ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಜನತಾ ಪರಿವಾರ ಉದಯ ಮೋದಿ ಸರ್ಕಾರ ಪತನಕ್ಕಲ್ಲ"

By Mahesh
|
Google Oneindia Kannada News

ಬೆಂಗಳೂರು, ಏ.17: ಹಲವು ದಶಕಗಳ ನಂತರ ಜನತಾ ಪರಿವಾರ ಒಂದಾಗಿ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿರುವುದು ದೇಶದ ರಾಜಕೀಯದಲ್ಲಿ ಒಳ್ಳೆ ಬೆಳವಣಿಗೆಯಾಗಿದೆ. ಭಾನುವಾರ ಪಕ್ಷಗಳ ವಿಲೀನದ ಬಗ್ಗೆ ಅಂತಿಮ ಘೋಷಣೆಯಾಗಲಿದೆ. ಜನತಾ ಪರಿವಾರ ಉದಯವಾಗುತ್ತಿರುವುದು ನರೇಂದ್ರ ಮೋದಿ ಸರ್ಕಾರದ ಪತನ ಮಾಡಲಿಕ್ಕೆ ಅಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಹುಳುಕುಗಳನ್ನು ಜನರ ಮುಂದಿಡಲು ಜನತಾ ಪರಿವಾರ ಮುಂದಾಗಲಿದೆ. ಸಂಸತ್ತಿನ ಒಳಗೂ ಹೊರಗೂ ಈ ಬಗ್ಗೆ ಹೋರಾಟ ಸದಾ ಜಾರಿಯಲ್ಲಿರುತ್ತದೆ.

ರೈತರು, ಶ್ರಮಿಕ ವರ್ಗ, ದಲಿತರ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಲಾಗುವುದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರಿಗೆ ಸರಿಯಾದ ನೆರವು ಸಿಗುತ್ತಿಲ್ಲ. ಮೋದಿ ಅವರು ಅಧಿಕಾರಕ್ಕೆ ಬಂದಾಗ ನೀಡಿದ್ದ ಭರವಸೆಗಳು ಈಡೇರಿಲ್ಲ. ರೈತರ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ ಎಂಬ ದುಃಖ ನನ್ನನ್ನು ಕಾಡುತ್ತಿದೆ ಎಂದು ದೇವೇಗೌಡರು ವ್ಯಥೆ ಪಟ್ಟರು.

Janata Parivar merger not to destabilise Modi Govt: Deve Gowda

ಪಿಟಿಐ ಪ್ರತಿನಿಧಿಯೊಂದಿಗೆ ಮಾತನಾಡಿದ ದೇವೇಗೌಡರು,ಮೋದಿ ಸರ್ಕಾರವನ್ನು ಅಲ್ಲಾಡಿಸಲು ನಾವು ಯಾವುದೇ ರಣತಂತ್ರ ಹೂಡುವುದಿಲ್ಲ. ಸರ್ಕಾರವನ್ನು ಉಳಿಸುವುದು ಬೀಳಿಸುವುದು ಜನರಿಗೆ ಬಿಟ್ಟ ನಿರ್ಧಾರ. ಜನಪರ ಯೋಜನೆಗಳನ್ನು ಕೈಗೊಳ್ಳದ ಸರ್ಕಾರ ತಾನೇ ತಾನಾಗಿ ಕುಸಿಯುತ್ತದೆ. ಭೂ ಸ್ವಾದೀನ ಮಾಡುವ ಹೆಸರಿನಲ್ಲಿ ರೈತರ ಜಮೀನಿಗೆ ಕೈ ಹಾಕಿದರೆ ಮುಂದೆ ಕಷ್ಟ ಅನುಭವಿಸಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಹಗರಣಗಳು ಕಾರಣವಾಗಿದ್ದು ನಿಜ. ಹತ್ತು ಹಲವು ಪಕ್ಷಗಳು ಒಂದಾಗಿ ಒಟ್ಟಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬ ಮಾತು ನಿಜವಲ್ಲ. ಸಮರ್ಥ ನಾಯಕತ್ವವಿದ್ದರೆ ಸಮರ್ಥ ಆಡಳಿತ ಸಾಧ್ಯ. ನಮಗೆ ಮುಲಾಯಂ ಸಿಂಗ್ ಯಾದವ್ ಅವರ ಮೇಲೆ ನಂಬಿಕೆಯಿದೆ.

1989ರ ದಿನಗಳನ್ನು ಮತ್ತೆ ನೆನಪಿಸುವಂತೆ ಜನತಾ ಪರಿವಾರ ಮತ್ತೊಮ್ಮೆ ಪುಟಿದೇಳುವ ಭರವಸೆ ಇದೆ. ಜನರ ವಿಶ್ವಾಸ ಗಳಿಸುವುದು ಮುಖ್ಯ, ಪಕ್ಷದ ಚಿನ್ಹೆ, ಧ್ಯೇಯ, ಬಾವುಟ ಮುಂತಾದವುಗಳ ಬಗ್ಗೆ ಚರ್ಚೆ ಆರಂಭವಾಗಿದ್ದು, ಭಾನುವಾರ ಒಂದು ಹಂತದ ಚರ್ಚೆ ನಡೆಯಲಿದೆ ಎಂದು ಹೇಳಿದರು. (ಪಿಟಿಐ)

English summary
Former Prime Minister and Janata Dal (Secular) supremo HD Deve Gowda on Thursday said the merger of Janata Parivar parties is not to destabilise the Narendra Modi government but to highlight its "failures" to fulfill election promises
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X