ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ಪಕ್ಷಗಳ ವಿಲೀನ, ಜನತಾ ಪರಿವಾರಕ್ಕೆ ಮುಲಾಯಂ ಕಿಂಗ್

By Mahesh
|
Google Oneindia Kannada News

ನವದೆಹಲಿ, ಏ.15: ಹಲವು ವರ್ಷಗಳಿಂದ ದೂರ ದೂರವಿದ್ದ ಜನತಾ ಪರಿವಾರ ಮತ್ತೆ ಒಂದಾಗಿದೆ. ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಹೊಣೆಯನ್ನು ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಅವರಿಗೆ ವಹಿಸಲಾಗಿದೆ. ಆರು ಪಕ್ಷಗಳು ಅಧಿಕೃತವಾಗಿ ವಿಲೀನಕೊಂಡು ಹೊಸ ಜನತಾ ಪರಿವಾರ ನಿರ್ಮಾಣವಾಗಿದೆ.

ಲೋಕಸಭೆ ಚುನಾವಣೆ, ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಜನತಾ ಪರಿವಾರದೊಡನೆ ಗುರುತಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳು ಉತ್ತಮ ಫಲಿತಾಂಶ ಹೊರ ಹಾಕಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸಿ ಮತ್ತೊಮ್ಮೆ ತೃತೀಯರಂಗ ಸ್ಥಾಪನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. [ಜನತಾ ಪರಿವಾರ ಉದಯ]

ರಾಷ್ಟ್ರೀಯ ಜನತಾ ದಳ, ಜನತಾ ದಳ ಸೆಕ್ಯುಲರ್, ಸಮಾಜವಾದಿ ಜನತಾ ಪಕ್ಷ, ಭಾರತೀಯ ರಾಷ್ಟ್ರೀಯ ಲೋಕದಳ, ಸಮಾಜವಾದಿ ಪಕ್ಷ, ಜನತಾದಳ ಯುನೈಟೆಡ್ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್, ಶರದ್ ಯಾದವ್,ಸಮಾಜವಾದಿ ಜನತಾ ಪಕ್ಷದ ಕಮಲ್‌ ಮೊರಾರ್ಕಾ ಐಎನ್‌ಎಲ್‌ಡಿ ಮುಖಂಡ ದುಷ್ಯಂತ ಚೌಟಾಲಾ ಸಭೆಯಲ್ಲಿ ಉಪಸ್ಥಿತರಿದ್ದರು.

Janata Parivar announces merger: Know all about new outfit and it's plan of action

ಮುಲಾಯಂ ಸಿಂಗ್ ಇಸ್ ಲೀಡರ್: ನೂತನ ಪರಿವಾರದ ಮುಂದಾಳತ್ವವನ್ನು ಮುಲಾಯಂ ಸಿಂಗ್ ಯಾದವ್ ವಹಿಸಿಕೊಳ್ಳಲಿದ್ದಾರೆ. ಪಕ್ಷದ ಸಂಸದೀಯ ಸಮಿತಿ ಮುಖ್ಯಸ್ಥರಾಗಿ ಸಂಸತ್ತಿನ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಹೊಸ ಪರಿವಾರಕ್ಕೆ ಏನು ಹೆಸರು?: ಜನತಾ ಪರಿವಾರಕ್ಕೆ ಸಮಾಜವಾದಿ ಜನತಾ ಪಾರ್ಟಿ ಅಥವಾ ಸಮಾಜವಾದಿ ಜನತಾ ದಳ ಎಂಬ ಹೆಸರಿಡುವ ಸಾಧ್ಯತೆ ಇದೆ. ಅಥವಾ ಜನತಾ ಪರಿವಾರ ಎಂಬ ಹೆಸರನ್ನೇ ಮುಂದುವರೆಸುವ ನಿರೀಕ್ಷೆಯೂ ಇದೆ.

ಹೊಸ ಪಕ್ಷಕ್ಕೆ ಸೈಕಲ್ ಚಿನ್ಹೆ?: ಹೊಸ ಪಕ್ಷಕ್ಕೆ ಸಮಾಜವಾದಿ ಪಕ್ಷದ ಚಿನ್ಹೆಯಾದ ಸೈಕಲ್ ಅನ್ನೇ ಬಳಸುವ ಚಿಂತಿಸಲಾಗಿದೆ.ಸಂಸತ್ತಿನಲ್ಲಿ ಎಸ್ ಪಿ 6 ಜನ ಸದಸ್ಯರನ್ನು ಹೊಂದಿದೆ.ಆರ್ ಜೆ ಡಿ ನಾಲ್ಕು ಜೆಡಿಯು,ಜೆಡಿಎಸ್ ಹಾಗೂ ಐಎನ್ ಎಲ್ ಡಿ ತಲಾ 2 ಸಂಸದರನ್ನು ಹೊಂದಿದೆ. ಲೋಕಸಭೆಯಲ್ಲಿ ಜನತಾ ಪರಿವಾರದ ಬಲ 15.

ರಾಜ್ಯಸಭೆಯಲ್ಲಿ ಎಸ್ ಪಿ 15, ಜೆಡಿಯು 12, ಐಎನ್ ಎಲ್ ಡಿ, ಜೆಡಿಎಸ್ ಹಾಗೂ ಆರ್ ಜೆಡಿ ತಲಾ ಒಬ್ಬ ಸದಸ್ಯರನ್ನು ಹೊಂದಿದೆ. ಮೇಲ್ಮನೆಯಲ್ಲಿ ಜನತಾ ಪರಿವಾರದ ಬಲ 30.

ಮುಂದಿನ ಗುರಿ: ಮೋದಿ ಸರ್ಕಾರದ ವಿರುದ್ಧ ಜನ ಜಾಗೃತಿ, ಪ್ರತಿಭಟನೆ, ಹೋರಾಟ. ಬಿಹಾರದ ಚುನಾವಣೆ(ವರ್ಷಾಂತ್ಯಕ್ಕೆ), ಉತ್ತರ ಪ್ರದೇಶದಲ್ಲಿ ಚುನಾವಣೆ(2017).

English summary
Janata Parivar announces merger: The parties which have decided to come along are Janata Dal United (JDU), Rashtriya Janata Dal (RJD), Samajwadi Party (SP), Janata Dai (Secular) (JDS) and Indian National Lok Dal (INLD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X