಲು ಕಳೆದ ಮೂರು ವರ್ಷಗಳಲ್ಲಿ ಮೂರು ಪಟ್ಟು ವೃದ್ಧಿಸಿದ್ದು, ಶೇ.2ರಿಂದ ಶೇ.7ಕ್ಕೆ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು.

ಆರೋಗ್ಯ ಅಭಿವೃದ್ಧಿಯ ಮಹತ್ವದ ಭಾಗವಾಗಿದೆ

ಆರೋಗ್ಯ ಅಭಿವೃದ್ಧಿಯ ಮಹತ್ವದ ಭಾಗವಾಗಿದ್ದು, ಈ ಸರ್ಕಾರ ಎಲ್ಲರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಆರೈಕೆ ದೊರಕುವುದನ್ನು ಖಾತ್ರಿಪಡಿಸಲು ಆಯುಷ್ಮಾನ್ ಭಾರತ್, ಪಿಎಂ ಬಿಜೆಪಿಯಂಥ ಯೋಜನೆಗಳ ಮೂಲಕ ನಿರಂತರವಾಗಿ ಶ್ರಮಿಸುತ್ತಿದೆ. ಭಾರತದಲ್ಲಿ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರ ಕಿಸೆಯ ವೆಚ್ಚವನ್ನು ತಗ್ಗಿಸುವಲ್ಲಿ ಜನೌಷಧಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಪಿಎಂ ಬಿಜೆಪಿ ಯೋಜನೆ ಶ್ರೀಸಾಮಾನ್ಯರಿಗೆ ಅಂದಾಜು 1000 ಕೋಟಿ ರೂಪಾಯಿಗಳ ಉಳಿತಾಯಕ್ಕೆ ಕಾರಣವಾಗಿದೆ, ಏಕೆಂದರೆ ಈ ಔಷಧಗಳ ದರ ಸರಾಸರಿ ಮಾರುಕಟ್ಟೆ ದರಕ್ಕಿಂತ ಶೇ.50ರಿಂದ ಶೇ.90ರವರೆಗೂ ಅಗ್ಗವಾಗಿದೆ

Array

ಮಾರ್ಚ್ 07, ಜನೌಷಧ ದಿನಾಚರಣೆ

ಜನೌಷಧ ದಿನ ಆಚರಣೆಯ ಭಾಗವಾಗಿ, ಎಲ್ಲ ಪಿಎಂಬಿಜೆಪಿ ಕೇಂದ್ರಗಳಲ್ಲಿ ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಔಷಧ ಇಲಾಖೆ ಕಾರ್ಯದರ್ಶಿ ಜೆ.ಪಿ. ಪ್ರಕಾಶ್ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು. ಈ ಕಾರ್ಯಕ್ರಮಗಳಿಗೆ ವೈದ್ಯರು, ಆರೋಗ್ಯ ತಜ್ಞರು, ಎನ್.ಜಿ.ಓಗಳು ಮತ್ತು ಫಲಾನುಭವಿಗಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ, ಇದು ಸಾಮಾನ್ಯ ಜನರಿಗೆ ಯೋಜನೆಯ ಬಗ್ಗೆ ಅರಿವು ಹೆಚ್ಚಿಸಲು ಸಹಕಾರಿ ಎಂದರು

ಜನೌಷಧ ಕೇಂದ್ರದ ಔಷಧ ತೆಗೆದುಕೊಂಡರೆ ರೋಗಿಗಳೇ ಜವಾಬ್ದಾರರು, ವೈದ್ಯರಲ್ಲ!ಜನೌಷಧ ಕೇಂದ್ರದ ಔಷಧ ತೆಗೆದುಕೊಂಡರೆ ರೋಗಿಗಳೇ ಜವಾಬ್ದಾರರು, ವೈದ್ಯರಲ್ಲ!

ಬೃಹತ್ ಗೋದಾಮುಗಳನ್ನು ತೆರೆಯಲಾಗಿದೆ

ಭಾರತೀಯ ಪಿಎಸ್.ಯು. ಔಷಧ ಶಾಖೆ (ಬಿಪಿಪಿಐ)ಯ ಸಿಇಓ, ಸಚಿಮ್ ಕುಮಾರ್ ಸಿಂಗ್ ಪಿಎಂಬಿಜೆಪಿ, ನಿರಂತರ ಗಳಿಕೆ ಮತ್ತು ಸ್ವಯಂ ಸ್ಥಿರತೆಯಿಂದ ಸ್ವಯಂ ಉದ್ಯೋಗಕ್ಕೆ ಉತ್ತಮ ಮೂಲವನ್ನೂ ಒದಗಿಸುತ್ತಿದೆ ಎಂದರು. ಯೋಜನೆ ಜಾರಿಗೊಳಿಸಿರುವ ಬಿಪಿಪಿಐ ನಡೆಸಿದ ಸಮೀಕ್ಷೆಯ ರೀತ್ಯ ಪ್ರತಿ ತಿಂಗಳು ಪ್ರತಿ ಮಳಿಗೆಯ ಸರಾಸರಿ ಮಾರಾಟ (ಓಟಿಸಿ ಮತ್ತು ಇತರ ಉತ್ಪನ್ನ ಸೇರಿದಂತೆ)ರೂ.1.50 ಲಕ್ಷಕ್ಕೆ ಹೆಚ್ಚಳವಾಗಿದೆ. ಎಲ್ಲ ಪಿಎಂಬಿಜೆಪಿ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಜನೌಷಧದ ಲಭ್ಯತೆಗಾಗಿ ದೆಹಲಿ, ಗುವಾಹಟಿ, ಬೆಂಗಳೂರು, ಚೆನ್ನೈನಲ್ಲಿ ನಾಲ್ಕು ಬೃಹತ್ ಗೋದಾಮುಗಳನ್ನು ತೆರೆಯಲಾಗಿದೆ ಎಂದರು.

Array

ಸಚಿನ್ ಕುಮಾರ್ ಸಿಂಗ್ ಅವರು ಮಾತನಾಡಿ

ಸಚಿನ್ ಕುಮಾರ್ ಸಿಂಗ್ ಅವರು ಮಾತನಾಡಿ, ಈಗಾಗಲೇ ಪಿಎಂಬಿಜೆಪಿ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಲಾಗಿರುವ ಮತ್ತು ಪಿಎಂಬಿಜೆಪಿ ಕೇಂದ್ರಗಳಲ್ಲಿ ಲಭ್ಯವಿರುವ ವಿಸ್ತೃತ ಶ್ರೇಣಿಯ ಕೈಗೆಟಕುವ ದರದ ಗುಣಮಟ್ಟದ ಔಷಧ ಉತ್ಪನ್ನಗಳನ್ನು ಪ್ರದರ್ಶಿಸಿದರು. ಇದರಲ್ಲಿ ಪ್ರತಿ ಪೀಸ್ ಗೆ 2.50 ರೂಪಾಯಿಗೆ ಲಭ್ಯವಾಗುವ ಜನ್ ಔಷಧ ಸುವಿಧಾ ಓಕ್ಸ್ಓ - ಜೈವಿಕವಾಗಿ ನಾಶವಾಗುವ ಸ್ಯಾನಿಟರಿ ನ್ಯಾಪ್ಕಿನ್; 140 ರೂಪಾಯಿಗಳಿಗೆ ದೊರಕುವ 5 ಹಿರಿಯರ ಡೈಪರ್ ನ ಪೊಟ್ಟಣ; 5 ಮಕ್ಕಳ ಡೈಪರ್ ಗಳ ಪೊಟ್ಟಣಕ್ಕೆ ಕೇವಲ 20 ರೂಪಾಯಿಗೆ ಲಭ್ಯವಾಗುವ ಜನೌಷಧ ಬಜ್ಪನ್; 20 ರೂಪಾಯಿಗಳಿಗೆ ಲಭ್ಯವಾಗುವ ಜನೌಷಧಿ ಅಂಕುರ್ ಗರ್ಭಿಣಿಯರ ಪರೀಕ್ಷಾ ಕಿಟ್; ರೂ.35ಕ್ಕೆ ಲಭ್ಯವಾಗುವ 300 ಗ್ರಾಮ್ ಪೊಟ್ಟಣದ ಜನೌಷಧ ಊರ್ಜಾ ಚೈತನ್ಯ ಪೇಯ ಇತ್ಯಾದಿ ಇದರಲ್ಲಿ ಸೇರಿದೆ.

ಬೆಂಗಳೂರಲ್ಲಿ 3 ಜನೌಷಧ ಕೇಂದ್ರ ಆರಂಭಕ್ಕೆ ನೆರವು: ಅನಂತಕುಮಾರ್ಬೆಂಗಳೂರಲ್ಲಿ 3 ಜನೌಷಧ ಕೇಂದ್ರ ಆರಂಭಕ್ಕೆ ನೆರವು: ಅನಂತಕುಮಾರ್

English summary
Creating awareness about use of generic medicines, it has been decided to celebrate 7th March 2019 as ‘JanaushadhiDiwas’ across India. Prime Minister interacted with owners of JanaushadhiKendras and beneficiary of the scheme across the country through video conference on 7th March, 2019. Talking about the future course of development
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X